ಬುಧವಾರ, ಜನವರಿ 22, 2020
28 °C

‘ಕೋಲಿಸಮಾಜ ಒಗ್ಗಟ್ಟಾದರೆ ಎಸ್‌ಟಿಗೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ಸಮಾಜದವರೆಲ್ಲ ಮೊದಲು ಒಗ್ಗಟ್ಟಾಗಬೇಕು. ನಂತರ ಸರ್ಕಾರ ಮಟ್ಟದಲ್ಲಿ ಪ್ರಯತ್ನ ಮಾಡಲಾರಂಭಿ­ಸಿದರೆ, ಸೂಕ್ತ ಸಹಾಯ ಮಾಡುವು­ದಾಗಿ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದರು.ನಗರದ ಕನ್ನಡ ಭವನದಲ್ಲಿ ದಿ. ವಿಠಲ್ ಹೇರೂರ ಅಭಿಮಾನಿ ಬಳಗವು ಭಾನುವಾರ ಏರ್ಪಡಿಸಿದ್ದ ‘ವಿಠಲ ಹೇರೂರ ನಮ್ಮೊಂದಿಗೆ ಇದ್ದಾರೆ’ ನುಡಿನಮನ ಕಾರ್ಯಕ್ರಮವನ್ನು ಉದ್ಘಾ­ಟಿಸಿ ಅವರು ಮಾತನಾಡಿದರು.ರಾಜ್ಯದಲ್ಲಿ ಸುಮಾರು ೬೦ ಲಕ್ಷ ಕೋಲಿ ಜನರಿದ್ದಾರೆ. ಎಸ್‌ಟಿ ಗುಂಪಿಗೆ ಸೇರ್ಪಡೆಗೊಳಿಸಬೇಕು ಎನ್ನುವುದು ಬಹುದಿನಗಳ ಬೇಡಿಕೆ. ವಿಠಲ ಹೇರೂರ ಕೊನೆ ತನಕ ಹೋರಾಡಿದರು. ಆಸ್ಪತ್ರೆ­ಯಲ್ಲೂ ಇದೇ ಮಾತು ಹೇಳಿದ್ದರು ಎಂದು ಸ್ಮರಿಸಿದರು.ಸಚಿವ ಬಾಬುರಾವ ಚಿಂಚನಸೂರ ಹಾಗೂ ತಿಪ್ಪಣಪ್ಪ ಕಮಕನೂರ ಅವರ ನೇತೃತ್ವದಲ್ಲಿ ಒಗ್ಗಟ್ಟಾಗಿ ಹೋರಾಟ ಮಾಡಿ, ಕೇಂದ್ರ ಸರಕಾರದ ಗಮನಕ್ಕೆ ತನ್ನಿ. ತಾವು ಮತ್ತು ಸಂಸದ ಧರ್ಮ­ಸಿಂಗ್ ಅವರು ನೀಡುವುದಾಗಿ ಭರವಸೆ ನೀಡಿದರು.ಸಂಸದ ಧರ್ಮಸಿಂಗ್ ಮಾತನಾಡಿ, ‘ಸೌಲಭ್ಯ ವಂಚಿತ ಕೋಲಿ ಸಮಾಜ­ವನ್ನು ಜಾಗೃತಗೊಳಿಸಿ ಹೋರಾಟ ಮಾಡಿದ ಕೀರ್ತಿ ವಿಠ್ಠಲ್ ಹೇರೂರ ಅವರಿಗೆ ಸಲ್ಲುತ್ತದೆ.ಸಚಿವ ಚಿಂಚನ­ಸೂರ ಮತ್ತು ತಿಪ್ಪಣಪ್ಪ ಕಮಕನೂರ ನೇತೃತ್ವದಲ್ಲಿ ಮತ್ತೆ ಹೋರಾಟ ಮುಂದುವರಿಸಬೇಕು. ಅದಕ್ಕೆ ಬೇಕಾದ ಸಹಾಯ ಮಾಡುವುದಾಗಿ ಹೇಳಿದರು.‘ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸುವುದೆ ನನ್ನ ಏಕೈಕ ಅಂತಿಮ ಗುರಿಯಾಗಿದೆ’ ಎಂದು ಜವಳಿ ಸಚಿವ ಬಾಬುರಾವ ಚಿಂಚನಸೂರ ಹೇಳಿದರು.ಕಾರ್ಯಕ್ರಮ ರೂವಾರಿ ತಿಪ್ಪಣಪ್ಪ ಕಮಕನೂರ ಮಾತನಾಡಿ, ‘ಹೇರೂರ ಅವರ ಕೊನೆ ಆಸೆ ಕೋಲಿ ಸಮಾಜ ಎಸ್‌ಟಿಗೆ ಸೇರಿಸುವ ಕೆಲಸವನ್ನು ಸಚಿವರು ಮಾಡಿಕೊಡಬೇಕು’ ಎಂದರು.ಮಹಾಂತ ಶಿವಾಚಾರ್ಯ, ಶಾಂತವೀರ ಸ್ವಾಮಿ, ಮಲ್ಲಣ್ಣಪ್ಪ ಮುತ್ಯಾ, ಕೆ.ಮುಕುಡಪ್ಪ, ಮಾಜಿ ಶಾಸಕ ಎಂ.ವೈ.ಪಾಟೀಲ್,ಅವಣ್ಣ ಮ್ಯಾಕೇರಿ ಮತ್ತಿತರರು ಮಾತನಾಡಿದರು. ಶಾಸಕರಾದ ಡಾ.ಉಮೇಶ ಜಾಧವ್, ದತ್ತಾತ್ರೇಯ ಪಾಟೀಲ್, ಜಿಪಂ ಸದಸ್ಯ ಸಿದ್ಧಾರ್ಥ ಬಸರಿಗಿಡ, ಬಸವರಾಜ ಸಪ್ಪನಗೋಳ, ಬಾಗಣ್ಣಗೌಡ ಪಾಟೀಲ್,­ಅಂಬಾ­ರಾಯ ಅಷ್ಟಗಿ, ಶಂಕು ಮ್ಯಾಕೇರಿ, ಭೀಮಣ್ಣ ಸಾಲಿ, ಬಸವರಾಜ ಚಿನ್ನ­ಮಳ್ಳಿ, ನಿಂಗಣ್ಣ ಅಲ್ಲುರ್, ಡಾ.ವಿಠಲ್ ದೊಡ್ಡಮನಿ, ಗುರುಶಾಂತ ಪಟ್ಟೇದಾರ್,ಅಣ್ಣಾರಾವ ಸಣ್ಣೂರ­ಕರ್,ಭೀಮಣ್ಣ ಸಾಲಿ, ಬಿ.­ನಾರಾಯಣ, ಅರ್ಜುನ್ ಜಮಾದಾರ, ಜಯಪ್ರಕಾಶ ಕಮಕನೂರ್, ಬಸವ­ರಾಜ ಬೂದಿಹಾಳ್, ಶಾಂತಪ್ಪ ಕೂಡಿ, ರಮೇಶ ನಾಟಿಕಾರ್,ಶಿವಶರಣಪ್ಪ ಕೋಬಾಳ್, ಸಂದೇಶ ಕಮಕನೂರ, ನಾಮದೇವ ಕಡಕೊಳ ಸ್ವಾಗತಿಸಿದರು. ಬಸವರಾಜ ಹರವಾಳ್ ನಿರೂಪಿಸಿದರು.

ಪ್ರತಿಕ್ರಿಯಿಸಿ (+)