ಶನಿವಾರ, ಜೂನ್ 19, 2021
27 °C

‘ಕೌಟುಂಬಿಕ ವಿಷಯ ರಾಜಕೀಯಕ್ಕೆ ತರುವುದಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯಾವುದೇ ಕಾರಣಕ್ಕೂ ಕೌಟುಂಬಿಕ ವಿಷಯಗಳನ್ನು ರಾಜಕೀ­ಯಕ್ಕೆ ತರುವುದಿಲ್ಲ ಎಂದು ಶಿವಮೊಗ್ಗ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್‌ ತಿಳಿಸಿದರು.ಭಾನುವಾರ ಬೆಳಿಗ್ಗೆ ಮಲ್ಲೇಶ್ವರ­ದಲ್ಲಿರುವ ಸರ್ಕಲ್‌ ಮಾರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ತವರು ಮನೆ ಹಾಗೂ ರಾಜ್‌ ಕುಟುಂಬಕ್ಕೆ ಸಂಬಂಧಿಸಿದ ವಿಷಯ­ಗಳನ್ನು ರಾಜಕೀಯಕ್ಕೆ ತರುವುದಿಲ್ಲ ಎಂದು ಸ್ಪಷ್ಟಪಡಿಸಿದರು.ತಂದೆ ಬಂಗಾರಪ್ಪ, ಮಾವ ಡಾ.ರಾಜ್‌ಕುಮಾರ್‌ ಹಾಗೂ ಪತಿ ಶಿವರಾಜ್‌ ಕುಮಾರ್‌ ಅವರ ಹೆಸರಿನಲ್ಲಿ ಮತ ಯಾಚಿಸುತ್ತೀರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಸಾಧನೆ ಮಾಡಿದ್ದಾರೆ. ತಂದೆ, ಮಾವ ಹಾಗೂ ಪತಿ ಹೆಸರಿನಲ್ಲಿ ಮತ ಕೇಳಿದರೆ ತಪ್ಪೇನಿದೆ’ ಎಂದು ತಿಳಿಸಿದರು.ನಂತರ ಮಾತನಾಡಿದ ನಟ ಶಿವರಾಜ್‌ ಕುಮಾರ್‌, ‘ಎಲ್ಲ ಕುಟುಂಬಗಳಲ್ಲೂ ಸಣ್ಣಪುಟ್ಟ ಸಮಸ್ಯೆಗಳಿರುತ್ತವೆ. ಈ ಬಗ್ಗೆ ಮಾತನಾಡಿ ಸಮಸ್ಯೆಗಳನ್ನು ದೊಡ್ಡದು ಮಾಡುವುದು ಸರಿಯಲ್ಲ. ನಮ್ಮದು ದೊಡ್ಡ ಕುಟುಂಬ. ಕೌಟುಂಬಿಕ ವಿಷಯಗಳನ್ನು ಕುಟುಂಬಕ್ಕೆ ಸೀಮಿತವಾಗಿರಲು ಬಿಡಿ. ನಾನು ಈ ಬಗ್ಗೆ ಯಾವ ಪ್ರತಿಕ್ರಿಯೆಯೂ ನೀಡುವುದಿಲ್ಲ’ ಎಂದರು.‘ಪತ್ನಿ ಗೀತಾ ನಾಮಪತ್ರ ಸಲ್ಲಿಸಿದ ಮೇಲೆ ಒಂದು ವಾರ ಕಾಲ ನಾನು ಚಿತ್ರೀಕರಣದಲ್ಲಿ ನಿರತನಾಗಿರುತ್ತೇನೆ. ನಂತರ ಪತ್ನಿಯೊಂದಿಗೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗುತ್ತೇನೆ’ ಎಂದು ತಿಳಿಸಿದರು.ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್‌ಕುಮಾರ್‌ ಸಮಾಧಿಗೂ ಅವರು ಪೂಜೆ ಸಲ್ಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.