‘ಕ್ರಿಯಾಶೀಲ ವ್ಯಕ್ತಿತ್ವದಿಂದ ನಾಯಕತ್ವ’

7

‘ಕ್ರಿಯಾಶೀಲ ವ್ಯಕ್ತಿತ್ವದಿಂದ ನಾಯಕತ್ವ’

Published:
Updated:

ಹಾನಗಲ್‌::  ‘ಸಾಮಾಜಿಕ ಜೀವನದಲ್ಲಿ ಸವಾಲುಗಳನ್ನು ನಿಭಾಯಿಸಿಕೊಂಡು, ಕ್ರಿಯಾಶೀಲ ವ್ಯಕ್ತಿತ್ವ ರೂಢಿಕೊಂಡಾಗ ಸಮರ್ಥ ನಾಯಕತ್ವ ಒಲಿಯುತ್ತದೆ’ ಎಂದು ಮಾಜಿ ಸಚಿವ ಸಿ,ಎಂ.ಉದಾಸಿ ಹೇಳಿದರು.ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮ ದಲ್ಲಿ ನಡೆದ ಜಿ.ಪಂ. ಸದಸ್ಯ ಪದ್ಮನಾಭ ಕುಂದಾಪೂರ ಷಷ್ಟ್ಯಬ್ದಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ದರು. ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಪದ್ಮನಾಭ ಕುಂದಾ ಪೂರ ಉದಾಸಿ ಅವರ ಗರಡಿಯಲ್ಲಿ ಪಳಗಿದ ಪ್ರಾಮಾಣಿಕ ಚಿಂತಕ’ ಎಂದರು.ಬೊಮ್ಮನಹಳ್ಳಿ ಗುರುಪಾದೇಶ್ವರ ವಿರಕ್ತಮಠದ ಶಿವಯೀಗೀಶ್ವರ ಶ್ರೀಗಳು ಸಾನಿಧ್ಯ ವಹಿಸಿ ಆರ್ಶೀವರ್ಚನ ನೀಡಿದರು. ಪದ್ಮನಾಭ ಕುಂದಾಪೂರ ಅಭಿ ಮಾನಿಗಳಿಂದ ಕುಂದಾಪೂರ ದಂಪತಿ ಯನ್ನು ಸನ್ಮಾನಿಸಲಾಯಿತು.

ವಿಧಾನ ಪರಿಷತ್‌ ಸದಸ್ಯ ಸೋಮಣ್ಣ ಬೇವಿನ ಮರದ, ಮಾಜಿ ಸದಸ್ಯ ಶಿವರಾಜ ಸಜ್ಜನರ, ಜಿಪಂ ಅಧ್ಯಕ್ಷೆ ಗೀತಾ ಅಂಕಸಖಾನಿ, ಮಾಜಿ ಅಧ್ಯಕ್ಷ ಶಂಕ್ರಣ್ಣ ಮಾತನವರ, ಮಂಜುನಾಥ ಓಲೇ ಕಾರ, ರಾಮಲಿಂಗಣ್ಣನವರ, ಎ.ಎಸ್‌. ಬಳ್ಳಾರಿ, ಬಿ.ಎಸ್‌.ಅಕ್ಕಿವಳ್ಳಿ, ಎಂ.ಆರ್‌. ಪಾಟೀಲ, ಎಂ.ಬಿ.ಕಲಾಲ, ವೈ.ಎಫ್‌. ಕಿತ್ತೂರ, ರಾಜೇಂದ್ರ ಹಾವೇರಣ್ಣನವರ, ಅಭಿದಾಬಿ ನದಾಫ, ಮಹದೇವಪ್ಪ ಬಾಗಸರ, ಬಸವರಾಜ ಹಾದಿಮನಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry