‘ಕ್ರೀಡೆಗಳಿಂದ ನೆಮ್ಮದಿ ಸಾಧ್ಯ’

7

‘ಕ್ರೀಡೆಗಳಿಂದ ನೆಮ್ಮದಿ ಸಾಧ್ಯ’

Published:
Updated:

ಯಾದಗಿರಿ: ಕ್ರೀಡೆಗಳು ಮನುಷ್ಯರಿಗೆ ಮಾನಸಿಕ ನೆಮ್ಮದಿ ಸಿಗುವುದರ ಜೊತೆ ಆರೋಗ್ಯವಂತರನ್ನಾಗಿ ಮಾಡುತ್ತವೆ. ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವ ಹಿಸಬೇಕು ಎಂದು ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಸಿದ್ದಣ್ಣಗೌಡ ಕಾಡಂ ನೋರ ಹೇಳಿದರು.ಎಳ್ಳಮಾವಾಸ್ಯೆಯ ಅಂಗವಾಗಿ ಸಮೀಪದ ವಡಗೇರಾದ ಕಂಬಾರಾ ಯನ ಗುಡಿ ಹತ್ತಿರ ವಾಲ್ಮೀಕಿ ಯುವ ಸಂಘ ಹಮ್ಮಿಕೊಂಡಿದ್ದ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ಆಧುನಿಕ ಯುಗದಲ್ಲಿಯು ಸಹ ಹಬ್ಬ ಹರಿ ದಿನಗಳ ಸಮಯದಲ್ಲಿ ಮನರಂಜನೆಯ ಕಾರ್ಯಕ್ರಮ ಹಮ್ಮಿ ಕೊಂಡು, ಗ್ರಾಮಿಣ ಯುವಕ ರಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿ ಸುವ ಕಾರ್ಯ ಮಾಡುತ್ತಿರುವ ವಾಲ್ಮೀಕಿ ಯುವ ಸಂಘದ ಕಾರ್ಯ ಶ್ಲಾಘನೀಯ ಎಂದರು.ಸಮಾಜದ ಮುಖಂಡ ಬಸವರಾಜ ನೀಲಹಳ್ಳಿ ಮಾತನಾಡಿದರು. ಸಮಾರಂಭದಲ್ಲಿ ತಾಲ್ಲೂಕು ಪಂಚಾ­ಯಿತಿ ಸದಸ್ಯ ಮಲ್ಲಣ್ಣ ಇಟಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಧ್ಯಕ್ಷೆ ಕಾಶಮ್ಮ ಪಿಡ್ಡೆಗೌಡರ, ಸದಸ್ಯ ತಿರು­ಕಯ್ಯ ಬುಸೆನ್, ಬ್ಲಾಕ್‌ ಕಾಂಗ್ರೆಸ್‌ ಪರಿಶಿಷ್ಟ ಪಂಗಡದ ಘಟಕದ ಗ್ರಾಮೀಣ ಅಧ್ಯಕ್ಷ ಯಂಕಣ್ಣ ಬಸಂತಪೂರ, ವಾಲ್ಮೀಕಿ ಯುವ ಸಂಘದ ಅಧ್ಯಕ್ಷ ಗೋವಿಂದ ದೊರಿ, ಶಿವಲಿಂಗಪ್ಪ ಪಿಡ್ಡೆ­ಗೌಡ, ಕರವೇ ಹೋಬಳಿ ಘಟಕದ ಅಧ್ಯಕ್ಷ ಶಿವುಕುಮಾರ ಕೊಂಕಲ್, ಕೆಎಂಸಿ ಅಧ್ಯಕ್ಷ ಮಹ್ಮದ್‌ ಖುರೇಶಿ, ರವಿ ನೀಲಹಳ್ಳಿ, ಸಣ್ಣ ಸಾಬರಡ್ಡಿ , ಭೀಮಶಪ್ಪ ಕೋಮಾರ, ಮಲ್ಲು ಬೋಪ್, ಶಿವರಾಜ ಯಡ್ಡಹಳ್ಳಿ, ಮಲ್ಲು ಕೊಪ್ಪುರ, ಹಾಗೂ ಸಂಘದ ಸದಸ್ಯರು ಹಾಜರಿದ್ದರು.ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಪಡೆದ ರಂಗಂಪೇಟ್‌ ತಂಡಕ್ಕೆ ರೂ. 5,001, ವಾಲಿಬಾಲ್‌ನಲ್ಲಿ ಪ್ರಥಮ ಸ್ಥಾನ ಪಡೆದ ವಡಗೇರಾದ ಎಸ್.ಯು.ಕೆ ತಂಡಕ್ಕೆ ರೂ. 5,001, ಭಾರ ಎತ್ತು ಸ್ಪರ್ಧೆಯಲ್ಲಿ ಹಾಗೂ ಕೈ ಕುಸ್ತಿಯಲ್ಲಿ ಕೊಂಕಲ್ ಗ್ರಾಮದವರು ಬೆಳ್ಳಿ ಕಡಗ­ವನ್ನು ಬಹುಮಾನವಾಗಿ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry