ಶುಕ್ರವಾರ, ಫೆಬ್ರವರಿ 26, 2021
22 °C

‘ಕ್ವೀನ್’ ತೆಲುಗು, ತಮಿಳಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕ್ವೀನ್’ ತೆಲುಗು, ತಮಿಳಿಗೆ

ಮಹತ್ವಾಕಾಂಕ್ಷಿ ಹುಡುಗಿಯೊಬ್ಬಳು ಒಂಟಿಯಾಗಿ ಹನಿಮೂನ್‌ಗೆ ಹೋಗಿ, ತನ್ನದೇ ಭಾವುಕ ಜಗತ್ತನ್ನು ಕಟ್ಟಿಕೊಳ್ಳುವ ‘ಕ್ವೀನ್‌’ ಹಿಂದಿ ಚಿತ್ರ ತೆಲುಗು, ತಮಿಳಿನಲ್ಲಿ ರೀಮೇಕ್‌ ಆಗಲಿದೆ. ರೀಮೇಕ್‌ ಹಕ್ಕುಗಳು ಆ ಭಾಷೆಗಳಿಗೆ ಮಾರಾಟವಾದ ಸಂಗತಿಯನ್ನು ಮೂಲ ಚಿತ್ರದ ನಿರ್ದೇಶಕ ವಿಕಾಸ್‌ ಬಹಲ್‌ ಸ್ಪಷ್ಟಪಡಿಸಿದರು. ಆದರೆ ಚಿತ್ರದ ಹಕ್ಕನ್ನು ಯಾರು ಪಡೆದಿದ್ದಾರೆ ಎಂಬ ವಿವರಗಳನ್ನು ಅವರು ಕೊಟ್ಟಿಲ್ಲ.ಕಂಗನಾ ರನೋಟ್ ಅಭಿನಯದ ‘ಕ್ವೀನ್’ ಚಿತ್ರವು ವಿಮರ್ಶಕರು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಬಾಕ್ಸಾಫೀಸ್‌ನಲ್ಲೂ ಗೆಲುವು ಸಾಧಿಸಿತು. ಚೀನಾದಲ್ಲಿ ಅದು ರೀಮೇಕ್‌ ಆಗಲಿದೆ ಎಂಬ ಸುದ್ದಿ ಮೊದಲು ಗಮನ ಸೆಳೆದಿತ್ತು. ಈಗ ತೆಲುಗು, ತಮಿಳಿನ ಸರದಿ.

‘ಜಗತ್ತಿನ ಎಲ್ಲಾ ಮೂಲೆಯಲ್ಲೂ ರಾಣಿ ಪಾತ್ರದ ಮನಸ್ಥಿತಿಯ ಹೆಣ್ಣುಮಕ್ಕಳಿದ್ದಾರೆ. ಹಾಗಾಗಿ ಇದು ವಿಶ್ವದ ಯಾವುದೇ ಸಂಸ್ಕೃತಿಗೆ ಹೊಂದಿಸಬಹುದಾದ ಸಿನಿಮಾ. ಬುಸಾನ್‌ ಚಿತ್ರೋತ್ಸವದಲ್ಲಿ ನಮ್ಮ ಚಿತ್ರವನ್ನು ನೋಡಿದವರು ಇದು ಕೊರಿಯಾ ಭಾಷೆಯ ಚಿತ್ರವೇ ಎಂದು ಕೇಳಿದ್ದರು.ಈ ಚಿತ್ರದ ವಸ್ತುವಿಗೆ ಭಾಷೆ ತುಂಬಾ ಮುಖ್ಯವಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ. ಬೇರೆ ಭಾಷೆಯ ನಿರ್ಮಾಪಕರು ಈ ಸಿನಿಮಾದ ರೀಮೇಕ್‌ ಹಕ್ಕು ಕೇಳಿದಾಗ, ನಾವು ಹೆಚ್ಚು ತಕರಾರಿಲ್ಲದೆ ಅನುಮತಿ ಕೊಟ್ಟಿದ್ದೇವೆ. ಒಂದು ವಿಧದಲ್ಲಿ ಇದು ನಮ್ಮ ಚಿತ್ರಕ್ಕೆ ಸಂದ ಗೆಲುವು’ ಎಂದು ವಿಕಾಸ್‌ ಪ್ರತಿಕ್ರಿಯಿಸಿದರು. ಕಂಗನಾ ಅಲ್ಲದೆ ರಾಜ್‌ಕುಮಾರ್‌ ಯಾದವ್‌ ಹಾಗೂ ಲೀಸಾ ಹೇಡನ್‌ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದ ಚಿತ್ರ ‘ಕ್ವೀನ್‌’ ಜನಮೆಚ್ಚುಗೆಗೆ ಗಳಿಸಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.