ಶುಕ್ರವಾರ, ಜನವರಿ 24, 2020
21 °C

‘ಕ್ಷೇತ್ರದಿಂದ ದೊರೆಯುವ ಎಲ್ಲ ವಸ್ತುಗಳೂ ಪ್ರಸಾದ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬದಿಯಡ್ಕ: ‘ದೇವರಿಗೆ ಅರ್ಪಿಸಿದ ಪ್ರತಿಯೊಂದು ವಸ್ತು­ವೂ ಕೂಡಾ ಪ್ರಸಾದ ರೂಪದಲ್ಲಿ ಭಕ್ತರಿಗೆ ಮರಳಿ ದೊರೆಯುತ್ತದೆ. ಕ್ಷೇತ್ರದಿಂದ ದೊರೆಯುವ ಯಾವುದೇ ವಸ್ತುಗಳಾದರೂ ಕೂಡಾ ಅವುಗಳು ದೇವರ ಪ್ರಸಾದಕ್ಕೆ ಸಮನಾಗಿದೆ. ಕ್ಷೇತ್ರದ ಪ್ರಗತಿಯು ಪ್ರಾದೇಶಿಕ ಭಕ್ತ ಸಮೂಹದ ಶ್ರಮವನ್ನು ಆಧರಿಸಿದೆ’ ಎಂದು ಎಡನೀರು ಕೇಶವಾನಂದ ಸ್ವಾಮೀಜಿ ಹೇಳಿ­ದರು.ಅವರು ಬದಿಯಡ್ಕ ಸಮೀಪದ ಪೆರಡಾಲದ ಉದನೇಶ್ವರ ಕ್ಷೇತ್ರದಲ್ಲಿ ನಿರ್ಮಿಸಿದ ಶಾಶ್ವತ ಮೇಲ್ಛಾವಣಿಯನ್ನು ಲೋಕಾರ್ಪಣೆ ಮಾಡಿ ಮಾತ­ನಾಡಿದರು. ಕ್ಷೇತ್ರದ ನೂತನ ಜಾಲತಾಣವನ್ನು ಉದ್ಘಾಟಿಸಲಾಯಿತು. ಉದ್ಯಮಿ ಸುರೇಶ್‌ ಕಾಸರಗೋಡು ಉಪಸ್ಥಿತ­ರಿದ್ದರು. ವಕೀಲ ಐ.ವಿ ಭಟ್‌ ಸ್ವಾಗತಿಸಿದರು. ಕ್ಷೇತ್ರದ ಆಡಳಿತ ಮುಕ್ತೇಸರ ಪಂಜಿತ್ತಡ್ಕ ಟಿ.ಕೆ. ನಾರಾಯಣ ಭಟ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೆರ­ಡಾಲ­ಗುತ್ತು ಚಂದ್ರಹಾಸ ರೈ ವಂದಿಸಿದರು. ಉದಯ­ಶಂಕರ ಪಟ್ಟಾಜೆ ನಿರ್ವಹಿಸಿದರು.ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರಾದ ವೆಂಕಟೇಶ್ವರ ಭಟ್‌ ಪಟ್ಟಾಜೆ, ಪಿ.ಕೆ ನಾರಾಯಣ ಭಟ್‌, ರಘುರಾಮ ಆಳ್ವ ಪಳ್ಳತ್ತಡ್ಕ, ಶ್ಯಾಮ್‌ ಪ್ರಸಾದ ಸರಳಿ, ಪ್ರಸಾದ್‌ ಮೈರ್ಕಳ ಮೊದಲಾದ­ವರು ಭಾಗವಹಿಸಿದ್ದರು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ತುಲಾ­ಭಾರ ಸೇವೆ ಹಾಗೂ ಅನ್ನ­ಸಂತರ್ಪಣೆ ನಡೆಯಿತು. ಕುಮಾರಿ ಹೇಮಶ್ರೀ ಹಾಗೂ ವಾಣಿಶ್ರೀ ಕಾಕುಂಜೆ ಇವರಿಂದ ಶಾಸ್ತ್ರೀಯ ಸಂಗೀತ ನಡೆಯಿತು. ಅಪ­ರಾಹ್ನ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಸದಸ್ಯರಿಂದ ಬಾಯಾರು ಸೂರ್ಯ­ನಾರಾಯಣ ಪದಕಣ್ಣಾಯರ ನಿರ್ದೇಶನ­ದಲ್ಲಿ ‘ಅಂಧಕಾಸುರ ಮೋಕ್ಷ’ ಯಕ್ಷಗಾನ ಪ್ರದರ್ಶನ ನಡೆಯಿತು.

ಪ್ರತಿಕ್ರಿಯಿಸಿ (+)