‘ಖಾಸಗಿ ಶಾಲೆಗಳ ರಾಷ್ಟ್ರೀಕರಣ ಆಗಲಿ’

7

‘ಖಾಸಗಿ ಶಾಲೆಗಳ ರಾಷ್ಟ್ರೀಕರಣ ಆಗಲಿ’

Published:
Updated:

ಕನಕಪುರ: ಸರ್ಕಾರ ಖಾಸಗಿ ಶಾಲೆ ಗಳನ್ನು ರಾಷ್ಟ್ರೀಕರಣಗೊಳಿಸಿ, ಸಮಾನ ಶಾಲಾ ಶಿಕ್ಷಣವನ್ನು ರೂಪಿಸಲು ಮುಂದಾದರೆ ಅದು ಸ್ವಾಗತಾರ್ಹ ಸಂಗತಿ ಎಂದು ಸಮಾನ ಶಾಲಾ ಶಿಕ್ಷಣಕ್ಕಾಗಿ ನಾಗರೀಕ ವೇದಿಕೆಯ ಅಭಿಪ್ರಾಯಪಟ್ಟಿತು.ಪಟ್ಟಣದ ರೋಟರಿ ಭವನದಲ್ಲಿ ಮಹಿಳಾ ಶಕ್ತಿ ಸಂಘಟಿಸಿದ್ದ ಸಮಾನ ಶಿಕ್ಷಣಕ್ಕಾಗಿ ನಾಗರಿಕ ವೇದಿಕೆ ಸಮಾ ಲೋಚನೆ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಗತಿಪರ ರೈತರು, ದಲಿತಪರ, ಕನ್ನಡಪರ ಹಾಗೂ ಮಹಿಳಾ ಸಂಘ ಸಂಸ್ಥೆಯ ಪ್ರತಿನಿಧಿಗಳು, ಸಾಹಿತಿಗಳು, ಉಪನ್ಯಾಸಕರು ಸಮಾನ ಶಿಕ್ಷಣದ ಬಗ್ಗೆ ಚರ್ಚೆ ನಡೆಸಿದರು.ಸಂವಿಧಾನದ ಆಶಯದಂತೆ ಸಮಾನ ಶಿಕ್ಷಣವನ್ನು ರಾಜ್ಯ ಸರ್ಕಾರ ಜಾರಿಗೊಳಿಸಿಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಸಚಿವರು ನೀಡಿರುವ ಹೇಳಿಕೆ ಆಶಾ ದಾಯಕವಾಗಿದ್ದು ಸಮಾನ ಶಾಲಾ ಶಿಕ್ಷಣ ಶೀಘ್ರವಾಗಿ ಜಾರಿಗೆ ಬರಲಿ’ ಎಂದು ವೇದಿಕೆಯ ಸದಸ್ಯರು ಸರ್ಕಾರ ವನ್ನು ಒತ್ತಾಯಿಸಿದರು.ರಾಜ್ಯ ರೈತ ಸಂಘದ ಮುಖಂಡ ಕೆ.ಬಿ.ನಾಗರಾಜು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವೇದಿಕೆ ಸಂಚಾಲಕಿ ನಾಗರತ್ನ ಬಂಜಗೆರೆ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು.ಸಲಹಾ ಮಂಡಳಿ ಸದಸ್ಯೆ ಅನು ಸೂಯಮ್ಮ, ಕರವೇ ಕಬ್ಬಾಳೇಗೌಡ, ಅಂದಾನಿಗೌಡ, ಬಿ.ಎಸ್.ಪಿ.ಮುಖಂಡ ಮಲ್ಲಿಕಾರ್ಜುನ್, ಜಯ ಕರ್ನಾಟಕ ಸಂಘಟನೆಯ ಕೆ.ವಿ. ಆನಂದ್, ಬಿಳಿ ದಾಳೆ ವಿಜಯ ಕುಮಾರ್, ಕೋಟೆ ಕುಮಾರ್, ರಾಂಪುರ ನಾಗೇಶ್, ಹೊಳಸಾಲಯ್ಯ, ಚೆನ್ನರಾಜು, ರಘು ರಾಮ್, ಕೂ.ಗಿ. ಗಿರಿಯಪ್ಪ, ಮರಳ ವಾಡಿ ಉಮಾ ಶಂಕರ್‌ಇತರರು ಸಭೆಯಲ್ಲಿ ಸಲಹೆ ಸೂಚನೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry