ಗುರುವಾರ , ಜೂನ್ 24, 2021
27 °C

‘ಗಾಣಿಗ ಸಮುದಾಯಕ್ಕೆ ಶೀಘ್ರವೇ ಜಾಗ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು:  ‘ಸಮುದಾಯ ಭವನ ನಿರ್ಮಿಸಲು ಹಾಗೂ ಇನ್ನಿತರ ಉಪಯೋಗಗಳಿಗೆ ಗಾಣಿಗ ಸಮುದಾಯಕ್ಕೆ ನಂಜನಗೂಡಿನಲ್ಲಿ ಜಾಗವನ್ನು ನೀಡಲಾಗುವುದು’ ಎಂದು ಕಂದಾಯ ಸಚಿವ ವಿ. ಶ್ರೀನಿವಾಸ್‌ಪ್ರಸಾದ್ ಭರವಸೆ ನೀಡಿದರು.ಜ್ಯೋತಿಪಣ ಯುವಜನ ಸಂಘವು ಇಲ್ಲಿನ ಗಾಣಿಗರ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ ಏರ್ಪಡಿಸಿದ್ದ ‘ಶಂಕುಸ್ಥಾಪನೆ ಹಾಗೂ ಅಭಿನಂದನಾ ಸಮಾರಂಭ’ದಲ್ಲಿ ಅವರು ಮಾತನಾಡಿದರು.‘ಈಗಾಗಲೇ ನಂಜನಗೂಡಿನಲ್ಲಿ ಕಂದಾಯ ಇಲಾಖೆಗೆ ಸೇರಿದ ಭೂಮಿಯನ್ನು ಬಹುತೇಕ ಹಿಂದುಳಿದ ವರ್ಗಗಳಿಗೆ ನೀಡಲಾಗಿದೆ.  ಗಾಣಿಗ ಸಮುದಾಯಕ್ಕೂ ಜಾಗವನ್ನು ಗುರುತಿಸಿ ನೀಡುವುದಕ್ಕೆ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ತಿಳಿಸಿದರು.1993ರಲ್ಲಿ ಸಂಸದರ ನಿಧಿಯನ್ನು ಮೊದಲ ಬಾರಿಗೆ ತರುವುದಕ್ಕೆ ಪಟ್ಟ ಶ್ರಮವನ್ನು ಎಳೆ ಎಳೆಯಾಗಿ ಬಿಡಿಸಿಟ್ಟ ಅವರು ‘ಹಿಂದುಳಿದ ವರ್ಗದವರು ಮುಂದೆ ಬರಬೇಕಾದರೆ ಶಿಕ್ಷಣ ಅತ್ಯವಶ್ಯಕ’ ಎಂದು ಅಭಿಪ್ರಾಯಪಟ್ಟರು.‘ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ ಮಾತನಾಡಿ, ‘ಸರ್ಕಾರ ಹಿಂದುಳಿದವರ ಪರ ಇದೆ. ಇದರ ಪ್ರಯೋಜನವನ್ನು ಹಿಂದುಳಿದ ವರ್ಗದವರು ಪಡೆಯಬೇಕು. ಸಂಘಸಂಸ್ಥೆಗಳು ಸುಮ್ಮನೆ ಕುಳಿತರೆ ಏನೂ ಆಗುವುದಿಲ್ಲ’ ಎಂದು ತಿಳಿಸಿದರು.ಶಾಸಕ ಸಿ.ಎಚ್. ವಿಜಯಶಂಕರ್ ನೂತನ ಕೊಠಡಿಗಳನ್ನು ಉದ್ಘಾಟಿಸಿದರು. ಸಂಸದ ಎಚ್. ವಿಶ್ವನಾಥ್ ಹಾಗೂ ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ ಹೆಚ್ಚುವರಿ ಕೊಠಡಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.  ಶಾಸಕ ವಾಸು, ಮಾಜಿ ಮೇಯರ್ ಅನಂತು, ಪಾಲಿಕೆ ಸದಸ್ಯ ಆರ್. ಲಿಂಗಪ್ಪ, ಜ್ಯೋತಿಪಣ ಯುವಜನ ಸಂಘದ ಅಧ್ಯಕ್ಷ   ಕೆ.ಆರ್. ಚನ್ನಕೇಶವ ಶೆಟ್ಟರು ಹಾಗೂ ಇತರ ಮುಖಂಡರು ಹಾಜರಿದ್ದರು.ಪರಸ್ಪರ ಹೊಗಳಿಕೆ

‘ಶ್ರೀನಿವಾಸ ಪ್ರಸಾದ್ ಒಬ್ಬ ಮಹಾನ್ ನಾಯಕ’ ಎಂದು ಕರೆದ ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ ‘ಒಂದು ವೇಳೆ ಅವರು ಲೋಕಸಭೆಗೆ ಹೋಗದೇ ಇದ್ದಿದ್ದರೆ ರಾಜ್ಯದ ಮೊದಲ ದಲಿತ ಮುಖ್ಯಮಂತ್ರಿಯಾಗುತ್ತಿದ್ದರು’ ಎಂದು ಅಭಿಪ್ರಾಯಪಟ್ಟರು.

‘ಹಾವನೂರರ ನಂತರ ಹಿಂದುಳಿದ ವರ್ಗದವರ ಕುರಿತು ಹೆಚ್ಚು ಆಳವಾದ ಜ್ಞಾನವನ್ನು ಹೊಂದಿರುವವರು ಬಿ.ಜೆ. ಪುಟ್ಟಸ್ವಾಮಿ’ ಎಂದು ಶ್ರೀನಿವಾಸ್‌ ಪ್ರಸಾದ್ ತಮ್ಮ ಭಾಷಣದಲ್ಲಿ ಪುಟ್ಟಸ್ವಾಮಿ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.