ಗುರುವಾರ , ಮಾರ್ಚ್ 4, 2021
30 °C

‘ಗಾಸಿಪ್‌ ಚಿತ್ರೋದ್ಯಮದ ಒಂದು ಭಾಗ’

ಸಂದರ್ಶನ: ರಮೇಶ ಕೆ. Updated:

ಅಕ್ಷರ ಗಾತ್ರ : | |

‘ಗಾಸಿಪ್‌ ಚಿತ್ರೋದ್ಯಮದ ಒಂದು ಭಾಗ’

ನಟಿ ಶುಭಾ ಪೂಂಜಾ ಚಿತ್ರರಂಗಕ್ಕೆ ಬಂದ ಒಂದು ದಶಕದಲ್ಲಿ ಸಾಕಷ್ಟು ಏಳುಬೀಳು ಕಂಡವರು. ಪರಭಾಷೆ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡವರು. ‘ಮೊಗ್ಗಿನ ಮನಸ್ಸು’ ಚಿತ್ರದ ಅಮೋಘ ಅಭಿನಯಕ್ಕೆ ಉತ್ತಮ ಪೋಷಕ ನಟಿ ಫಿಲ್ಮ್‌ ಫೇರ್ ಪ್ರಶಸ್ತಿ ಮುಡಿಗೇರಿಸಿಕೊಂಡವರು. ‘ಚಂಡ’, ‘ಸ್ಲಂ ಬಾಲ’, ‘ಪರಾರಿ’, ‘ಕೋಟಿಗೊಂದ್‌ ಲವ್‌ ಸ್ಟೋರಿ’ ಹಾಗೂ ಇತ್ತೀಚಿಗೆ ಬಿಡುಗಡೆಯಾದ ‘ತರ್ಲೆನನ್ಮಕ್ಳು’  ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಶರಣ್‌ ಜೊತೆಯಾಗಿ ‘ಜೈ ಮಾರುತಿ 800’,  ಹಾಗೂ ತಮಿಳಿನ ‘ಮಾತಂಗಿ’ ಚಿತ್ರಗಳು ಚಿತ್ರೀಕರಣ ನಡೆಯುತ್ತಿವೆ. ಮಂಗಳೂರು ಮೂಲದ ಶುಭಾ ಪೂಂಜಾ ತಮ್ಮ ಸಿನಿಮಾ ಪ್ರೀತಿಯನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

* ‘ತರ್ಲೆನನ್ಮಕ್ಳು’ ಚಿತ್ರದ ನಂತರ ಯಾವ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೀರಾ?

ಶರಣ್‌ಗೆ ಜೊತೆಯಾಗಿ ‘ಜೈ ಮಾರುತಿ 800’ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಇಲ್ಲಿ ಬಜಾರಿ ಪಾತ್ರವಲ್ಲ, ಕ್ಯೂಟ್ಆದ, ಬೋಲ್ಡ್‌ ಆಗಿ ಮಾತನಾಡುವ ಗೌಡ್ರು ಮನೆಯ ಹುಡುಗಿಯಾಗಿದ್ದೇನೆ. ‘ಸಿಗಂದೂರು  ಚೌಡೇಶ್ವರಿ ಮಹಿಮೆ’ ಚಿತ್ರೀಕರಣ ಮುಗಿದಿದೆ, ದೇವಿಯ ಭಕ್ತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಮೊದಲಿನಿಂದಲೂ ನಾನು ಸಿಗಂದೂರು ಚೌಡೇಶ್ವರಿ ದೇವಿಯ ಭಕ್ತೆ. ಆಗಾಗ ಆ ಕ್ಷೇತ್ರಕ್ಕೆ ಹೋಗುತ್ತಿದ್ದೆ, ಭಕ್ತೆ ಪಾತ್ರ ಸಿಕ್ಕಿದ್ದು ಇನ್ನೂ ಖುಷಿ ನೀಡಿತು. ತಮಿಳಿನ ‘ಮಾತಂಗಿ’ ಚಿತ್ರದಲ್ಲೂ ಬ್ಯುಸಿಯಾಗಿದ್ದೇನೆ.* ಗಾಸಿಪ್‌ಗಳಿಂದ ಜನಪ್ರಿಯತೆ ಬಯಸುತ್ತೀರಾ?

ಇಲ್ಲ, ಗಾಸಿಪ್‌ ಬೇಕು ಅಂಥ ಬಯಸುವ ನಟಿಯಲ್ಲ. ಗಾಸಿಪ್‌ ಎನ್ನುವುದು ಚಿತ್ರೋದ್ಯಮದ ಒಂದು ಭಾಗವಾಗಿದೆ. ನಮ್ಮನ್ನೇ ಅದು ಹುಡುಕಿಕೊಂಡು ಬರುತ್ತದೆ ಅಷ್ಟೇ.* ಸಿನಿಮಾ ಸೋಲನ್ನು ಹೇಗೆ ಸ್ವೀಕರಿಸುತ್ತೀರಾ?

ನಟಿಯಾದ ಮೇಲೆ ಸಿನಿಮಾಗಳ ಸೋಲು, ಗೆಲುವು ಎರಡನ್ನೂ ಸಮನಾಗಿ ಸ್ವೀಕರಿಸಬೇಕು. ಬರೀ ಗೆಲುವನ್ನೇ ಬಯಸದೇ ಏರುಪೇರುಗಳನ್ನು ಸಹಜವಾಗಿ ತೆಗೆದುಕೊಳ್ಳಬೇಕು. ಒಂದು ಸಿನಿಮಾದ ನಂತರ ಮತ್ತೊಂದು ಸಿನಿಮಾಕ್ಕಾಗಿ ಅನೇಕ ಬದಲಾವಣೆಗಳನ್ನು ಮಾಡಿ ಕೊಳ್ಳುತ್ತೇನೆ, ಪಾತ್ರಕ್ಕೆ ತಕ್ಕಂತೆ ನೋಟವನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ, ಹೇರ್‌ ಸ್ಟೈಲ್‌ ಬದಲಾಯಿಸಿಕೊಂಡಿದ್ದೇನೆ, ತೂಕವನ್ನೂ ಇಳಿಸಿದ್ದೇನೆ. ಇದೆಲ್ಲ ಸಿನಿಮಾ ಅವಕಾಶ ಬಂದ ಮೇಲೆ ಆದ ಬದಲಾವಣೆ.* ಬಿಡುವಿನ ವೇಳೆ?

ಬಿಡುವು ಸಿಕ್ಕಾಗಲೆಲ್ಲಾ ದೇವಾಲಯಗಳ ದರ್ಶನ ಮಾಡುತ್ತೇನೆ, ಮನೆಯಲ್ಲಿಯೇ ಕಾಲ ಕಳೆಯಲು ಹೆಚ್ಚು ಸಮಯ ಮೀಸಲಿಡುತ್ತೇನೆ.* ನಿಮಗೆ ಹೆಚ್ಚು ಖುಷಿಯಾದ ಸಮಯ?

ನನ್ನ ಸಿನಿಮಾಗಳು ಯಶಸ್ವಿ ಪ್ರದರ್ಶನ ಕಂಡರೆ ಅದೇ ಖುಷಿ ಗಳಿಗೆ ಎನ್ನಬಹುದು.* ಯಾವ ಔಟ್‌ಫಿಟ್‌ನಲ್ಲಿ ಕಂಫರ್ಟ್‌ ಆಗಿ ಫೀಲ್‌ ಮಾಡ್ತೀರಾ?

ಮನೆಯಲ್ಲಿದ್ದಾಗ ಟ್ರ್ಯಾಕ್‌ ಸ್ಯೂಟ್, ಟೀಶರ್ಟ್‌ನಲ್ಲಿರುತ್ತೇನೆ. ಪಾರ್ಟಿ ಹಾಗೂ ಸಭೆ, ಸಮಾರಂಭಗಳಾದರೆ ಸೀರೆ ಉಡುತ್ತೇನೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.