ಬುಧವಾರ, ಜೂನ್ 16, 2021
23 °C

‘ಗುಣಮಟ್ಟದ ಇ–ಬೋಧನೆಗೆ ಒತ್ತು ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ರಾಷ್ಟ್ರವು ಐ.ಐ.ಟಿ ಹಾಗೂ ಐ.ಐ.ಎಸ್.ಸಿ.ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆದು ಎಂಜಿನಿಯರ್‌ಗಳನ್ನು ಉತ್ಪಾದಿಸಿ ವಿದೇಶಗಳಿಗೆ ರವಾನಿಸುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಪ್ರತಿಭಾಪಲಾಯನ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಪಿಡುಗಾಗಿ ಕಾಡುತ್ತಿದೆ’ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಚ್‌. ಮಹೇಶಪ್ಪ ವಿಷಾದ ವ್ಯಕ್ತಪಡಿಸಿದರು.ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಘಟದ ವತಿಯಿಂದ ಮಂಗಳವಾರ ಹಮ್ಮಿ ಕೊಂಡಿದ್ದ ಪ್ರಾಧ್ಯಾಪಕರಿಗೆ ಉಚಿತವಾಗಿ ಲ್ಯಾಪ್‌ಟಾಪ್‌ ವಿತರಿಸುವ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.‘ವಿಶ್ವವಿದ್ಯಾಲಯದ ಇ–ಬೋಧನೆ ಹಾಗೂ ಕಲಿಕೆ ಪ್ರಕ್ರಿಯೆಗೆ ಪೂರಕವಾಗು ವಂತೆ ವಿಶ್ವದ ಪ್ರಮುಖ ವಿಶ್ವ ವಿದ್ಯಾಲಯಗಳು ಅಳವಡಿಸಿಕೊಂಡಿ ರುವ ಪರಿಪಾಠಗಳನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅಳವಡಿಸಿಕೊಂಡಿರು ವುದು ಕುಲಪತಿಗಳ ದೂರದೃಷ್ಟಿಯ ಸಂಕೇತ. ಇಂತಹ ಅವಕಾಶಗಳನ್ನು ಪ್ರಾಧ್ಯಾಪಕ ಸಮುದಾಯ ಸದುಪಯೋಗ ಪಡಿಸಿಕೊಳ್ಳ ಬೇಕು. ಬೋಧನೆಯಲ್ಲಿ ವ್ಯವಸ್ಥಿತವಾಗಿ ತೊಡಗಿ ಕೊಳ್ಳದ ಶಿಕ್ಷಕನು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುತ್ತಾನೆ. ಅಂತಹ ಪ್ರಮಾದವು ಪ್ರಾಧ್ಯಾಪಕನಿಂದ ಆಗಬಾರದು. ಪ್ರಾಧ್ಯಾಪಕ ವೃತ್ತಿ ಸದಾ ಕ್ರಿಯಾಶೀಲವಾಗಿರು ವಂಥದ್ದು’ ಎಂದು ಅಭಿಪ್ರಾಯಪಟ್ಟರು.ಅಧ್ಯಕ್ಷತೆ ವಹಿಸಿದ್ದ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಬಿ.ಆರ್. ಅನಂತನ್, ‘ವಿಶ್ವ ವಿದ್ಯಾಲಯವನ್ನು ಸಂಪೂರ್ಣವಾಗಿ ಇ– ಕ್ಯಾಂಪಸ್‌ ಆಗಿ ಪರಿವರ್ತಿಸುವ ಗುರಿಯನ್ನು ಹೊಂದ ಲಾಗಿದೆ. ಶೀಘ್ರದಲ್ಲೇ ಇಂಟರ್‌ನೆಟ್‌ ಸಂಪರ್ಕ ಇರುವ 75 ಕಂಪ್ಯೂಟರ್‌ಗಳು ಇರುವ ಪ್ರಯೋಗಾಲಯವನ್ನು ವಿದ್ಯಾರ್ಥಿಗಳ ಬಳಕೆ ಗಾಗಿ ಸ್ಥಾಪಿಸಲಾಗುವುದು. ಇದರ ಸದುಪ ಯೋಗವನ್ನು ವಿಜಾಪುರದ ವಚನ ಸಂಗಮ ಆವರಣಕ್ಕೂ ವಿಸ್ತರಿಸಲಾಗುವುದು’ ಎಂದು ತಿಳಿಸಿದರು.ಲ್ಯಾಪ್‌ಟಾಪ್‌ ಸ್ವೀಕರಿಸಿದ ಪ್ರಾಧ್ಯಾಪಕ ಪ್ರೊ. ಡಿ.ಎನ್. ಪಾಟೀಲ, ‘ವಿಶ್ವವಿದ್ಯಾಲಯವು ಬೋಧಕರನ್ನು ಸಕ್ರಿಯವಾಗಿಡಲು ಹಾಗೂ ಅವರ ಜ್ಞಾನವನ್ನು ನಿರಂತರ ಉನ್ನತೀಕರಿಸಲು ಮಾಡುತ್ತಿರುವ ಪ್ರಯತ್ನ ಶ್ಲಾಘನೀಯ ಸಂಗತಿ. ಇದರಿಂದಾಗಿ ಪ್ರಾಧ್ಯಾಪಕ ವರ್ಗ ತನ್ನ ಬೌದ್ಧಿಕ ಎಲ್ಲೆಯನ್ನು ವಿಸ್ತರಿಸಿಕೊಳ್ಳುವಲ್ಲಿ ಸಹಕಾರಿ ಯಾಗಲಿದೆ’ ಎಂದು ತಿಳಿಸಿದರು.ಪ್ರೊ. ಶಾಂತಿನಾಥ ದಿಬ್ಬದ, ಪ್ರೊ. ರಂಗರಾಜ ವನದುರ್ಗ, ಸಿದ್ರಾಮೇಶ್ವರ ಉಕ್ಕಲಿ, ಪ್ರೊ. ವಿಷ್ಣುಕಾಂತ ಚಟಪಲ್ಲಿ, ಪ್ರೊ. ಸಿದ್ದು ಪಿ. ಅಲಗೂರ ಹಾಜರಿದ್ದರು. ಡಾ. ಮಹಾಂತೇಶ ಚಲವಾದಿ ಸ್ವಾಗತಿಸಿದರು. ಡಾ. ರವಿ ನಿರೂಪಿಸಿ ದರು. ಡಾ. ಪ್ರಕಾಶ ಕಟ್ಟಿಮನಿ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.