ಗುರುವಾರ , ಜೂನ್ 24, 2021
23 °C

‘ಗೆಲ್ಲುವ ಕ್ಷೇತ್ರ’ಗಳ ಟಿಕೆಟ್‌ಗೆ ಪೈಪೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ  (ಪಿಟಿಐ): ಏಪ್ರಿಲ್‌ 24ರಂದು ತಮಿಳುನಾಡಿನಲ್ಲಿ ನಡೆಯಲಿರುವ ಲೋಕ­ಸಭೆ ಚುನಾವಣೆಯಲ್ಲಿ ಸ್ಪರ್ಧಿ­ಸಲು ಕಾಂಗ್ರೆಸ್‌ ಮುಖಂಡರು ಹಿಂದೇಟು ಹಾಕುತ್ತಿದ್ದರೂ, ಗೆಲ್ಲಬಹು­ದಾದ ಆಯ್ದ ಕ್ಷೇತ್ರಗಳಿಂದ ಕಣಕ್ಕಿಳಿಯಲು ಪಕ್ಷದ ಟಿಕೆಟ್‌ಗಾಗಿ ಮುಖಂಡರಲ್ಲಿ ಪೈಪೋಟಿ ಉಂಟಾಗಿದೆ.ಕನ್ಯಾಕುಮಾರಿ ಕ್ಷೇತ್ರದಿಂದ ಟಿಕೆಟ್‌ ಆಕಾಂಕ್ಷಿಯಾಗಿರುವ ತಮಿಳುನಾಡು ಪ್ರದೇಶ ಕಾಂಗ್ರೆಸ್‌ ಸಮಿತಿಯ ಮಾಜಿ ಅಧ್ಯಕ್ಷ­ರಾದ ಕುಮಾರಿ ಅನಂತನ್‌ ಅವರ ಸಹೋದರ ಎಚ್‌. ವಸಂತಕುಮಾರ್‌ ಅವರು ‘ಗೆಲ್ಲುವ ಕ್ಷೇತ್ರ’ದ ಟಿಕೆಟ್‌ ಪಡೆಯಲು ಯತ್ನಿಸಿದವರಲ್ಲಿ ಮೊದಲಿಗರು.ಅವರು ಅಲ್ಲಿ ತಮಿಳುನಾಡಿನ ಕಾಂಗ್ರೆಸ್‌ ಸಮಿತಿಯ ಇನ್ನೊಬ್ಬ ಮಾಜಿ ಅಧ್ಯಕ್ಷರಾದ ಕೆ.ವಿ. ತಂಗಬಾಲು ಅವರ ಬೆಂಬಲ ಹೊಂದಿರುವ ರಾಬರ್ಟ್‌ ಬ್ರೂಸ್ ಅವರಿಂದ ತೀವ್ರ ಪೈಪೋಟಿ ಎದುರಿಸಲಿದ್ದಾರೆ.ಚಿದಂಬರಂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮುಖಂಡರ ನಡುವೆ ಇದೇ ರೀತಿಯ ಸ್ಪರ್ಧೆ ಇದೆ. ಮಣಿರತ್ನಂ ಮತ್ತು ವಳ್ಳಾಲ್‌ಪೆರುಮಾಳ್‌ ಅವರು ಟಿಕೆಟ್‌ಗಾಗಿ ಭಾರಿ ಯತ್ನ ನಡೆಸಿದ್ದಾರೆ. ಮಣಿರತ್ನಂ ಅವರು ಕೇಂದ್ರ ಸಚಿವ ಜಿ.ಕೆ. ವಾಸನ್‌ ಅವರಿಗೆ ನಿಷ್ಠರಾಗಿದ್ದರೆ, ವಳ್ಳಾಲ್‌ಪೆರುಮಾಳ್‌ ಅವರಿಗೆ ಕೇಂದ್ರ ಸಚಿವ ಚಿದಂಬರಂ ಬೆಂಬಲವಿದೆ. ವಿಳ್ಳುಪುರಂ ಕ್ಷೇತ್ರದಲ್ಲೂ ಇದೇ ಪರಿಸ್ಥಿತಿ ಇದೆ.ಇನ್ನೂ ಕೆಲವು ಕ್ಷೇತ್ರಗಳಲ್ಲಿ ಟಿಕೆಟ್‌ ಆಕಾಂಕ್ಷಿಗಳಾದ ಪಕ್ಷದ ಹಿರಿಯ ನಾಯಕರಿಗೆ ಯುವ ಕಾಂಗ್ರೆಸ್‌ನಲ್ಲಿ  ಗುರುತಿಸಿಕೊಂಡಿರುವವರು ತೀವ್ರ ಪೈಪೋಟಿ ನೀಡುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.