ಭಾನುವಾರ, ಜನವರಿ 26, 2020
30 °C

‘ಗೋಡೆ’ಗೆ ವಿದ್ಯಾಮಾನ್ಯ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಅವರಿಗೆ ಉಡುಪಿಯ ಯಕ್ಷರಂಗಸ್ಥಳ ಸಂಸ್ಥೆ ನೀಡುವ ಫಲಿಮಾರು ಮಠದ ಹಿರಿಯ ಯತಿ ವಿದ್ಯಾಮಾನ್ಯ ತೀರ್ಥರ ನೆನಪಿನಲ್ಲಿ ನೀಡುವ ವಿದ್ಯಾಮಾನ್ಯ ಪ್ರಶಸ್ತಿ ಪ್ರಾಪ್ತವಾಗಿದೆ.ಇತ್ತೀಚೆಗೆ ಉಡುಪಿಯ ಫಲಿಮಾರು ಮಠದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರ್ಯಾಯ ಸೋದೆ ಮಠಾಧೀಶರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗಧಾಯುದ್ಧದ ಕೌರವ, ಬ್ರಹ್ಮ, ತ್ರಿಶಂಕು, ಲಕ್ಷ್ಮಣ, ರಾವಣ, ಅರ್ಜುನ ಹೀಗೆ ಯಕ್ಷಗಾನದ ವಿವಿಧ ಪಾತ್ರಗಳ ಅಭಿನಯದಲ್ಲಿ ತಮ್ಮದೇ ಛಾಪು ಮೂಡಿಸಿರುವ ಗೋಡೆ 58 ವರ್ಷಗಳಿಂದ ಯಕ್ಷರಂಗದ ಸೇವೆ ಸಲ್ಲಿಸುತ್ತಿರುವ ಮೇರು ಕಲಾವಿದ.

ಪ್ರತಿಕ್ರಿಯಿಸಿ (+)