‘ಗೋಮಾತೆಗೆ ಸಂಕುಚಿತ ಮನೋಭಾವ ಇಲ್ಲ’

7

‘ಗೋಮಾತೆಗೆ ಸಂಕುಚಿತ ಮನೋಭಾವ ಇಲ್ಲ’

Published:
Updated:

ಬದಿಯಡ್ಕ: ‘ಗೋವುಗಳಿಗೆ ಪಕ್ಷಬೇಧ, ಮತಬೇಧ ದ ಚೌಕಟ್ಟಿಲ್ಲ. ಆಕೆ ಸಾರ್ವತ್ರಿಕವಾಗಿ ಯಾವುದೇ ಬೇಧ ಮಾಡದೆ ಹಾಲುಣಿಸುವ ಮಾತೆ. ಮಾನವರ ನಿರಾಮಯವಾದ ಬದುಕಿಗೆ ಗೋವಿನ ಸಹಕಾರ ಬೇಕು. ಕೇಂದ್ರ ಸರ್ಕಾರದ ಆಯುಷ್‌ ಸಂಸ್ಥೆಯೂ ಗೋಮೂತ್ರ ಸಹಿತವಾದ ಪಂಚಗವ್ಯ ಉತ್ಪನ್ನಗಳನ್ನು ಅಂಗೀಕರಿಸಿದೆ.ಪಂಚಗವ್ಯ ಚಿಕಿತ್ಸೆಯ ಮೂಲಕ ಎಂಡೋಸಲ್ಫಾನ್‌ ಪೀಡಿತರಿಗೆ ಚಿಕಿತ್ಸೆ ನೀಡುವ ಯೋಜನೆಯೂ ಕೂಡಾ ಯಶಸ್ವಿ­ಯಾಗಲಿದೆ’ ಎಂದು ಹೊಸನಗರದ ರಾಘವೇಶ್ವರ ಭಾರತೀ ಸಾ್ವಮೀಜಿ ಹೇಳಿದರು.ಅವರು ಭಾನುವಾರ ಮಾ ಫೌಂಡೆಶನ್‌ ಮತ್ತು ಪುಲ್ಲೂರು ಪೆರಿಯ ಗ್ರಾ.ಪಂ. ಜಂಟಿ ಆಶ್ರಯದಲ್ಲಿ ಆರಂಭವಾದ ಎಂಡೋಸಲ್ಫಾನ್ ಪೀಡಿತರಿಗೆ ಉಚಿತ ಪಂಚಕರ್ಮ ಚಿಕಿತ್ಸೆ ನೀಡುವ ’ನಿರಾಮಯ–2013’ ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿ ಮಾತ­ನಾಡಿದರು. ಸಾ್ವಮೀಜಿ ಈ ಕಾರ್ಯಕೆ್ಕ ಮಾರ್ಗ­ದರ್ಶನ ನೀಡಲಿದ್ದಾರೆ.ಕೇರಳ ರಾಜ್ಯ ಆರೋಗ್ಯ ಸಚಿವ ವಿ.ಎಸ್‌ ಶಿವ­ಕುಮಾರ್ ಉದ್ಘಾಟಿಸಿದರು. ಕೆ.ಕುಂಞಿ­ರಾಮ­ನ್‌ ಅಧ್ಯ­ಕ್ಷತೆ ವಹಿಸಿದ್ದರು. ಸಭೆಯಲ್ಲಿ ಇಂಗ್ಲೆಂಡ್ ಕೇಂಬ್ರಿ­ಡ್ಜ್ ವಿಶ್ವವಿದ್ಯಾಲಯದ ಸಂಶೋ­ಧಕಿ ಡಾ.­ನಾಗರತ್ನ, ರಾಜಕೀಯ ಮುಖಂಡರಾದ ಪಿ.ಗಂಗಾ­ಧರನ್ ನಾಯರ್, ಸಿ.ಕೆ. ಶ್ರೀಧರನ್, ಆನಂದರತಿ ಮೊದ­ಲಾದವರು ಭಾಗವಹಿಸಿದ್ದರುಬಾಲಿವುಡ್‌ ನಟ ಸುರೇಶ್‌ ಒಬೇರಾಯ್ ನಿರಾಮ­ಯದ ಲಾಂಛನ ಬಿಡುಗಡೆ ಮಾಡಿದರು. ರ್‍ಯಾಂಕ್ ವಿಜೇತ ಎಂಡೋಸಲ್ಫಾನ್ ಪೀಡಿತರಾದ ಜಿತೇಶ್‌ ಅವರನ್ನು ಸಭೆಯಲ್ಲಿ ಅಭಿನಂದಿಸ­ಲಾ­ಯಿತು.  ರುದ್ರ ಪಾರಾಯಣ ಸಹಿತ ಅನೇಕ ಧಾರ್ಮಿ­ಕ ಕಾರ್ಯಕ್ರಮಗಳು ನಡೆದುವು. ಸೋಮ­ವಾರ ನಿರಾಮಯ ಪಂಚಕರ್ಮ ಚಿಕಿತ್ಸೆಯ ವೈದ್ಯಕೀಯ ಶಿಬಿರವು ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry