‘ಗೋವಿನ ಆರಾಧನೆಯಿಂದ ಭಗವಂತನ ಅನುಗ್ರಹ’

7

‘ಗೋವಿನ ಆರಾಧನೆಯಿಂದ ಭಗವಂತನ ಅನುಗ್ರಹ’

Published:
Updated:
‘ಗೋವಿನ ಆರಾಧನೆಯಿಂದ ಭಗವಂತನ ಅನುಗ್ರಹ’

ಉಡುಪಿ: ‘ಗೋವಿನ ಆರಾಧನೆ ಹಾಗೂ ಸೇವೆಯಿಂದ ಇಹದಲ್ಲಿ ಗೋವಿನ ಋಣಕ್ಕೆ ಕೃತಜ್ಞರಾಗುವ ಧನ್ಯತೆ ಇದ್ದರೆ, ಪರದಲ್ಲಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಸಾಧ್ಯವಿದೆ. ಆದ್ದರಿಂದ ಗೋವು, ಗೋ ಸೇವೆ  ಪ್ರತಿಯೊಬ್ಬರ ಮನೆ– ಮನಗಳಲ್ಲಿ ಆದ್ಯತೆ ಮೇಲೆ ನಡೆ ಯಬೇಕು’ ಎಂದು ಶಿವಳ್ಳಿ ಪುರೋಹಿತ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ತಂತ್ರಿ ಹೇಳಿದರು.ನೀಲಾವರ ಗೋಶಾಲೆಯಲ್ಲಿ ಮಂಗಳ ವಾರ ನಡೆದ ನೂರು ಪುರೋಹಿತರಿಂದ ‘ಗೋಗ್ರಾಸ ತುಲಾಭಾರ’ ಕಾರ್ಯಕ್ರ ಮದಲ್ಲಿ ಅವರು ಮಾತನಾಡಿದರು.ಪೇಜಾವರ ಮಠದ ಕಿರಿಯ ಯತಿ ವಿಶ್ವಪ್ರಸನ್ನ ಸ್ವಾಮೀಜಿ ಗೋಪೂಜೆ ನಡೆಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಿವಳ್ಳಿ ಪುರೋಹಿತ ಸಂಘವು ವಿಶ್ವ ಶಾಂತಿಗಾಗಿ ಉಡುಪಿಯ ಸುತ್ತಮುತ್ತಲಿನ ಪ್ರತಿ ದೇವಸ್ಥಾನದಲ್ಲಿ  ತಿಂಗಳಿಗೆ ಒಂದರಂತೆ ಗಾಯತ್ರಿ ಯಾಗ ನಡೆಸುತ್ತಿದ್ದು, ಅದೇ ರೀತಿಯಾಗಿ ಈ ಗೋಗ್ರಾಸ ತುಲಾಭಾರವನ್ನು ಹಮ್ಮಿ ಕೊಂಡಿತ್ತು.ಗೋಗ್ರಾಸ  ತುಲಾ ಭಾರದಲ್ಲಿ ನೂರು ಮಂದಿ ಪಾಲ್ಗೊಂಡಿ ದ್ದರು. ತುಲಾಭಾರಕ್ಕೆ ಅರ್ಪಿಸಿದ ಗೋ ಗ್ರಾಸ ಹಾಗೂ ₨1 ಲಕ್ಷ  ನೀಲಾವರ ಗೋಶಾಲೆಗೆ ನೀಡಲಾಯಿತು.ಸಂಘದ ಕಾರ್ಯದರ್ಶಿ ವಿಶ್ವೋತ್ತಮ ಆಚಾರ್ಯ, ಕರಂಬಳ್ಳಿ ಪದ್ಮನಾಭ ಭಟ್‌, ಕೆ. ಜಿ. ರಾಘವೇಂದ್ರ ತಂತ್ರಿ, ವಿಠಲ ತಂತ್ರಿ, ಕೊರಂಗ್ರಪಾಡಿ ಸೀತಾ ರಾಮಭಟ್‌, ಹಿಂದು ಯುವಸೇನೆ ಅಧ್ಯಕ್ಷ ವಾಸುದೇವ ಭಟ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry