‘ಗ್ರಾಮೀಣರಿಗೆ ಉಚಿತ ಆರೋಗ್ಯ ಸೇವೆ ಅವಶ್ಯ’

7

‘ಗ್ರಾಮೀಣರಿಗೆ ಉಚಿತ ಆರೋಗ್ಯ ಸೇವೆ ಅವಶ್ಯ’

Published:
Updated:

ರಾಮನಗರ: ಆರೋಗ್ಯ ಸೇವೆಗಳು ದಿನ ದಿಂದ ದಿನಕ್ಕೆ ದುಬಾರಿ ಆಗುತ್ತಿ ರುವುದರಿಂದ ಬಡ ಜನರ ಕೈಗೆಟು ಕುತ್ತಿಲ್ಲ. ಇಂತಹ ಸಂದರ್ಭದಲ್ಲಿ ಉಚಿತ ಆರೋಗ್ಯ ಶಿಬಿರಗಳ ಅನುಕೂಲಗಳನ್ನು ಜನರು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಕೆ. ಪ್ರಹ್ಲಾದ್ ಸಲಹೆ ನೀಡಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇ ಜಿನ ಎನ್ಎಸ್ಎಸ್ ಘಟಕದ ಜಂಟಿಯಾಗಿ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇ ಜಿನಲ್ಲಿ ಬುಧವಾರ ಏರ್ಪಡಿಸಿದ್ದ ಆರೋಗ್ಯ ಸೇವೆಗಳ ಕಾನೂ ನು ಅರಿವು ಮತ್ತು ಉಚಿತ ಆರೋಗ್ಯ ತಪಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತ ನಾಡಿದರು.ಬಡ ಜನರಿಗೆ ಅನುಕೂ ಲವಾಗಲೆಂದು ಉಚಿತ ಆರೋಗ್ಯ ಶಿಬಿರ ಗಳನ್ನು ಸಂಘ ಸಂಸ್ಥೆಗಳು ಆಯೋ ಜಿಸುತ್ತಿವೆ. ಗ್ರಾಮೀಣ ಪ್ರದೇಶದ ಜನರಿ ಗೆ ಹೆಚ್ಚಾಗಿ ಉಚಿತ ಆರೋಗ್ಯ ಸೇವೆ ದೊರೆಯುವಂತಾಗಬೇಕು. ಅದರಿಂದ ಉತ್ತಮ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಎಚ್. ಹೊಸಗೌ ಡರ ಮಾತನಾಡಿ,  ಸಮಾಜ ದಲ್ಲಿ ಸ್ವಾರ್ಥತೆ ಹೆಚ್ಚಿದೆ. ಜನರು ತಮ್ಮ ಕುಟುಂಬಕ್ಕೆ ಮಾತ್ರ ಸೀಮಿತ ವಾಗಿದ್ದಾರೆ. ಉಳ್ಳವರು ತಮ್ಮ ಗಳಿಕೆ ಯ ಸ್ವಲ್ಪ ಭಾಗವನ್ನಾದರೂ ಸಮಾಜ ಮುಖಿ ಕಾರ್ಯಗಳಿಗೆ ಮೀಸಲಿಡಬೇಕು. ಇದರಿಂದ ಸ್ವಲ್ಪ ಮಟ್ಟಿಗಾದರೂ ಬಡಜನರಿಗೆ ಸಹಾಯ ವಾಗುತ್ತದೆ ಎಂದು ಅವರು ಕಿವಿಮಾತು ಹೇಳಿದರು.ಜೀವನದಲ್ಲಿ ಕಷ್ಟ ಸುಖಗಳು ಬರುವುದು ಸಾಮಾನ್ಯವಾಗಿದ್ದು, ಕಷ್ಟ ಬಂದಂತಹ ಸಂದರ್ಭದಲ್ಲಿ ಖಿನ್ನತೆ ಗೊಳಗಾಗದೆ ಧೈರ್ಯದಿಂದ ಮೆಟ್ಟಿನಿ ಲ್ಲುವ ಮನೋಸ್ಥೈರ್ಯವನ್ನು ಬೆಳೆಸಿ ಕೊಳ್ಳಬೇಕು ಎಂದು ಕರೆ ನೀಡಿದರು.ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಇಬ್ರಾಹಿಂ ಖಲೀಲ್ ಸರ್ಕಾರಿ ಆಸ್ಪತ್ರೆ ಗಳಲ್ಲಿ ಲಭ್ಯವಿರುವ ಆರೋಗ್ಯ ಸೇವೆಗಳ ಬಗ್ಗೆ ಉಪನ್ಯಾಸ ನೀಡಿದರು.ಹದಿಹರೆಯದವರಲ್ಲಿ ಕಂಡುಬರುವ ಖಿನ್ನತೆಗೆ ಸರ್ಕಾರಿ ಆಸ್ಪತ್ರೆ ಮತ್ತು ಪ್ರಾಥ ಮಿಕ ಆರೋಗ್ಯ ಕೇಂದ್ರ ದಲ್ಲಿ ಪ್ರತಿ ಗುರು ವಾರ ಆಪ್ತ ಸಮಾಲೋಚನೆ ನಡೆಸಿ ಉಚಿತವಾಗಿ ಚಿಕಿತ್ಸೆ ಮತ್ತು ಸಲಹೆ ಕೊಡಲಾಗುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಪಾಕ ಎಚ್.ಆರ್. ಮೂರ್ತಿ, ಚಂದ್ರಪ್ಪ, ದೈಹಿಕ ಶಿಕ್ಷಣ ನಿರ್ದೇಶಕಿ ಅಬಿದಾ ಬೇಗಂ, ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಕೆ. ಶಾಂತಪ್ಪ, ವಕೀಲರಾದ ಎಲ್.ವಿ. ಪೂರ್ಣಿಮಾ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry