‘ಗ್ರಾಮೀಣ ಮಕ್ಕಳಿಗೆ ಮಾರ್ಗದರ್ಶನ ಅಗತ್ಯ’

7

‘ಗ್ರಾಮೀಣ ಮಕ್ಕಳಿಗೆ ಮಾರ್ಗದರ್ಶನ ಅಗತ್ಯ’

Published:
Updated:

ಯಾದಗಿರಿ:  ಗ್ರಾಮೀಣ ಭಾಗದ ಮಕ್ಕಳಲ್ಲಿ ಪ್ರತಿಭೆ ಇದ್ದು, ಅವರಿಗೆ ಸೂಕ್ತ ಮಾರ್ಗದರ್ಶನ ಸಿಗಬೇಕಿದೆ ಎಂದು ಕಾಂಗ್ರೆಸ್ ಮುಖಂಡ ಜನಾರ್ದನ ರಾಠೋಡ್ ಹೇಳಿದರು.ಶುಕ್ರವಾರ ತಾಲ್ಲೂಕಿನ ಅಲ್ಲಿಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಸರ್ವ ಶಿಕ್ಷಣ ಅಭಿಯಾನ ಮತ್ತು ಅಜೀಂ ಪ್ರೇಮ್‌ಜಿ ಫೌಂಡೇಶನ್‌ ಸಹಯೋಗ­ದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಣಿತ ಮೇಳದ  ಸಮಾರಂಭ ಅವರು ಮಾತನಾಡಿದರು.ಶಿಕ್ಷಕರ ಮಾರ್ಗದರ್ಶನವಿದ್ದರೆ, ಗ್ರಾಮೀಣ ಮಕ್ಕಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಒಳ್ಳೆಯ ಸಾಧನೆ ಮಾಡಬಹುದು ಎಂಬುದಕ್ಕೆ ಅನೇಕ ಉದಾಹರಣೆಗಳಿವೆ. ಅಲ್ಲಿಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ರಚ­ನಾತ್ಮಕ ಕಾರ್ಯಕ್ರಮ ಹಮ್ಮಿ­ಕೊಳ್ಳುವ ಮೂಲಕ ಮಕ್ಕಳನ್ನು ಅಧ್ಯಯನದ ಕಡೆಗೆ ಕೊಂಡೊಯ್ಯುವ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.ನಮ್ಮ ಮಕ್ಕಳಿಗೆ ಗಣಿತ ಮತ್ತು ವಿಜ್ಞಾನ ವಿಷಯಗಳು ಕಬ್ಬಿಣದ ಕಡಲೆ­ಯಂತೆ. ಅದನ್ನು ಮನಗಂಡು ಅಜೀಂ ಪ್ರೇಮ್‌ಜಿ ಫೌಂಡೇಶನ್ ಸಹಯೋಗ­ದಲ್ಲಿ ಗಣಿತ ಮತ್ತು ವಿಜ್ಞಾನ ವಸ್ತು ಪ್ರದರ್ಶನಗಳನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳಿಗೆ ಈ ವಿಷಯಗಳನ್ನು ಸಲೀಸಾಗಿ ಅಧ್ಯಯನ ಮಾಡುವಂತಾ­ಗಿದೆ ಎಂದರು.ಗ್ರಾಮೀಣ ಭಾಗದ ಮಕ್ಕಳು ಶೈಕ್ಷಣಿಕ ಮುಖ್ಯವಾಹಿನಿಗೆ ಬರಲು ಸರ್ವ ಶಿಕ್ಷಣ ಅಭಿಯಾನದ ಮೂಲಕ ನೂರಾರು ಯೋಜನೆಗಳನ್ನು ಜಾರಿ­ಗೊಳಿ­ಸುತ್ತದೆ. ಪಾಲಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳು­ಹಿಸುವ ಮೂಲಕ ಅವರನ್ನು ಉತ್ತಮ ನಾಗರೀಕರನ್ನಾಗಿ ಮಾಡ­ಬೇಕಿದೆ ಎಂದರು.ಶರಣಪ್ಪ ಸೋಮಣ್ಣೋರ ಮಾತ­ನಾಡಿ, ಮಕ್ಕಳಿಗೆ ಪ್ರೋತ್ಸಾಹದ ಜೊತೆ­ಯಲ್ಲಿ ಮಾರ್ಗದರ್ಶನ ಅವಶ್ಯಕ­ವಾಗಿದೆ. ಹಲವು ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಪಡೆದಿರುವ ನಮ್ಮ ಮಕ್ಕಳಲ್ಲಿ ಅಗಾಧ ಪ್ರತಿಭೆ ಅಡಗಿದೆ. ಅಲ್ಲಿಪುರ ಪ್ರೌಢಶಾಲೆಯ ಆವರಣ ಗೋಡೆಯ ನಿರ್ಮಾಣಕ್ಕಾಗಿ ಈಗಾಗಲೇ ಜಿಲ್ಲಾ ಪಂಚಾಯಿತಿ ವತಿಯಿಂದ ರೂ. 2 ಲಕ್ಷ ಅನುದಾನ ನೀಡಲಾಗಿದೆ. ಇನ್ನೂ ರೂ. 4 ಲಕ್ಷ ಒದಗಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು. ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶೋಭಾ­ರಾಣಿ, ಮಕ್ಕಳಲ್ಲಿನ ಸರ್ವ­ತೋ­ಮುಖ ವ್ಯಕ್ತಿತ್ವ ವಿಕಾಸಕ್ಕೆ ಶಿಕ್ಷಕರ ಪಾತ್ರ ಅಪಾರವಾಗಿದೆ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಅಗತ್ಯ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.ಕೆಜೆಪಿ ಮುಖಂಡ ಸುರೇಶ ಅಲ್ಲಿಪುರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಗುರುನಾಥ ರಾಠೋಡ್, ಸದಸ್ಯ ಗೋಪಾಲ ಚವ್ಹಾಣ, ಎಸ್‌ಡಿ­ಎಂಸಿ ಅಧ್ಯಕ್ಷ ಹಂಪಯ್ಯ, ಮುಖ್ಯಾ­­ಧ್ಯಾಪಕ ಲಕ್ಷ್ಮಾರೆಡ್ಡಿ, ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ಶಿವಕುಮಾರ, ರುದ್ರೇಶ, ಅಕ್ಕಮಹಾ­ದೇವಿ, ಸುಭಾಷ ಗುತ್ತೇದಾರ  ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry