ಗುರುವಾರ , ಮಾರ್ಚ್ 4, 2021
25 °C

‘ಗ್ರಾಮೀಣ ಮೂಲಸೌಕರ್ಯ ನನ್ನ ಕನಸಿನ ಕೂಸು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಗ್ರಾಮೀಣ ಮೂಲಸೌಕರ್ಯ ನನ್ನ ಕನಸಿನ ಕೂಸು’

ಜಿ.ಯರದಕೆರೆ(ಕಡೂರು): ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ನಿಟ್ಟಿನಲ್ಲಿ ನಾನು ಪ್ರಧಾನಮಂತ್ರಿ ಆದಾಗ ಕಾನೂನು ಬದಲಾವಣೆ ಮೂಲಕ ಹಳ್ಳಿಗಳ ಮೂಲ ಸೌಕರ್ಯ ಬದಲಾವಣೆಗೆ ನಾಂದಿ ಹಾಡಿದ್ದೆ ಎಂದು ಮಾಜಿ ಪ್ರಧಾನಿ ಎಚ್‌. ಡಿ.ದೇವೇಗೌಡ ನೆನಪಿಸಿಕೊಂಡರು.

ಕಡೂರು ತಾಲ್ಲೂಕು ಜಿ.ಯರದ ಕೆರೆಯಲ್ಲಿ ಯಗಟಿ ಹೋಬಳಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಶುಕ್ರವಾರ ಅವರು ಮಾತನಾಡಿದರು.ಹಳ್ಳಿಗಳಲ್ಲಿ ಇಂದಿಗೂ ಕುಡಿಯುವ ನೀರು, ರಸ್ತೆ, ಆಸ್ಪತ್ರೆ ಮುಂತಾದ ಮೂಲಸೌಕರ್ಯಗಳ ಕೊರತೆ ಇದ್ದು, ಇಡೀ ದೇಶದ ಗ್ರಾಮಗಳು ಮತ್ತು ರೈತರು ಸಂಕಷ್ಟದಲ್ಲಿ ಇದ್ದಾರೆ. ರೈತರ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎನ್ನು ವುದು ನಿರ್ವಿವಾದ ಮತ್ತು ಜನಪ್ರತಿನಿಧಿ ಗಳೂ ಇತ್ತ ಗಮನಹರಿಸಬೇಕು ಎಂಬುದು ತಮ್ಮ ಆಶಯವಾಗಿದ್ದು ಜಲ ಸಂಪತ್ತು ಕರಗಿರುವ ಈ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಎಲ್ಲೆಡೆ ಇದೆ.  ಎಲ್ಲಕಡೆ ದತ್ತರಂತಹ ಶಾಸಕರು ಇದ್ದರೆ ಜನರ ಸಮಸ್ಯೆಗೆ ಸಾಕಷ್ಟು ಪರಿಹಾರ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಶಾಸಕ ವೈ.ಎಸ್‌.ವಿ.ದತ್ತ ಮಾತ ನಾಡಿ, ತಾಲ್ಲೂಕಿನ ಕೆಲ ಗ್ರಾಮೀಣ ರಸ್ತೆ ಗಳು 4ರಿಂದ 5 ದಶಕಗಳಿಂದ ದುರಸ್ತಿ ಕಾಣದೆ ಸುಗಮ ಸಂಚಾರ ಮರೀಚಿಕೆ ಯಾಗಿತ್ತು. ಲೋಕೋಪ ಯೋಗಿ ಇಲಾಖೆಯಿಂದ ಕಳೆದ 60ವರ್ಷಗಳಲ್ಲಿ ಒಬ್ಬ ಶಾಸಕನ 5ವರ್ಷ ಅವಧಿಯಲ್ಲಿ ರಸ್ತೆ ನಿರ್ಮಾಣ ಅಥವಾ ಅಭಿವೃದ್ಧಿಗೆ ಸುಮಾರು ₨ 8ಕೋಟಿ ಬಿಡುಗಡೆ ಆಗುತ್ತಿತ್ತು, ತಾವು ಶಾಸಕರಾದ ಕೇವಲ 8ತಿಂಗಳ ಅವಧಿಯಲ್ಲಿ ₨11ಕೋಟಿ  ಮಂಜೂರಾಗಿದ್ದು ಪಿಎಂಜಿಎಸ್‌ವೈನಲ್ಲಿ ಯಗಟಿ–ಹರಿಸಮುದ್ರ–ಭೈರಗೊಂಡ ನಹಳ್ಳಿ–ಚಿನಕಾರನಹಳ್ಳಿವರೆಗಿನ  17ಕಿಮೀ ಉದ್ದದ ರಸ್ತೆಗೆ ಸುಮಾರು ₨10ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೆ ಇಂದು ಭೂಮಿಪೂಜೆ ನೆರವೇರಿಸಿದ್ದು ಯಗಟಿ ಹೋಬಳಿಗೆ ರಸ್ತೆ ನಿರ್ಮಿಸು ವವರೆಗೆ ಈ ಭಾಗಕ್ಕೆ ಬರುವುದಿಲ್ಲ ಎಂಬ ಶಪಥ ಈಡೇರಿದೆ ಎಂದರು.ಇದು ರಾಜಕೀಯ ಉದ್ದೇಶದ ಶಂಕುಸ್ಥಾಪನೆಯಲ್ಲ, ಲೋಕಸಭಾ ಚುನಾವಣೆ ಘೋಷಣೆ ಆದರೆ ಮೂರು ತಿಂಗಳು ಈ ಕೆಲಸಗಳು ಸ್ಥಗಿತಗೊ ಳ್ಳುತ್ತವೆ ಎಂಬ ಉದ್ದೇಶದಿಂದ ಇಂದೇ ಚಾಲನೆ ನೀಡಲಾಗಿದೆ.ತಾಲ್ಲೂಕಿನ ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಅಡಿಯಲ್ಲಿ ₨ 3.50ಕೋಟಿ ಸರ್ಕಾರದಿಂದ ಮಂಜೂ ರಾಗಿದ್ದು ವೇದಾ ನದಿಯಿಂದ ಯಗಟಿಪುರ ಸಮೀಪ ಸುಮಾರು 60 ಎಕರೆ ಭೂಮಿಗೆ ನೀರುಣಿಸುವ ಹಲವು ದಿನಗಳ ಕನಸಾಗಿದ್ದ ಬಸವನತೀರ್ಥ ಚೆಕ್‌ ಡ್ಯಾಂ ನಿರ್ಮಾಣಕ್ಕೂ ಇಂದೇ ಚಾಲನೆ ನೀಡಲಾಗಿದ್ದು, ಐಬಿಪಿ ಯೋಜನೆ ಅಡಿ ₨ 85ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ಆರಂಭಗೊಂಡಿದೆ. ದೇವೇಗೌಡರು ಈ ಭಾಗದ ಸಂಸದರಾದ ಮೇಲೆ ಅವರ ಅನುದಾನವೇ ಸುಮಾರು ₨6 ಕೋಟಿ ತಾಲ್ಲೂಕಿಗೆ ಬಳಕೆಯಾಗಿದ್ದು, ಎಲ್ಲ ವರ್ಗ ಮತ್ತು ಸಮೂಹಗಳ ಅಭಿವೃದ್ಧಿಗೆ ಜೆಡಿಎಸ್‌ ಆದ್ಯತೆ ನೀಡಿದೆ ಎಂದರು.ಕಾರ್ಯಕ್ರಮದಲ್ಲಿ ವಕ್ಕಲಗೆರೆ ಗ್ರಾ.ಪಂ ಅಧ್ಯಕ್ಷ ಧರಣೇಶ್‌, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜಪ್ಪ, ತಾ.ಪಂ ಸದಸ್ಯ ನಿಂಗಪ್ಪ, ಎಚ್‌.ಎಚ್‌.ದೇವರಾಜ್‌, ಗ್ರಾಮದ ಮುಖಂಡ ಆರ್‌.ಗೋಪಾ ಲಪ್ಪ, ಚಂದ್ರಪ್ಪ, ತಮ್ಮಯ್ಯಪ್ಪ, ಕೋಡಿಹಳ್ಳಿ ಮಹೇಶ್‌, ಬಿ.ಟಿ.ಗಂಗಾಧರ ನಾಯ್ಕ ಮತ್ತು ಗ್ರಾಮಸ್ಥರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.