ಬುಧವಾರ, ಜೂನ್ 23, 2021
22 °C

‘ಚಿಗಳಿ ಚಟ್ನಿ’ ಚಪ್ಪರಿಸುತ್ತ...

–ಅಮ್ಮಿ Updated:

ಅಕ್ಷರ ಗಾತ್ರ : | |

ಭಾರತದ ಹತ್ತು ವಿಲಕ್ಷಣ ಆಹಾರಗಳ ಪಟ್ಟಿಯೊಂದಿದೆ. ಪ್ರಖ್ಯಾತ ಪತ್ರಿಕಾ ಸಮೂಹವೊಂದರ ಭಾಗವಾಗಿರುವ ಆಹಾರ ಸಂಬಂಧಿ ಅಂತರ್ಜಾಲ ತಾಣವೊಂದು ಈ ಪಟ್ಟಿಯನ್ನು ತಯಾರಿಸಿದೆ. ಇದರಲ್ಲಿ ನಮ್ಮ ‘ಚಿಗಳಿ ಚಟ್ನಿ’ಗೂ ಒಂದು ಸ್ಥಾನ ದೊರೆತಿದೆ. ಆದರೆ ಪಟ್ಟಿ ತಯಾರಿಸಿದವರು ಇದನ್ನು ಕರ್ನಾಟಕದ ಖಾದ್ಯವೆಂದು ಕರೆದಿಲ್ಲ. ಬದಲಿಗೆ ಇದು ಛತ್ತೀಸ್‌ಗಢದ ವಿಶೇಷವೆಂದು ಹೇಳಿದ್ದಾರೆ. ಅಲ್ಲಿರುವ ಮಾಹಿತಿಯಂತೆ ಕೆಂಪು ಇರುವೆಗಳನ್ನು ಬಳಸಿ ತಯಾರಿಸುವ ಈ ಚಟ್ನಿಯ ಹೆಸರು ಚಪ್ರ್ಹಾ.ಈ ರೀತಿ ಕೀಟಗಳನ್ನು ಬಳಸಿಕೊಂಡು ತಯಾರಿಸುವ ಖಾದ್ಯಗಳು ಬೇರೆ ಬೇರೆ ಪ್ರದೇಶಗಳಲ್ಲಿ ಇರುವುದಕ್ಕೆ ಸಾಧ್ಯವಿದೆ ಎಂಬುದನ್ನು ಈ ಪಟ್ಟಿ ರೂಪಿಸಿದವರು ಗಮನಿಸಿರಲಿಕ್ಕಿಲ್ಲ. ಅಷ್ಟೇ ಅಲ್ಲ ಚತ್ತೀಸ್‌ಗಢದ ಚಪ್ರ್ಹಾ ಅಥವಾ ನಮ್ಮ ಚಿಗಳಿ ಚಟ್ನಿ ವಿಲಕ್ಷಣ ಖಾದ್ಯವೇನೂ ಅಲ್ಲ. ಏಕೆಂದರೆ ವಿಶ್ವ ಆಹಾರ ಸಂಸ್ಥೆಯೇ ಮನುಷ್ಯರು ತಿನ್ನಬಹುದಾದ ಕೀಟಗಳ ಒಂದು ಪಟ್ಟಿಯನ್ನೇ ತಯಾರಿಸಿದೆ. ಇವೆಲ್ಲವೂ ಅನೇಕ ಪೌಷ್ಠಿಕಾಂಶಗಳನ್ನು ಹೊಂದಿರುವ ಕೀಟಗಳು.ಚಿಗಳಿ ಚಟ್ನಿ ಕರ್ನಾಟಕದ ಮಲೆನಾಡಿನಾದ್ಯಂತ ವ್ಯಾಪಕವಾಗಿ ಬಳಕೆಯಲ್ಲಿದೆ. ಕೊಡಗು, ಸಕಲೇಶಪುರ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಹೀಗೆ ಮಳೆಕಾಡುಗಳಿರುವ ಎಲ್ಲಾ ಜಿಲ್ಲೆಗಳಲ್ಲಿಯೂ ಕೆಂಪು ಇರುವೆಯ ಚಟ್ನಿಯನ್ನು ಆಹಾರವಾಗಿ ಬಳಸುವುದಿದೆ. ಈ ಇರುವೆಗಳು ಮಲೆನಾಡಿನಲ್ಲಿ ದಾಸವಾಳ ಮತ್ತು ಮಾವಿನ ಮರದಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಇವು ಎಲೆಗಳನ್ನೇ ಬಗ್ಗಿಸಿ ತಮ್ಮ ಮನೆಗಳನ್ನು ನಿರ್ಮಿಸಿಕೊಳ್ಳುತ್ತವೆ.

ಅಲ್ಲಿಂದಲೇ ಇವುಗಳನ್ನು ಜೋಪಾನವಾಗಿ ಕೆಳಗಿಸಿ ಕೊಡವಿ ಒಂದು ಬಾಣಲೆಯಲ್ಲಿ ಹಾಕಿ ಉಪ್ಪಿನ ಜೊತೆ ಕಲೆಸಿ ಇವುಗಳನ್ನು ಚಟ್ನಿ ತಯಾರಿಗಾಗಿ ಸಿದ್ಧಪಡಿಸಲಾಗುತ್ತದೆ. ಈ ಚಟ್ನಿಗೆ ಅನೇಕ ಔಷಧೀಯ ಗುಣಗಳೂ ಇವೆಯಂತೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.