ಶನಿವಾರ, ಫೆಬ್ರವರಿ 27, 2021
23 °C
ಗಮನ ಸೆಳೆದ ಮಕ್ಕಳ ಭರತನಾಟ್ಯ ಪ್ರದರ್ಶನ

‘ಚಿಣ್ಣರ ನೃತ್ಯಲೋಕ’ದಲ್ಲಿ ಸಾಂಸ್ಕೃತಿಕ ಕಲರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಚಿಣ್ಣರ ನೃತ್ಯಲೋಕ’ದಲ್ಲಿ ಸಾಂಸ್ಕೃತಿಕ ಕಲರವ

ಚಿತ್ರದುರ್ಗ: ನೃತ್ಯ ವೈಭವದ ಜತೆ ಸಾಂಸ್ಕೃತಿಕ ಕಲರವ. ಎಲ್ಲೆಲ್ಲೂ ಸಂಭ್ರಮದ ವಾತಾವರಣ. ಎತ್ತ ನೋಡಿದರೂ ಚಿಣ್ಣರು ಲವಲವಿಕೆಯ ಓಡಾಟ. ಗಮನ ಸೆಳೆದ ಭರತನಾಟ್ಯ. ನೃತ್ಯಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದ ಚಿಣ್ಣರು..ಇವಿಷ್ಟು ನಗರದ ತರಾಸು ರಂಗಮಂದಿರದಲ್ಲಿ ಭಾನುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಂಜನಾ ನೃತ್ಯ ಕಲಾ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಲಾ ಕೇಂದ್ರದ ೨೯ನೇ ವಾರ್ಷಿಕೋತ್ಸವದ ಅಂಗವಾಗಿ ಕಲಾ ಕೇಂದ್ರದ ಪುಟಾಣಿಗಳಿಂದ ‘ಚಿಣ್ಣರ ನೃತ್ಯಲೋಕ’ ಕಾರ್ಯಕ್ರಮ ನಡೆಯಿತು.ಕಲಾ ಕೇಂದ್ರದ ವಿದ್ಯಾರ್ಥಿಗಳಾದ ದಿವ್ಯಾ, ತನ್ಮಯಿ, ನಿರ್ಮಲಾ, ಅನನ್ಯಾ, ಪ್ರತಿಭಾ, ವೆಂಕಟೇಶ್ ‘ಗಜವದನ ಬೇಡುವೆ’ ಗೀತೆಗೆ ಹೆಜ್ಜೆ ಹಾಕಿದರು. ಸಾನಿಕಾ, ಲಲಿತಾ, ವರ್ಷಿಣಿ, ಅಚ್ಯುತ್‌ರಾವ್, ಮಾನ್ಯ, ಸ್ಮೃತಿ ‘ಪೂಜಾ’ ನೃತ್ಯ ಪ್ರದರ್ಶಿಸಿದರು. ನಿಖಿತಾ, ತೃಪ್ತಿ, ಆವಂತಿ, ಐಸಿರಿ, ರಕ್ಷಿತಾ, ಪ್ರಕ್ಷು ‘ವಿನಾಯಕ ಸ್ತುತಿ’, ಅನನ್ಯ, ನಿರ್ಮಲಾ, ಪ್ರತಿಭಾ, ತನ್ಮಯಿ, ವೆಂಕಟೇಶ್, ದಿವ್ಯಾ ತಂಡ ‘ಏಕದಂತಂ ಗೀತೆ’,  ಹಾಗೂ ವಿದ್ಯಾಶ್ರೀ, ಇಂದುಶ್ರೀ, ಪ್ರೇರಣಾ, ಶ್ರೇಯಾ, ವೈಷ್ಣವಿ, ಅನ್ವಿತಾ ಮತ್ತು ತಂಡ ಪ್ರದರ್ಶಿಸಿದ ಸ್ಯಾರಿ ಡ್ಯಾನ್ಸ್ ನೃತ್ಯ ನೆರೆದಿದ್ದವರಿಗೆ ರಸದೌತಣ ನೀಡಿತು.ಸಾನಿಕಾ, ಲಲಿತಾ ಮತ್ತು ಸಂಗಡಿಗರು ‘ದಾಸನ ಮಾಡಿಕೊ’, ಅನುಷಾ, ಭಾವನಾ, ಸಾಕ್ಷಿ, ದೃತಿ, ಅಮೂಲ್ಯ, ಜಯಶ್ರೀ, ಅಲರಿಪು, ದೀಪಾಂಜಲಿ ತಂಡದವರು ‘ತಾರಕ್ಕ ಬಿಂದಿಗೆ’, ಗೀತೆಗೆ ಹೆಜ್ಜೆ ಹಾಕಿದರು. ವೆಂಕಟೇಶ್, ಅನನ್ಯ, ನಿರ್ಮಲಾ, ವೀಣಾ, ಪ್ರೇರಣಾ, ದಿವ್ಯಾ ಮತ್ತು ತಂಡ ‘ಭಾಗ್ಯದ ಲಕ್ಷ್ಮೀ ಭಾರಮ್ಮ’, ಯುಕ್ತಿ, ಅಮೃತಾ, ಪುಷ್ಪಾ, ನಿರ್ಮಲಾ ಮತ್ತು ಸಂಗಡಿಗರು ‘ತಾಳದ ನೃತ್ಯ’. ಸುರಭಿ, ಅಮೂಲ್ಯಾ, ಹರ್ಷಿತಾ, ಕಾವ್ಯಾ, ಚೈತ್ರಾ, ದೃತಿ ಮತ್ತು ಸಂಗಡಿಗರು ಗುಜರಾತಿ ನೃತ್ಯ ಪ್ರದರ್ಶಿಸಿ ಪ್ರೇಕ್ಷಕರನ್ನು ನೃತ್ಯ ಲೋಕದಲ್ಲಿ ತೇಲಿಸಿದರು.ಇದಕ್ಕೂ ಮುನ್ನ ಕಲಾಕೇಂದ್ರದ ಪ್ರಾಂಶುಪಾಲ ಸಿ.ಆರ್. ಶಿವಪ್ರಕಾಶ್, ನಂದಿನಿ ಶಿವಪ್ರಕಾಶ್ ನಟರಾಜ ‘ಚಿಣ್ಣರಲೋಕ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಚಿಣ್ಣರ ಲೋಕದಲ್ಲಿ ನೃತ್ಯ ಪ್ರದರ್ಶಿಸಿದ ಎಲ್ಲ ಮಕ್ಕಳಿಗೂ ಕಲಾ ಕೇಂದ್ರದಿಂದ ಪ್ರಮಾಣ ಪತ್ರ ವಿತರಿಸಲಾಯಿತು.‘ಆತ್ಮೋದ್ಧಾರ ಮಾಡುವವನೇ ನಿಜವಾದ ಗುರು’

ಚಿತ್ರದುರ್ಗ:
ದೇಶದಲ್ಲಿ ಶಿಷ್ಯರಿಗಿಂತ ಗುರುಗಳ ಸಂಖ್ಯೆ ಅಧಿಕವಾಗುತ್ತಿದ್ದು, ಯಾರು ನಿಜಸ್ವರೂಪ, ಪರತತ್ವ, ಬ್ರಹ್ಮತತ್ವ ತಿಳಿಸಿ ಆತ್ಮೋದ್ಧಾರ ಮಾಡುತ್ತಾರೋ ಅವರು ನಿಜವಾದ ಗುರುಗಳು ಎಂದು ಕೂಡಲಿ ಶೃಂಗೇರಿ ಮಠದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ತರಾಸು ರಂಗಮಂದಿರದಲ್ಲಿ ಭಾನುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಂಜನಾ ನೃತ್ಯ ಕಲಾ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಲಾ ಕೇಂದ್ರದ ೨೯ನೇ ವಾರ್ಷಿಕೋತ್ಸವದ ಸಮಾರಂಭ  ಉದ್ಘಾಟಿಸಿ ಆಶೀರ್ವಚನ ನೀಡಿದರು.

ದೇಶದ ೬೪ ವಿದ್ಯೆಗಳಲ್ಲಿ ಒಂದಾಗಿರುವ ಭರತನಾಟ್ಯ ಭಾರತೀಯ ಸಂಸ್ಕೃತಿಯ ಪ್ರಸಿದ್ಧ ನಾಟ್ಯ. ಭರತನಾಟ್ಯ ಕೇವಲ ನೃತ್ಯಕಷ್ಟೇ ಸೀಮಿತ ವಾಗಿಲ್ಲ. ಅದರಲ್ಲಿ ಯೋಗಾಸನ, ಯೋಗಮುದ್ರೆ ಇರುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂದರು.ಪೌರ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ಶಾಸ್ತ್ರೀಯ ನೃತ್ಯ ಶಾಲೆ ಇಲ್ಲದ ಕಾಲದಲ್ಲಿ ಕಲಾ ಕೇಂದ್ರದ ಪ್ರಾಂಶುಪಾಲ ಶಿವಪ್ರಕಾಶ್ ದಂಪತಿ ಮನೆ ಮನೆಗೆ ಅಲೆದು ಎಲ್ಲರ ಸಹಾಯ ಪಡೆದು ೨೯ ವರ್ಷಗಳ ಹಿಂದೆ ನೃತ್ಯ ಕಲಾ ಕೇಂದ್ರ ತೆರೆದು ಭರತನಾಟ್ಯ ಶಾಲೆ ಪ್ರಾರಂಭಿಸಿದರು. ಈವರೆಗೆ ಸುಮಾರು ೨೫ ತಂಡಗಳು ಇವರಿಂದ ಭರತನಾಟ್ಯ ಕಲಿತು ಉನ್ನತ ಸ್ಥಾನ ಅಲಂಕರಿಸಿವೆ ಎಂದು ತಿಳಿಸಿದರು.ಸಾಹಿತಿ ಬಿ.ಎಲ್. ವೇಣು ನೃತ್ಯೋತ್ಸವದ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ರವಿಶಂಕರ್‌ರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಬಿ. ನೀಲಮ್ಮ, ಮಾರುತಿ ಮೋಹನ್, ತಬಲಾ ವಾದಕ ಮುನ್ನಾ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.