‘ಚಿರಂಜೀವಿ’ ಡ್ಯಾನ್ಸ್ ದೇವಾ!

7

‘ಚಿರಂಜೀವಿ’ ಡ್ಯಾನ್ಸ್ ದೇವಾ!

Published:
Updated:

ಡ್ಯಾನ್ಸ್ ದೇವಾ ಪ್ರಭುದೇವ ಮೇಣದ ಪ್ರತಿಮೆಯಲ್ಲಿ ಚಿರಂಜೀವಿಯಾಗಿದ್ದಾರೆ. ಲೋಣಾವಳದಲ್ಲಿರುವ ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂ ಇಂಥದ್ದೊಂದು ಗೌರವವನ್ನು ಪ್ರಭುದೇವ ಅವರಿಗೆ ಸಲ್ಲಿಸಿದೆ. ಮೇಣದಲ್ಲಿ ಮೈದಳೆದಿರುವ ತಮ್ಮದೇ ತದ್ರೂಪಿ ಬೊಂಬೆಯನ್ನು ಈಚೆಗೆ ಪ್ರಭುದೇವ ಅವರೇ ಅನಾವರಣಗೊಳಿಸಿದರು.

ಆ ಮೇಣದ ಪ್ರತಿಮೆಯನ್ನು ಕಂಡು ಪ್ರಭುದೇವ ಒಂದು ಕ್ಷಣ ಬೆರಗಾದರು. ಸಂತೋಷಪಟ್ಟರು. ಕೊನೆಗೆ ಭಾವುಕರಾದರು. ‘ವಾಂಟೆಡ್‌’ ಚಿತ್ರದ ಮೂಲಕ ಬಾಲಿವುಡ್‌ ಚಿತ್ರರಂಗಕ್ಕೆ ಕಾಲಿಟ್ಟ ದಕ್ಷಿಣದ ಪ್ರತಿಭೆ ಪ್ರಭುದೇವ ಈಗ ಬಾಲಿವುಡ್‌ನ ಬಹುಬೇಡಿಕೆಯ ನಿರ್ದೇಶಕರಲ್ಲೊಬ್ಬರು.

ಕೊರಿಯೊಗ್ರಾಫರ್‌ ಆಗಿ, ಸಿನಿಮಾ ನಿರ್ದೇಶಕರಾಗಿ, ನಟನಾಗಿ ಪ್ರಭುದೇವ ಅವರದ್ದು ದೊಡ್ಡ ಹೆಸರು. ಈ ಬಹುಮುಖ ಪ್ರತಿಭೆಯ ಹೆಸರನ್ನು ಅಜರಾಮರಗೊಳಿಸಲು ಲೋಣಾವಳದಲ್ಲಿರುವ ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂನಲ್ಲಿ ಅವರ ಮೇಣದ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ.ಮೇಣದ ಪ್ರತಿಮೆಯನ್ನು ಅನಾವರಣ ಮಾಡಿದ ಪ್ರಭುದೇವ ಆ ಪ್ರತಿಮೆಯನ್ನು ನೇವರಿಸುತ್ತಾ ಭಾವುಕರಾಗಿ ನುಡಿದಿದ್ದು ಹೀಗೆ: ‘ಹಾಯ್‌ ಫ್ರೆಂಡ್ಸ್‌, ಈ ದಿನ ನನ್ನ ಜೀವನದಲ್ಲಿ ಎಂದೂ ಮರೆಯಲಾರದ ದಿನ’. ‘ಸುನಿಲ್‌ ಮತ್ತು ಅವರ ತಂಡ ಈ ಪ್ರತಿಮೆ ಸಿದ್ಧಪಡಿಸಲು ಸಾಕಷ್ಟು ಪರಿಶ್ರಮಪಟ್ಟಿದೆ.

ಅವರ ಕಲೆಯನ್ನು ನಾನು ಮನಸಾರೆ ಅಭಿನಂದಿಸುತ್ತೇನೆ. ನನ್ನೆಲ್ಲಾ ಗೆಳೆಯ, ಗೆಳತಿಯರೇ, ಅದಕ್ಕಿಂತ ಮಿಗಿಲಾಗಿ ನಿಮ್ಮ ಪ್ರೀತಿ ತುಂಬಿದ ಸಂದೇಶಗಳು ನನ್ನನ್ನು ತುಂಬ ಸಂತೋಷಪಡಿಸಿವೆ. ನಿಮ್ಮ ಅಭಿಮಾನಕ್ಕೆ ನನ್ನ ಹೃದಯ ತುಂಬಿ ಬಂದಿದೆ’ ಎಂದು ಪ್ರಭುದೇವ ಟ್ವೀಟಿಸಿದ್ದಾರೆ. ಅಂದಹಾಗೆ, ವಸ್ತುಸಂಗ್ರಹಾಲಯದಲ್ಲಿ ಇರಿಸಿರುವ ಪ್ರಭುದೇವ ಅವರ ಮೇಣದ ಪ್ರತಿಮೆ ಅವರ ಟಿಪಿಕಲ್‌ ಸ್ಟೈಲ್‌ನಲ್ಲೇ ಇದೆ. ಗ್ರೇ ಸೂಟ್‌ನಲ್ಲಿರುವ ಅದು ಎರಡೂ ಕೈಗಳನ್ನು ಪ್ಯಾಂಟ್‌ ಜೇಬಿಗೆ ಇಳಿಬಿಟ್ಟುಕೊಂಡಿದೆ. ಲೋಣಾವಳದಲ್ಲಿರುವ ಮೇಣದ ವಸ್ತುಸಂಗ್ರಹಾಲಯದಲ್ಲಿ ಸ್ಥಾನ ಗಿಟ್ಟಿಸಿದ ಬಾಲಿವುಡ್‌ ಪ್ರತಿಭೆಗಳಲ್ಲಿ ಪ್ರಭುದೇವ ಎರಡನೆಯವರು. ಹಿನ್ನೆಲೆ ಗಾಯಕ ಹರಿಹರನ್‌ ಈ ಗೌರವನ್ನು ಪಡೆದುಕೊಂಡ ಮೊದಲಿಗರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry