‘ಚಿರತೆ ತನ್ನ ಜಾಗ ಕದಲಿಸುವುದೇ?’

7

‘ಚಿರತೆ ತನ್ನ ಜಾಗ ಕದಲಿಸುವುದೇ?’

Published:
Updated:

ನವದೆಹಲಿ (ಪಿಟಿಐ): ಯುಪಿಎ ಸರ್ಕಾರವನ್ನು ತೆಗಳಿದ ಮೋದಿ ವಿರುದ್ಧ  ಗುಡುಗಿರುವ ಕಾಂಗ್ರೆಸ್ ಮುಖಂಡ  ದಿಗ್ವಿಜಯ್‌ ಸಿಂಗ್, ಆಡಳಿತ ಹಾಗೂ ಅಭಿವೃದ್ಧಿ ವಿಷಯಗಳಲ್ಲಿ ಯಾವುದೇ ಕಾಂಗ್ರೆಸ್ ನಾಯಕನ ಜತೆ ಚರ್ಚೆ ನಡೆಸುವಂತೆ ಮೋದಿಗೆ ಸವಾಲು ಹಾಕಿದ್ದಾರೆ.

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವಂಥ ರಾಜಕೀಯದ ಬಗ್ಗೆ ಮೋದಿ ಆಡಿರುವ ಮಾತನ್ನು ಲೇವಡಿ ಮಾಡಿದ ಸಿಂಗ್‌, ‘ ಚಿರತೆ ತನ್ನ ಜಾಗ ಬಿಟ್ಟು ಕದಲುವುದು ಸಾಧ್ಯವೇ’ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

‘ ಕಾಂಗ್ರೆಸ್ ಪಕ್ಷವು  ಜನರನ್ನು ಬಲಪಡಿಸುತ್ತದೆ. ಆದರೆ ಮೋದಿ ತಮ್ಮನ್ನು ತಾವೇ ಬಲಪಡಿಸಿಕೊಳ್ಳುತ್ತಾರೆ. ಆಯ್ಕೆ ನಿಮಗೆ ಬಿಟ್ಟಿದ್ದು!  ಮೋದಿಗೆ ಕಾಂಗ್ರೆಸ್ ಮುಕ್ತ ಭಾರತ ಬೇಕು. ನಮಗೆ ಹಸಿವು ಮುಕ್ತ ಭಾರತ ಬೇಕು. ಮೋದಿ ಉಳ್ಳವರನ್ನು ಬೆಂಬಲಿಸುತ್ತಾರೆ. ನಾವು ಸೌಲಭ್ಯ ವಂಚಿತರನ್ನು ಬೆಂಬಲಿಸತ್ತೇವೆ. ಇಬ್ಬರಲ್ಲಿ ಯಾರು ಬೇಕೋ ಆಯ್ಕೆ ಮಾಡಿಕೊಳ್ಳಿ’ ಎಂದು ಟ್ವೀಟ್‌ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry