‘ಚೋಟಾ ಭೀಮ್’ ಯಶಸ್ವಿ ಪ್ರದರ್ಶನ

ಇತ್ತೀಚೆಗೆ ಬಿಡುಗಡೆಯಾಗಿರುವ ‘ಚೋಟಾ ಭೀಮ್ ಹಿಮಾಲಯನ್ ಅಡ್ವೆಂಚರ್ಸ್’ 2ಡಿ ಸಿನಿಮಾ ಮಕ್ಕಳ ಜೊತೆ ಹಿರಿಯರಿಗೂ ಮನೋರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ.
ಪೋಗೊ ಚಾನೆಲ್ನಲ್ಲಿ ‘ಚೋಟಾ ಭೀಮ್’ ಧಾರಾವಾಹಿಯಾಗಿ ಪ್ರಸಾರವಾಗುತ್ತಿತ್ತು. ಇದೇ ಪಾತ್ರಗಳನ್ನು ಆಧರಿಸಿ ‘ಚೋಟಾ ಭೀಮ್ ಹಿಮಾಲಯನ್ ಅಡ್ವೆಂಚರ್ಸ್’ ಅನಿಮೇಟೆಡ್ ಚಿತ್ರವನ್ನು ರಾಜೀವ್ ಚಿಲಕಾ, ರೂಸರೋ ಬಿ. ನಿರ್ದೇಶಿಸಿದ್ದಾರೆ.
ಚುಟ್ಕಿ, ರಾಜು, ಕಾಲಿಯಾ, ಧೋಲು, ಭೋಲು, ಜಗ್ಗು ಪಾತ್ರಗಳು ತುಂಬ ಉತ್ಸಾಹದಲ್ಲಿ ತೆರೆಯ ಮೇಲೆ ಮೂಡಿ ಬಂದಿವೆ. ಇಂದ್ರವರ್ಮ ರಾಜನ ಆಡಳಿತದ ಧೋಲಕ್ಪುರ ಎಂಬ ರಾಜ್ಯದಲ್ಲಿ ಚೋಟಾ ಭೀಮ್ ಮತ್ತು ಗೆಳೆಯರು ವಾಸುತ್ತಿರುತ್ತಾರೆ. ಆ ರಾಜ್ಯದ ಯುವರಾಣಿ ಇಂದುಮತಿಗೆ ಹಿಮಾಲಯದ ಮಂಜಿನಲ್ಲಿ ಆಟವಾಡಬೇಕೆಂದು ಆಸೆಯಾಗುತ್ತದೆ. ಚೋಟಾಭೀಮ್ ಮತ್ತು ಗೆಳೆಯರು ಇಂದುಮತಿಯೊಂದಿಗೆ ಹಿಮಾಲಯದ ಮಡಿಲಿನಲ್ಲಿರುವ ಮನಾಲಿಗೆ ಹೊರಡುತ್ತಾರೆ. ಮನಾಲಿ ರಾಜ್ಯಕ್ಕೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಹಿಡಂಬಾ ಎಂಬ ರಾಕ್ಷಸನನ್ನು ಚೋಟಾ ಭೀಮ್ ನಾಶ ಮಾಡುವುದೇ ಸಿನಿಮಾದ ಕಥೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.