ಮಂಗಳವಾರ, ಜನವರಿ 21, 2020
19 °C

‘ಛಲದಿಂದ ಗುರಿ ಸಾಧನೆ ಸಾಧ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೀಣ್ಯ ದಾಸರಹಳ್ಳಿ: ‘ನಮ್ಮಲ್ಲಿ ಸಾಧನೆ ಮಾಡಬೇಕು ಎಂಬ ಹಂಬಲ ಇದ್ದಾಗ ಮಾತ್ರ ಗುರಿ ಮುಟ್ಟಲು ಸಾಧ್ಯ’ ಎಂದು ಕ್ರೀಡಾಪಟು ಮಾಲತಿ ಹೊಳ್ಳ ಸಲಹೆ ಮಾಡಿದರು. ಹೆಸರಘಟ್ಟ ರಸ್ತೆಯ ಹಾವನೂರು ಬಡಾವಣೆಯ ಸೌಂದರ್ಯ ಶಾಲೆಯ ವಾರ್ಷಿಕ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು.‘ತಂದೆ ತಾಯಿಗಳು ಮಕ್ಕಳನ್ನು ಬೇರೆ ಮಕ್ಕಳಿಗೆ ಹೋಲಿಕೆ ಮಾಡುವುದನ್ನು ಬಿಟ್ಟು ಭಾವಗಳನ್ನು ಗಮನಿಸುತ್ತಾ ಅವರಲ್ಲಿರುವ ಪ್ರತಿಭೆಯನ್ನು ಹೊರ ತರಲು ಪ್ರಯತ್ನಿಸಿ’ ಎಂದು ಸಲಹೆ ಮಾಡಿದರು. ರಾಷ್ಟ್ರೀಯ ತರಬೇತುದಾರ ಸಂಪತ್‌ ಕುಮಾರ್‌, ಸೆಂಟ್‌ ಜೋಸೆಫ್‌ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಅನುಪ್‌, ಟ್ರಸ್ಟ್‌ ಅಧ್ಯಕ್ಷ ಸೌಂದರ್ಯ ಮಂಜಪ್ಪ, ಮುಖ್ಯ ಕಾರ್ಯನಿರ್ವಹಣಾ­ಧಿಕಾರಿ ಕೀರ್ತನ್‌ ಕುಮಾರ್‌, ನಿರ್ದೇಶಕ ಡಾ.ಜಯರಾಮ ಶೆಟ್ಟಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)