‘ಜಂಗಮರಿಗೆ ಸಾಲದ ನೆರವು’

7

‘ಜಂಗಮರಿಗೆ ಸಾಲದ ನೆರವು’

Published:
Updated:

ನಿಡಗುಂದಿ: ಜಂಗಮ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಹಾಗೂ ಬಡ ಜನರ ಸ್ವ ಉದ್ಯೋಗಕ್ಕೆ ಚಿಕ್ಕ ಸಾಲಗಳನ್ನು ನೀಡಿ ಅವರ ಅಭಿವೃದ್ಧಿಗೆ ಶ್ರಮಿಸುತ್ತಿರುವ ನಿಡಗುಂದಿಯ ವೀರಮಹೇಶ್ವರ ಕೋ ಆಪರೇಟಿವ್ ಸೊಸೈಟಿಯ ಕಾರ್ಯ ಶ್ಲಾಘನೀಯ ಎಂದು ಚಿಮ್ಮಲಗಿಯ ನೀಲಕಂಠ ಸ್ವಾಮೀಜಿ ಹೇಳಿದರು.ನಿಡಗುಂದಿ ಪಟ್ಟಣದ ವೀರಮಹೇಶ್ವರ ಕೋ ಆಪರೇಟಿವ್ ಸೊಸೈಟಿಯ 10ನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕಾರ ವಿತರಿಸಿ ಮಾತನಾಡಿದರು.ನಿಡಗುಂದಿಯ ರುದ್ರೇಶ್ವರ ಸ್ವಾಮೀಜಿ ಮಾತನಾಡಿದರು. ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಗುಮತಿಮಠ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೋ ಆಪರೇಟಿವ್ ಸೊಸೈಟಿಯ ಜಿಲ್ಲಾ ಪ್ರಬಂಧಕ ಎನ್.ಎಸ್. ಹಣಗಿ, ತಾಲ್ಲೂಕು ಪ್ರಬಂಧಕ ಪಿ.ಎಸ್. ಈಳಗೇರ,  ವಿಜಾಪುರ ಪಂಚಾಚಾರ್ಯ ಪತ್ತಿನ ಸಂಘ ಅಧ್ಯಕ್ಷ ರಾಜು ಮಗೀಮಠ, ಎಸ್.ಎಸ್. ಹಿರೇಮಠ, ಶಾಂತಯ್ಯ ಸಾಲಿಮಠ, ಕರುಣಾಕರ ಶೆಟ್ಟಿ, ಬಿ.ಎಸ್. ಯರಂತೆಲಿಮಠ, ಎಸ್.ಪಿ. ಹಿರೇಮಠ, ಡಾ ವಿಶ್ವನಾಥ ಮಠ, ಲಕ್ಷ್ಮಣ ಮಾದರ, ಪುರಾಣಿಕಮಠ, ಸಂಗಮೇಶ ಸಾಲಿಮಠ ಭಾಗವಹಿಸಿದ್ದರು. ಎಸ್.­ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.ರಾಜ್ಯ ಮಟ್ಟಕ್ಕೆ ಆಯ್ಕೆ: ಸಮೀಪದ ವಂದಾಲ ಶಾಕಂಬರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಈ ಶಾಲೆಯ ವಿದ್ಯಾರ್ಥಿನಿಯರ ತಂಡ ಜಿಲ್ಲಾ ಮಟ್ಟದಲ್ಲಿ ಪ್ರಥಮ, ಇದೇ ಶಾಲೆಯ ವಿದ್ಯಾರ್ಥಿಗಳ ತಂಡ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು, ಎರಡೂ ತಂಡಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿವೆ.ವಿದ್ಯಾರ್ಥಿನಿಯರ ತಂಡದಲ್ಲಿ ಜ್ಯೋತಿ ವಡ್ಡರ, ಪೂಜಾ ರುಡ್ಡಗೋಳ, ಬನದೇವಿ ಬೀಳಗಿ, ಕಾವೇರಿ ತಿಮ್ಮಾಪುರ, ಬನದೇವಿ ಯಡಹಳ್ಳಿ ಅವರ ತಂಡ ಪ್ರಥಮ ಸ್ಥಾನ ಪಡೆದಿದೆ. ಶ್ರೀಶೈಲ ಕಮತಗಿ, ಸಾಗರ ಮಮದಾಪುರ, ಅಡವಯ್ಯ ಹಿರೇಮಠ, ಅರುಣ ಮೂಡಲಗಿ, ಶಿವಾನಂದ ಬ್ಯಾಲಾಳ ಅವರ ತಂಡ ದ್ವಿತೀಯ ಸ್ಥಾನ ಪಡೆದಿದೆ.ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಶಾಂತ ಗಿಡಜಾಡರ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry