ಭಾನುವಾರ, ಜೂನ್ 13, 2021
24 °C

‘ಜನತೆಗೆ ವಂಚಿಸಿದ ಅಂಗಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಕಾಕ: ತಾಲ್ಲೂಕಿಗೆ ಅಪಮಾನ ಮಾಡಿರುವ ಸಂಸದ ಸುರೇಶ ಅಂಗಡಿಯವರಿಗೆ ಈ ಚುನಾವಣೆಯಲ್ಲಿ ಮಣ್ಣು ಮುಕ್ಕಿಸಿ ಲಕ್ಷ್ಮಿ ಹೆಬ್ಬಾಳ್ಕರ ಅವರನ್ನು ಲೋಕಸಭೆಗೆ ಕಳುಹಿಸಿಕೊಡುವ ಮೂಲಕ ಮುಯ್ಯಿ ತೀರಿಸಲು ಜನ ಮುಂದಾಗಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಕಾರ್ಯಕರ್ತರಲ್ಲಿ ಮನವಿ ಮಾಡಿದರು.ಅರಭಾವಿ ವಿಧಾನಸಭಾ ಮತಕ್ಷೇತ್ರದ ಕಲ್ಲೋಳ್ಳಿ ಗ್ರಾಮದ ಗಾಂಧಿ ಮೈದಾನ­ದಲ್ಲಿ ಬುಧವಾರ ನಡೆದ ಬೆಳಗಾವಿ ಲೋಕಸಭಾ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ ಅವರ ಪರ ಪ್ರಚಾರ ಮಾಡಿದ ಅವರು, ಸಹೋದರ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬಿಜೆಪಿ ಶಾಸಕತ್ವದಿಂದ ಅನರ್ಹಗೊಂಡ ಸಂದರ್ಭದಲ್ಲಿ ಗೋಕಾಕ ತಾಲ್ಲೂಕನ್ನು ಬಿಹಾರ್‌ಗೆ ಹೋಲಿಸಿ ತಾಲ್ಲೂಕಿನಾ­ದ್ಯಂತ ವಿವಾದಾತ್ಮಕ ಭಾಷಣ ಮಾಡಿ ತಾಲ್ಲೂಕಿನ ಜನತೆಯನ್ನು ಅಪಮಾನ ಮಾಡಿದ್ದರು. ಆ ಅಪಮಾನದ ಸೇಡನ್ನು ತೀರಿಸುವ ಕಾಲ ಬಂದಿದೆ ಎಂದು ಅವರು ಹೇಳಿದರು.ಕಳೆದೆರಡು ಅವಧಿಗಳಲ್ಲಿ ವಾಜಪೇಯಿ ಹಾಗೂ ಯಡಿಯೂರಪ್ಪ ಅವರ ಹೆಸರು ಹೇಳಿಕೊಂಡು ಗೆದ್ದ ಸುರೇಶ ಅಂಗಡಿ ಈ ಬಾರಿ ನರೇಂದ್ರ ಮೋದಿ ಮುಖವಾಡ ಧರಿಸಿ ಮತ ಕೇಳುತ್ತಿದ್ದಾರೆ ಎಂದರು.ಲಕ್ಷ್ಮಿ ಹೆಬ್ಬಾಳ್ಕರ ಮಾತನಾಡಿ, ಬೆಳಗಾವಿ ಸಮಗ್ರ ಅಭಿವೃದ್ಧಿಗೆ ನನ್ನನ್ನು ಆಯ್ಕೆ ಮಾಡಬೇಕು. ನಿಮ್ಮ ಸೇವೆಗೆ ಸದಾ ಸಿದ್ಧಳಿದ್ದೇನೆ. ದೇಶದ ಐಕ್ಯತೆ ಹಾಗೂ ಪ್ರಗತಿಗಾಗಿ ಈ ಪಕ್ಷವನ್ನು ಬೆಂಬಲಿಸಬೇಕು. ಬಿಜೆಪಿ ಕೇವಲ ಜಾತಿ ಆಧಾರಿತ ಪಕ್ಷವಾಗಿದೆ. ಸುರೇಶ ಅಂಗಡಿ ಅವರಿಂದ ಸಾಧನೆಯೇನೂ ಆಗಿಲ್ಲ. ಸುಳ್ಳು ಹೇಳಿ ಮತದಾರರನ್ನು ವಂಚಿಸುವುದನ್ನು ಅವರು ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ ಎಂದರು.ಕಾಂಗ್ರೆಸ್‌ ಮುಖಂಡರಾದ ಬಸಗೌಡ ಪಾಟೀಲ, ಡಾ. ರಾಜೇಂದ್ರ ಸಣ್ಣಕ್ಕಿ, ಬಾಳಪ್ಪ ಬೆಳಕೂಡ ಮಾತನಾಡಿದರು.

ಬಿ.ಆರ್.ಪಾಟೀಲ, ಶಂಕರಗೌಡ ಪಾಟೀಲ, ಸುಭಾಷ ಕುರಬೇಟ, ಬಸು ದಾಸನವರ, ಯಲ್ಲವ್ವ ನಂದಿ, ಮಹಾಂತೇಶ ಕಪ್ಪಲಗುದ್ದಿ, ಮಲ್ಲಪ್ಪ ಹೆಬ್ಬಾಳ, ಅಶೋಕ ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.