ಮಂಗಳವಾರ, ಜೂನ್ 22, 2021
29 °C

‘ಜನಪರ ಯೋಜನೆಗೆ ಸರ್ಕಾರದ ಹಣ ಸದುಪಯೋಗವಾಗಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ‘ಸರ್ಕಾರದ ಹಣ ಜನಪರ ಯೋಜನೆಗಳಿಗೆ ಸದುಪಯೋಗ ಆಗಬೇಕು’ ಎಂದು ಶಾಸಕ ಪ್ರಮೋದ್‌ ಮಧ್ವರಾಜ್‌ ಹೇಳಿದರು.

ಅಂಬಲಪಾಡಿಯ ಬಿಲ್ಲವ ಸೇವಾ ಸಂಘದ ವಿಠೋಬ ಭಜನಾ ಮಂದಿರಕ್ಕೆ ಇತ್ತೀಚೆಗೆ  ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಸಭಾಕಾರ್ಯ­ಕ್ರಮದಲ್ಲಿ ಅವರು ಮಾತನಾಡಿದರು.ಸಮುದಾಯ ಭವನ ನಿರ್ಮಾಣಕ್ಕೆ ₨ ೨೫ ಲಕ್ಷ ಅನುದಾನ ಮಂಜೂರು ಮಾಡಿದ ಶಾಸಕರನ್ನು ಸನ್ಮಾನಿಸ­ಲಾ­ಯಿತು.ಸಂಘದ ಅಧ್ಯಕ್ಷ ಮಹಾಬಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಅಂಬಲ­ಪಾಡಿ ಗ್ರಾಮ ಪಂಚಾಯಿತಿ ಸದಸ್ಯ ರಾಜೇಂದ್ರ ಪಂದುಬೆಟ್ಟು, ಶಿವ ಕುಮಾರ್, ಲಕ್ಷ್ಮಣ ಪೂಜಾರಿ, ಸಂಘದ ಸದಸ್ಯ ರಾಜು ಪೂಜಾರಿ, ಭಾಸ್ಕರ ಪೂಜಾರಿ, ಮಂಜಪ್ಪಸುವರ್ಣ, ಗೋಪಾಲ ಸಿ ಬಂಗೇರ, ಮಾಧವ ಪೂಜಾರಿ, ಗುಡ್ಡ ಪೂಜಾರಿ, ಶೇಖರ ಪೂಜಾರಿ, ಸುಧಾಕರ ಪೂಜಾರಿ, ಕೃಷ್ಣ ಕೋಟ್ಯಾನ್, ಸುರೇಶ್ ಪೂಜಾರಿ ಇದ್ದರು. ಕುಶಲ್‌ ಕುಮಾರ್ ಮತ್ತು ಎ. ದಯಾನಂದ ಕಾರ್ಯಕ್ರಮ ನಿರೂಪಿ­ಸಿದರು, ಸಂಘದ ಕಾರ್ಯದರ್ಶಿ ರಮೇಶ್ ಕೋಟ್ಯಾನ್‌ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.