‘ಜನರಲ್‌ ತಿಮ್ಮಯ್ಯ ಜೀವನ ಅನುಕರಣೀಯ’

7

‘ಜನರಲ್‌ ತಿಮ್ಮಯ್ಯ ಜೀವನ ಅನುಕರಣೀಯ’

Published:
Updated:

ವಿರಾಜಪೇಟೆ:  ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರ ಶಿಸ್ತುಬದ್ಧ ಜೀವನಶೈಲಿಯನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳುವಂತೆ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಎಂ.ಬಿ. ಕಾವೇರಪ್ಪ ಸಲಹೆ ಮಾಡಿದರು.ವಿರಾಜಪೇಟೆಯ ಸಂತ ಅನ್ನಮ್ಮ ಶಾಲೆಯ ಸಭಾಂಗಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಈಚೆಗೆ ಏರ್ಪಡಿಸಿದ್ದ ಮಂಡೇಪಂಡ ಅಕ್ಕಮ್ಮ ದತ್ತಿನಿಧಿ  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಾಲೇಜಿನ ಕನ್ನಡ ಸಂಘದ ಅಧ್ಯಕ್ಷೆ ಮೌನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಹುಟ್ಟು, ಬದುಕು ಮತ್ತು ಸಾಧನೆಗಳ ಬಗ್ಗೆ ವಿವರಿಸಿದರು.

ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಕನ್ನಡ ಭಾಷೆ, ನಾಡು, ನುಡಿ, ಸಂಸ್ಕೃತಿಯ ಪರಿಚಯ ವಿದ್ಯಾರ್ಥಿಗಳಿಗೆ ಆಗಬೇಕು ಎನ್ನುವ ದೃಷ್ಟಿಯಿಂದ ಕಸಾಪ  ದತ್ತಿನಿಧಿ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ನಡೆಸಲು ತೀರ್ಮಾನಿಸಿದೆ ಎಂದರು. ವಿದ್ಯಾರ್ಥಿನಿಯರಾದ ಶಿಪಿನ ದೇಚಮ್ಮ ಅವರು ಜನರಲ್ ತಿಮ್ಮಯ್ಯ ಅವರ ಬದುಕಿನ ಘಟನೆ ಮತ್ತು ಪರಿಚಯ ಮಾಡಿದರು. ವಿದ್ಯಾರ್ಥಿನಿಯರಾದ ರೋಸಲಿನ್ ಸ್ವಾಗತಿಸಿ, ವಿದ್ಯಾ ವಂದಿಸಿದರು. ಲಿಖಿತ ಮತ್ತು ಪ್ರತಿಕಾ ನಿರೂಪಿಸಿದರು. ಉಪನ್ಯಾಸಕ ಅರ್ಜುನ್ ದತ್ತಿನಿಧಿ ಉಪನ್ಯಾಸಕರ ಪರಿಚಯ ಮಾಡಿದರು. ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಮದಲೈ ಮುತ್ತು, ವಿರಾಜಪೇಟೆ ತಾಲ್ಲೂಕು ಕಸಾಪ ಕಾರ್ಯದರ್ಶಿ ಡಿ. ರಾಜೇಶ್ ಪದ್ಮನಾಭ ಮತ್ತು ಚಿಪ್ಪಿ ಕಾರ್ಯಪ್ಪ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry