‘ಜನರಿಂದ ಜನಪದ ಕಲೆ ದೂರ’

7

‘ಜನರಿಂದ ಜನಪದ ಕಲೆ ದೂರ’

Published:
Updated:
‘ಜನರಿಂದ ಜನಪದ ಕಲೆ ದೂರ’

ಪೀಣ್ಯ ದಾಸರಹಳ್ಳಿ: ‘ಮಾನಸಿಕ ಒತ್ತಡಕ್ಕೆ ಒಳಗಾದವರಿಗೆ ಜನಪದ ಕಲೆಗಳಿಂದ ನೆಮ್ಮದಿ ದೊರೆಯುತ್ತಿತ್ತು. ಈಗ ಈ ಕಲೆಗಳು ಜನರಿಂದ ದೂರವಾಗುತ್ತಿವೆ’ ಎಂದು ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಹೇಳಿದರು.ಹೆಗ್ಗನಹಳ್ಳಿ ಬಸ್‌ ನಿಲ್ದಾಣದ ಮೈದಾನದಲ್ಲಿ ವಿಶ್ವ ಚೇತನ ಬುದ್ಧ ಎಜುಕೇಷನಲ್‌ ಟ್ರಸ್ಟ್‌ ವತಿಯಿಂದ ನಡೆದ ಜನಪದ ಕಲಾಮೇಳದಲ್ಲಿ ಅವರು ಮಾತನಾಡಿದರು.‘ವೈಜ್ಞಾನಿಕ ಮನೋಭಾವ ಹೆಚ್ಚಾದಂತೆ ಕಲೆ ಕಣ್ಮರೆಯಾಗುತ್ತಿದ್ದು ಮುಂದಿನ ಪೀಳಿಗೆಗೆ ಜನಪದ ಕಲೆಯನ್ನು ಚಿತ್ರಗಳ ಮೂಲಕ ನೋಡುವ ಪರಿಸ್ಥಿತಿ ಎದುರಾಗಬಹುದು’ ಎಂದು ವಿಷಾದ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry