ಗುರುವಾರ , ಜೂನ್ 24, 2021
28 °C

‘ಜನರಿಗೆ ಕಾನೂನು ಅರಿವು ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳಂದ: ಕಾನೂನಿನ ಎದುರು ಎಲ್ಲರೂ ಸಮಾನರು. ಆದರೆ ದಿನನಿತ್ಯದ ಜೀವನ ಶೈಲಿಯಲ್ಲಿ ಕಾನೂನಿನ ಅರಿವು ಇಲ್ಲದೆ ಜನರು ಅನಾಹುತ ಸೃಷ್ಟಿಸುವರು ಅಥವಾ ಶೋಷಣೆಗೆ ಒಳಗಾಗುವರು. ಇದರಿಂದ ತಪ್ಪಿಸಲು ಜನರು ಕಾನೂನಿನ ಅರಿವು ಹೊಂದುವುದು ಅಗತ್ಯವಾಗಿದೆ ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶ ಡಿ.ಆರ್.ವೆಂಕಟ ಸುದರ್ಶನ ಹೇಳಿದರು.ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,­ಕಂದಾಯ ಹಾಗೂ ಆರೋಗ್ಯ ಇಲಾ­ಖೆಗಳ ಸಂಯುಕ್ತ ಆಶ್ರಯದಲ್ಲಿ ಮಹಿಳಾ ದಿನಚಾರಣೆ ನಿಮಿತ್ತ ಪುರ­ಸಭೆ ಆವರಣದಲ್ಲಿ ಭಾನುವಾರ ‘ ಮಹಿಳೆ­ಯರಿಗೆ ಕಾನೂನು ಅರಿವು–ನೆರವು’ ಕಾರ್ಯಕ್ರಮ ಉದ್ಘಾಟಿಸಿ ಅವರು ­ಮಾತನಾಡಿದರು.ಸಮಾಜದಲ್ಲಿನ ದ್ವೇಷ ಮರೆಯಾಗಿ ಸಮನ್ವಯತೆ ಸಾಧಿಸಲು ಲೋಕ ಅದಾ­ಲತ್ ಯಶಸ್ವಿಯಾಗಬೇಕು, ಜಿಲ್ಲಿಯಲ್ಲಿ ಒಟ್ಟು 1800 ಪ್ರಕರಣಗಳು ಲೋಕ ಅದಾಲತ್ ನಲ್ಲಿ ಇತ್ಯರ್ಥ ಪಡೆಸ­ಲಾಗಿದೆ. ವಕೀಲರ ಸಾಮಾಜಿಕ ಕಾಳ­ಜಿಯಿಂದ ಇನ್ನೂ ಅಧಿಕ ಪ್ರಕರಣಗಳು ಬಗೆ­ಹರಿಸಲು ಸಾಧ್ಯವಾ­ಗುವುದು ಎಂದರು.ತಹಶೀ­ಲ್ದಾರ್‌ ಪರಮೇಶ್ವರ ಸ್ವಾಮಿ, ವಕೀಲ ವಿ.ಕೆ.ಇನಾಂದಾರ, ದೇವಾ­ನಂದ ಹೊದಲೂರಕರ, ಪಿ.ಎನ್­.ಶಹಾ ಮಾತನಾಡಿದರು. ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ರಮೇಶ ಏಕಬೋಟೆ, ಜೆಎಮ್ಎಫ್ ಸಿ ನ್ಯಾಯಾಧೀಶ ಪ್ರಭು ಎನ್ ಬಡಿಗೇರ, ವಕೀರರ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಡಿ.ಭೋಸಗೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಶೋಕ ರಾಜನ, ತಾಲ್ಲೂಕು ಆರೋಗ್ಯ ಅಧಿಕಾರಿ ಸುಚಿ­ತ್ರಾ ಬಿಲಗುಂದಿ, ಪುರಸಭೆ ಪ್ರಭಾರ ಮುಖ್ಯ ಅಧಿಕಾರಿ ಪ್ರಕಾಶ ಬಿರಾದಾರ, ಸರ್ಕಾರಿ ವಕೀಲ ಶರಣಗೌಡ ಪಾಟೀಲ, ವಕೀಲ ಮಹಾದೇವ ಹತ್ತಿ,ವಕೀಲರ ಸಂಘದ ಕಾರ್ಯದರ್ಶಿ ಸ್ವಾಮಿರಾವ ಚನ್ನಗೊಂಡ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.