ಬುಧವಾರ, ಜೂನ್ 16, 2021
21 °C

‘ಜಾತ್ಯತೀತ ಸಮಾಜಕ್ಕೆ ಶರಣರ ಶ್ರಮ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಗಾರಪೇಟೆ: ವಚನಕಾರರ ತತ್ವ, ಆದರ್ಶಗಳನ್ನು ಆಧುನಿಕ ಸಮಾಜ ಕಡೆಗಣಿಸಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕ ಅಧ್ಯಕ್ಷ ಆರ್.ಆಶ್ವಥ್ ಅಭಿಪ್ರಾಯಪಟ್ಟರು.ತಾಲ್ಲೂಕಿನ ಎಸ್.ಮಾದಮಂಗಲ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬಸವಲಿಂಗ ಸ್ವಾಮಿ ವಿರಕ್ತ ಮಠದ ಸಂಯುಕ್ತ ಆಶ್ರಯದಲ್ಲಿ ಕೆ.ಚನ್ನಬಸವಯ್ಯ ಸ್ಮರಣಾರ್ಥ ಭಾನುವಾರ ಏರ್ಪ­ಡಿಸಿದ್ದ ಶಿವ ಪೂಜೆ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ­ದಲ್ಲಿ ಮಾತ­ನಾಡಿ, ವಚನಕಾರರು ಜಾತ್ಯತೀತ ಸಮಾಜ ಕಟ್ಟಲು ಅವಿರತ ಶ್ರಮ ವಹಿಸಿದ್ದರು. ಆದರೆ ಇಂದಿನ ಸಮಾಜದಲ್ಲಿ ಅವರನ್ನು  ಜಾತಿ ಚೌಕಟ್ಟಿಗೆ ಸೀಮಿತಗೊಳಿಸಿರುವುದು  ವಿಷಾದದ ಸಂಗತಿ ಎಂದರು.  ಅಲ್ಲಮ ಪ್ರಭು, ಬಸವಣ್ಣ, ಅಕ್ಕಮಹಾದೇವಿ, ಜೇಡರ ದಾಸಿ­ಮಯ್ಯ, ಅಂಬಿಗರ ಚೌಡಯ್ಯ ಅವರು ಸಮಾಜದಲ್ಲಿ ಮಾಡಿದ ಕ್ರಾಂತಿ ಇಂದಿನ ಪೀಳಿಗೆಗೆ ದಾರಿದೀಪವಾಗಬೇಕಿದೆ ಎಂದು ತಿಳಿಸಿದರು.ಬೆಂಗಳೂರಿನ ಗಂಜಾ ಮಠದ ಚಿದ್ಘನ ಸ್ವಾಮೀಜಿ  ಆರ್‌.ಜಗ­ದಾಂಬಿಕೆ ಅವರ ‘ಬಸವ ದೀಪಿಕೆ’ ಪುಸ್ತಕ ಬಿಡುಗಡೆ ಮಾಡಿದರು. ಶಿವಪೂಜೆ, ಪಾದ ಪೂಜೆ, ಗದ್ದುಗೆ ಪೂಜೆ, ಮಹಾ ಮಂಗಳಾರತಿ ಮಾಡಿ, ಆಶೀ­ರ್ವಚನ ನೀಡಿದರು.ಅಖಿಲ ಭಾರತ ವೀರಶೈವ ಮಹಾ ಸಭಾದ ಜಿಲ್ಲಾ ಘಟಕ ಅಧ್ಯಕ್ಷ ಎ.ಎನ್.­ಸದಾಶಿವಯ್ಯ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಕೋಗಿಲಹಳ್ಳಿ ಕೃಷ್ಣಪ್ಪ ಅವರು ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆ ಕುರಿತು ಉಪನ್ಯಾಸ ನೀಡಿದರು.ಕಸಾಪ ಮಾಜಿ ಅಧ್ಯಕ್ಷೆ ಭಾರತಿ ನಂಜುಂಡಪ್ಪ, ಕೆ.ಸಿ.ಉಮೇಶ್ ಕುಮಾರ್, ಸಾಹಿತಿ ವೆಂಕೋಬರಾವ್ ಪಡುತಾರೆ, ವೆಂಕಟೇಶಪ್ಪ, ಶಶಿ­ಕುಮಾರ್, ಶ್ಯಾಮಮೂರ್ತಿ ಜಯ­ರಾಮ್, ವಿಜಯಕುಮಾರ್, ಕುಮು­ದಿನಿ, ಕೆ.ಜಿ.ಮಂಜುನಾಥ್, ಬಿ.ಜಿ.­ನಂಜಪ್ಪ, ಆ.ಪು.ಬಸವರಜು, ರಾಜಪ್ಪ ಇತರರು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.