ಸೋಮವಾರ, ಜೂನ್ 14, 2021
23 °C

‘ಜಾನಪದ ಸಂಪನ್ಮೂ ಲ ಬಳಸಿ ಆಧುನಿಕರಾಗಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಗ್ಗಾವಿ:‘ಜಾಗತೀಕರಣ ಮತ್ತು ಆಧು ನಿಕತೆಯಿಂದ ಜನಪದ ಸಂಸ್ಕೃತಿ, ದೇಶಿ ಪರಂಪರಾಗತ ಜ್ಞಾನ ಹಾಳಾಗುತ್ತಿದೆ ಎಂದು ಕೊರಗುವ ಬದಲು ಜನಪದ ಸಂಪನ್ಮೂಲಗಳನ್ನು ಬಳಸಿಕೊಂಡು ವಿದೇಶಿಯತೆಯನ್ನು ಎದುರಿಸಬಹುದು’ ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಶ್ರೀಕಂಠ ಕೂಡಿಗೆ ಸಲಹೆ ನೀಡಿದರು.ತಾಲ್ಲೂಕಿನ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಹೊನ್ನಾವರದ ಜಾನಪದ ವಿಶ್ವ ಪ್ರತಿಷ್ಠಾನ ಹಾಗೂ ಬೆಂಗಳೂರ ಪ್ರಗತಿ ಗ್ರಾಫಿಕ್ಸ್ ಸಹಯೋಗದಲ್ಲಿ ಭಾನುವಾರ ನಡೆದ ಜಾನಪದ ದೀಪಾರಾಧನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಕಡಿಮೆ ವೆಚ್ಚ, ಸ್ಥಳೀಯ ಸಂಪನ್ಮೂಲಗಳಿಂದ ಹೊಸ ವಿನ್ಯಾಸ ದೊಂದಿಗೆ ಆಧುನಿಕತೆಗಿಂತ ಉತ್ತಮ ವಾದುದ್ದನ್ನು ನಮ್ಮದಾಗಿಸಿ ಕೊಳ್ಳಬಹುದಾಗಿದೆ ಎಂದು ಹೇಳಿದರು.ಜಾನಪದ ವಿವಿ ಕುಲಪತಿ ಪ್ರೊ.ಅಂಬಳಿಕೆ ಹಿರಿಯಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಜ್ಞಾನದ ಹಸಿವಿದ್ದರೆ ಜೀವನಾನುಭವ ಮತ್ತು ಲೋಕಾನುಭವ ಪಡೆಯುವುದ ರೊಂದಿಗೆ ಸಾರ್ಥಕತೆ ಸಾಧಿಸಬಹುದು ಎಂದರು.ಶಿರಸಿ ಶ್ರೀ ಮಾರಿಕಾಂಬೆ, ಹಾಲಕ್ಕಿ ಒಕ್ಕಲಿಗರ ಕಥನಗಳು, ಬೋನ್ಸಾಯ್‌ ವಟವೃಕ್ಷ, ಬಾಲಬೋಧಿ, ಮಾರ್ಗ ಕಾವ್ಯ ಕಿರಣ ಮತ್ತು ಎನ್.ಆರ್. ನಾಯಕರ ಬದುಕು- ಬರಹ ಎನ್ನುವ ಪುಸ್ತಕಗಳನ್ನು ಬಿಡುಗಡೆ ಮಾಡ ಲಾಯಿತು.ವಿಚಾರ ಸಂಕಿರಣ 

ಯು.ಎಸ್ ರಾಮಣ್ಣ ಅವರ ಅಧ್ಯಕ್ಷತೆಯಲ್ಲಿ ವಿಚಾರ ಸಂಕಿರಣವನ್ನು ಆಯೊಜಿಸಲಾಗಿತ್ತು. ಜಾನಪದ ವಸ್ತು ಸಂಗ್ರಹಾಲಯದ ವಿವಿಧ ಪರಿಕಲ್ಪನೆ ಗಳು ವಿಷಯವಾಗಿ ಹಾಡಿದರು. ಡಾ.ಎನ್.ಆರ್ ನಾಯಕ ಪ್ರಾಸ್ತಾವಿ ಕವಾಗಿ ಮಾತನಾಡಿದರು. ಜಾನಪದ ವಿವಿ ಕುಲಸಚಿವ ಡಾ.ಡಿ.ಬಿ.ನಾಯಕ ಸ್ವಾಗತಿಸಿದರು, ಗಿರಿಜಾ  ನಿರೂಪಿಸಿ ದರು.  ಶಾಂತಿ  ವಂದಿಸಿದರು. ಹೊನ್ನಾ ವರದ ನಾಗರಾಜ ಸಿದ್ದಿ ತಂಡದವರಿಂದ ಜಾನಪದ ನೃತ್ಯ ನಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.