ಗುರುವಾರ , ಫೆಬ್ರವರಿ 25, 2021
29 °C

‘ಜಿಡಿಪಿ’ ಶೇ6ಕ್ಕೆ: ಚಿದಂಬರಂ ಭವಿಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಜಿಡಿಪಿ’ ಶೇ6ಕ್ಕೆ: ಚಿದಂಬರಂ ಭವಿಷ್ಯ

ನವದೆಹಲಿ(ಪಿಟಿಐ): ಭಾರತ 2014; 15ನೇ ಹಣಕಾಸು ವರ್ಷದಲ್ಲಿ ಶೇ 6ರ ಪ್ರಮಾಣದಲ್ಲಿ ‘ಆರ್ಥಿಕ ಪ್ರಗತಿ’ ದಾಖಲಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ.ಇಲ್ಲಿ ಗುರುವಾರ ಕಾಂಗ್ರೆಸ್‌ ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೈಗೊಂಡ ಸಮರ್ಥ ಆರ್ಥಿಕ ನೀತಿಗಳು ಮತ್ತು ಬಂಡವಾಳ ಹೂಡಿಕೆ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿ ರುವುದು ದೇಶದ ಪ್ರಗತಿಗೆ ಉತ್ತೇಜನ ಕಾರಿಯಾಗಿದೆ. ಇದರ ಪರಿಣಾಮ ವಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ‘ಒಟ್ಟಾರೆ ರಾಷ್ಟ್ರೀಯ ಉತ್ಪಾದನೆ’ (ಜಿಡಿಪಿ) ಶೇ 6ಕ್ಕೇರುವ ಸಂಭವ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಅನುಸರಿಸಿದರೆ?

ಚುನಾವಣೆ ನಂತರದ ನೂತನ ಸರ್ಕಾರ ಮಧ್ಯಾಂತರ ಮುಂಗಡಪತ್ರದಲ್ಲಿ ರೂಪಿಸಿದ 10 ಅಂಶಗಳ ಕಾರ್ಯಸೂಚಿಯನ್ನು ಮತ್ತು ಸಶಕ್ತ ನೀತಿಗಳನ್ನು ಅನುಸರಿಸಿದರೆ ಪ್ರಸಕ್ತ ಹಣಕಾಸು ವರ್ಷದ ಪ್ರಗತಿ 2013; 14ನೇ ಹಣಕಾಸು ವರ್ಷಕ್ಕಿಂತಲೂ ಉತ್ತಮವಾಗಿರಲಿದೆ ಎಂದು ಭವಿಷ್ಯ ನುಡಿದರು.2009; 10ನೇ ಹಣಕಾಸು ವರ್ಷ ದಲ್ಲಿ ದೇಶದ ‘ಜಿಡಿಪಿ’ ಶೇ 9ರಷ್ಟು ಗರಿಷ್ಠ ಮಟ್ಟದಲ್ಲಿತ್ತು. ನಂತರ 2011; 12ರ ವೇಳೆಗೆ ಶೇ 6.7ಕ್ಕೆ ತಗ್ಗಿತು. 2012; 13ನೇ ಹಣಕಾಸು ವರ್ಷದಲ್ಲಂತೂ ದಶಕದಲ್ಲೇ ಕನಿಷ್ಠ ಮಟ್ಟಕ್ಕೆ (ಶೇ 4.5) ಕುಸಿಯಿತು. ನಂತರ ಅತ್ಯಂತ ಅಲ್ಪ ಪ್ರಮಾಣದಲ್ಲಿ ಸುಧಾರಿಸಿಕೊಂಡು 2013; 14ನೇ ಹಣಕಾಸು ವರ್ಷದಲ್ಲಿ ಶೇ 4.9ಕ್ಕೆ ಏರಿಕೆ ಕಂಡಿತು ಎಂಬುದು ಇಲ್ಲಿ ಉಲ್ಲೇಖಾರ್ಹ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.