‘ಜೀ ಕುಟುಂಬ’ ಪ್ರಶಸ್ತಿ ಪ್ರದಾನ

7

‘ಜೀ ಕುಟುಂಬ’ ಪ್ರಶಸ್ತಿ ಪ್ರದಾನ

Published:
Updated:

ಜೀ ಕನ್ನಡ ವಾಹಿನಿ ಪ್ರತಿವರ್ಷ ನೀಡುವ ಜೀ ಕುಟುಂಬ ಅವಾರ್ಡ್ಸ್ ಪ್ರಶಸ್ತಿಪ್ರದಾನ ಸಮಾರಂಭ ಇಂದು(ಜ.೧೧) ಸಂಜೆ  5.30ಕ್ಕೆ  ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಬಾರಿ ಜೀ ಕುಟುಂಬ ಅವಾರ್ಡ್ಸ್ ೨೦೧೩ ಕಾರ್ಯಕ್ರಮದಲ್ಲಿ ೨೮ ವಿಭಾಗಗಳಲ್ಲಿ ಪ್ರಶಸ್ತಿ ಹಮ್ಮಿಕೊಳ್ಳಲಾಗಿದೆ.

ಜೀ ಕುಟುಂಬ ಅವಾರ್ಡ್ಸ್ ನಲ್ಲಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳು, ರಿಯಾಲಿಟಿ ಷೋಗಳು ಮತ್ತು ಇತರೆ ಕಾರ್ಯಕ್ರಮ ವಿಭಾಗಗಳಲ್ಲಿ ಪ್ರಶಸ್ತಿಗಳು ಇರುತ್ತವೆ. ೮ ವಿಭಾಗಗಳಲ್ಲಿ ವಿಜೇತರನ್ನು ವೀಕ್ಷಕರೇ ಎಸ್‌ಎಂಎಸ್ ಮೂಲಕ ಆಯ್ಕೆ ಮಾಡಿರುತ್ತಾರೆ. ಇನ್ನುಳಿದ ೨೦ ವಿಭಾಗಗಳ ಆಯ್ಕೆಯನ್ನು ಹಿರಿಯ ನಿರ್ದೇಶಕರು, ಕಲಾವಿದರು ಹಾಗೂ ಹಿರಿಯ ಪತ್ರಕರ್ತರ ತಂಡ ಆಯ್ಕೆ ಮಾಡಿದೆ ಎಂದು ವಾಹಿನಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry