ಶುಕ್ರವಾರ, ಮಾರ್ಚ್ 5, 2021
23 °C

‘ಜೆಡಿಎಸ್ನ ಅಭಿವೃದ್ಧಿಯೇ ಶ್ರೀರಕ್ಷೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಜೆಡಿಎಸ್ನ ಅಭಿವೃದ್ಧಿಯೇ ಶ್ರೀರಕ್ಷೆ’

ದೇವದುರ್ಗ: ‘ರಾಜ್ಯದಲ್ಲಿ ಜನತಾ ದಳ ಅಧಿಕಾರಕ್ಕೆ ಬಂದಾಗಲೆಲ್ಲ ತಾಲ್ಲೂಕಿನಲ್ಲಿ ಕೈಗೊಂಡ ಸಾಕಷ್ಟು ಅಭಿವೃದ್ಧಿ ಕೆಲಸಗಳೇ ನನ್ನ ಗೆಲುವಿಗೆ ಶ್ರೀರಕ್ಷೆ’ ಎಂದು ಜೆಡಿಎಸ್‌ ಪಕ್ಷದ ಅಭ್ಯರ್ಥಿ ಕರೆಮ್ಮ ಗೋಪಾಲಕೃಷ್ಣ ಹೇಳಿದರು.ಶುಕ್ರವಾರ ಪಟ್ಟಣದ ವಿವಿಧ ಕಡೆಗಳಲ್ಲಿ ಮತಯಾಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸ್ವಾತಂತ್ರ್ಯ ನಂತರ ಹತ್ತಾರೂ ವರ್ಷಗಳ ಕಾಲ ಆಳ್ವಿಕೆ ನಡೆಸಿದ ಕಾಂಗ್ರೆಸ್‌ ಪಕ್ಷ ತಾಲ್ಲೂಕಿನಲ್ಲಿ ನೀರಾವರಿ ಬಗ್ಗೆ ಗಮನ ಹರಿಸಲು ಸಾಧ್ಯವಾಗಲಿಲ್ಲ.ಅನೇಕ ವರ್ಷಗಳ ಕಾಲ ನನೆಗುದಿಗೆ ಬಿದಿದ್ದ ನಾರಾಯಣಪುರ ಬಲದಂಡೆ ಯೋಜನೆಯನ್ನು ದೇವೇಗೌಡರು ಮುಖ್ಯಮಂತ್ರಿಯಾದ ಕೆಲವೇ ತಿಂಗಳಲ್ಲಿ ಕಾಮಗಾರಿಗೆ ಅಡಿಗಲ್ಲು ಹಾಕಿದರು. ಅದರ ಫಲವಾಗಿ ಇಂದು ತಾಲ್ಲೂಕಿನ ಬಡ, ಮಧ್ಯಮ ಮತ್ತು ಇತರ ರೈತರು ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗಿದೆ. 1996ರಲ್ಲಿ ಆರಂಭವಾದ ನಾರಾಯಣಪುರ ಬಲದಂಡೆ ಯೋಜನೆಯ ಕಾಮಗಾರಿ ಇಂದಿಗೂ ಯೋಜನೆ ಪ್ರಕಾರ ಪೂರ್ಣಗೊಂಡಿಲ್ಲ. ಇದಕ್ಕೆಲ್ಲ ರಾಜಕೀಯ ಇಚ್ಛಾಶಕ್ತಿ ಕೊರತೆ ಇದೆ’ ಎಂದು ದೂರಿದರು. ಉಪ ಚುನಾವಣೆಯಲ್ಲಿ ಮತದಾರರು ನನ್ನನ್ನು ಗೆಲ್ಲಿಸಿದರೆ ನನೆಗುದಿಗೆ ಬಿದ್ದ ಎಲ್ಲ ನೀರಾವರಿ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸುತ್ತೇನೆ ಎಂದು ಭರವಸೆ ನೀಡಿದರು.ತಾಲ್ಲೂಕಿಗೆ ಕಳೆದ 7 ವರ್ಷದ ಅವಧಿಯಲ್ಲಿ ಅಭಿವೃದ್ಧಿಗಾಗಿ ಬಿಡುಗಡೆಯಾದ ಸಾವಿರಾರೂ ಕೊಟಿ ರೂಪಾಯಿ ಎಲ್ಲಿದೆ ಎಂದು ಪ್ರಶ್ನಿಸಿದ ಅವರು, ಅಷ್ಟು ಅನುದಾನ ತಾಲ್ಲೂಕಿನಲ್ಲಿ ಸರಿಯಾಗಿ ಬಳಕೆಯಾಗಿದ್ದರೆ ಇವತ್ತು ಇಡೀ ರಾಜ್ಯದಲ್ಲಿಯೇ ದೇವದುರ್ಗ ಮಾದರಿ ತಾಲ್ಲೂಕು ಆಗಲು ಸಾಧ್ಯವಿತ್ತು. ಆದರೆ ಯಾವುದೇ ಬದಲಾವಣೆಯಾಗಿಲ್ಲ. ಇದಕ್ಕೆಲ್ಲ ಸ್ವಾರ್ಥ ರಾಜಕಾರಣವೇ ಕಾರಣ ಎಂದು ಆರೋಪಿಸಿದರು.ಕಳೆದ 20 ವರ್ಷ ನಂತರ ದೇವದುರ್ಗ ವಿಧಾನಸಭಾ ಚುನಾವಣೆಗೆ ಮಹಿಳಾ ಅಭ್ಯರ್ಥಿ ಕಣದಲ್ಲಿ ನಿಂತಿದ್ದು, ತಾಲ್ಲೂಕಿನ ಮತದಾರರು ಕುಟುಂಬ ರಾಜಕಾರಣವನ್ನು ದೂರವಿಟ್ಟು ಒಬ್ಬ ಸಾಮಾನ್ಯ ಕುಟುಂಬದಿಂದ ಬಂದಿರುವ ಮಹಿಳೆಗೆ ಮತ ನೀಡಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಜೆಡಿಎಸ್‌ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಶರಣಪ್ಪ ಬಳೆ, ಮುಖಂಡರಾದ ಬಾಪೂಗೌಡ ಪಾಟೀಲ, ನಿರ್ಮಲ ನಾಯಕ, ಫಿರೋಜ್‌ಖಾನ್ ಮತ್ತಿತರರು ಇದ್ದರು.ಕಾಂಗ್ರೆಸ್‌ ಪಕ್ಷ: ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ರಾಜಶೇಖರ ನಾಯಕ ಅವರು ಶುಕ್ರವಾರ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬಿರುಸಿನ ಪ್ರಚಾರ ಕೈಗೊಂಡರು. ಸಿದ್ದರಾಮಯ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಪ್ರಸ್ತಾಪಿಸಿ ಮತಯಾಚಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.