‘ಜ್ಞಾನದ ಸದ್ಬಳಕೆಯಾಗಲಿ: ಡಾ.ಮಹೇಶಪ್ಪ

7

‘ಜ್ಞಾನದ ಸದ್ಬಳಕೆಯಾಗಲಿ: ಡಾ.ಮಹೇಶಪ್ಪ

Published:
Updated:

ನಿಪ್ಪಾಣಿ: ‘ಜ್ಞಾನ ಯಾರ ಸೊತ್ತು ಅಲ್ಲ. ಅದನ್ನು ಸರಿಯಾದ ರೂಪದಲ್ಲಿ ಉಪಯೋಗಿಸಬೇಕು’ ಎಂದು ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್‌. ಮಹೇಶಪ್ಪ ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.ವಿದ್ಯಾ ಸಂವರ್ಧಕ ಮಂಡಳದ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ನಿರ್ಮಿಸಲಾದ ವಸತಿ ನಿಲಯಗಳನ್ನು ಸೋಮವಾರ ಉದ್ಘಾ ಟಿಸಿ ಅವರು ಮಾತನಾಡಿದರು.‘ಶಿಕ್ಷಣ ಜೀವನದ ಮೌಲ್ಯ ರೂಪಿಸು ವಂತಾಗಬೇಕು. ತಾಂತ್ರಿಕ ಶಿಕ್ಷಣದಲ್ಲಿ ನಾಲ್ಕು ವರ್ಷ ಕಷ್ಟ ಪಟ್ಟು ಓದಿದರೆ ಮುಂದಿನ 40 ವರ್ಷದ ಜೀವನ ಸಂತೋಷವಾಗಿರುತ್ತದೆ. ಭಗವಂತ ಪ್ರತಿಯೊಬ್ಬನಿಗೆ ತಮ್ಮದೇ ಆದ ಒಂದು ಶಕ್ತಿ ಕೊಟ್ಟಿದ್ದಾನೆ. ಅದನ್ನು ಗುರುತಿಸಿ ಕನಸ್ಸನ್ನು ನನಸಾಗಿ ಮಾರ್ಪಡಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.‘ರಾಜ್ಯದ ಗಡಿಭಾಗದಲ್ಲಿ 53 ವರ್ಷ ಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುತ್ತ ಬಂದಿರುವ ಮತ್ತು ಇಲ್ಲಿನ ಗ್ರಾಮೀಣ ಭಾಗದ ಉನ್ನತ ಶಿಕ್ಷಣ ವಂಚಿತರಿಗೆ ಒಳ್ಳೆಯ ಶಿಕ್ಷಣ ಕಲ್ಪಿಸಿರುವ ಸಂಸ್ಥೆಯ ಕಾರ್ಯ ಪ್ರಶಂಸನೀಯ ’ ಎಂದರು.ಸಾನಿಧ್ಯ ವಹಿಸಿದ ನಿಡಸೋಸಿಯ ದುರದುಂಡೀಶ್ವರ ಸಿದ್ಧ ಸಂಸ್ಥಾನಮಠದ ಪ.ಪೂ. ಶಿವಲಿಂಗೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ವಿದ್ಯಾರ್ಥಿಗಳು ಆದರ್ಶ ಜೀವನವುಳ್ಳ ಮಹಾನು ಭಾವರ ಚರಿತ್ರೆ ಓದಬೇಕು’ ಎಂದರು.ಸಂಸ್ಥೆಯ ಕಾರ್ಯಾಧ್ಯಕ್ಷ ಚಂದ್ರ ಕಾಂತ ಕೋಠಿವಾಲೆ ಮಾತನಾಡಿ ವಿದ್ಯಾರ್ಥಿಗಳು ಗುಣಾತ್ಮಕ ಕಾರ್ಯಗಳ ಮೂಲಕ ಮುನ್ನಡೆಯಬೇಕು. ಉನ್ನತ ಸಾಧನೆ ಮಾಡುವ ಮೂಲಕ ವಿದ್ಯಾರ್ಥಿಗಳು ಸಂಸ್ಥೆಗೆ ಸಮಾಜಕ್ಕೆ ಗೌರವ ತರಬೇಕು ಎಂದು ತಿಳಿಸಿದರು.ಪ್ರಾಚಾರ್ಯ ಡಾ. ಎಸ್‌.ಸಿ. ಕಮತೆ ಸ್ವಾಗತಿಸಿದರು. ಸಂಸ್ಥೆಯ ಉಪ ಕಾರ್ಯಾಧ್ಯಕ್ಷ ಸಮೀರ ಬಾಗೇವಾಡಿ, ಮಾಜಿ ಶಾಸಕ ಸುಭಾಷ ಜೋಶಿ, ಲಕ್ಷ್ಮಣರಾವ ಚಿಂಗಳೆ, ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಕಾರ್ಯಾಧ್ಯಕ್ಷ ಬಾಬಾಸಾಹೇಬ ಸಾಸಣೆ, ಉಪಕಾರ್ಯಾಧ್ಯಕ್ಷ ರಾಜು ಪಾಟೀಲ, ನಗರಸಭೆ ಉಪಾಧ್ಯಕ್ಷ ಇಮ್ತಿಯಾಜ್ ಕಾಝಿ, ದಾದಾರಾಜೆ ದೇಸಾಯಿ ಸರಕಾರ, ಶಿವಪುತ್ರಪ್ಪಾ ಕೋಠಿವಾಲೆ, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಪ್ರೊ. ಬಸವರಾಜಪ್ಪಾ ವೈ.ಎಚ್‌. ಮತ್ತು ಪ್ರೊ. ಕೆ.ಜಿ. ವಸೇದಾರ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry