ಬುಧವಾರ, ಮಾರ್ಚ್ 3, 2021
19 °C
ಪುಸ್ತಕವು ಟಿಪ್ಪುವಿನ ವಿರುದ್ಧ ಹೊರತು, ಮುಸ್ಲಿಮರ ವಿರುದ್ಧವಲ್ಲ: ಕಾರ್ಯಪ್ಪ

‘ಟಿಪ್ಪು ಮತ್ತು ಕೊಡವರು’ ಕೃತಿ ಮಂಥನ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಟಿಪ್ಪು ಮತ್ತು ಕೊಡವರು’ ಕೃತಿ ಮಂಥನ ನಾಳೆ

ಮಡಿಕೇರಿ: ಕೊಡವ ಸಮುದಾಯ ದವರ ಮೇಲೆ ಟಿಪ್ಪು ಸುಲ್ತಾನ್‌ ನಡೆಸಿದ ದೌರ್ಜನ್ಯ ಹಾಗೂ ದಬ್ಬಾಳಿಕೆ ಕುರಿತಾದ ‘ಟಿಪ್ಪು ಮತ್ತು ಕೊಡವರು’ ಕೃತಿಯ ಮಂಥನ ಕಾರ್ಯಕ್ರಮವನ್ನು ಜ. 22ರಂದು ಮಧ್ಯಾಹ್ನ 2.45ಕ್ಕೆ ಇಲ್ಲಿನ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಲಾಗಿದೆ ಎಂದು ಕೃತಿಕರ್ತ ಅಡ್ಡಂಡ ಕಾರ್ಯಪ್ಪ ಹೇಳಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ಪುಸ್ತಕಗಳನ್ನು ಓದಿ ಅರ್ಥೈಸಿಕೊಂಡು ಈ ಕೃತಿಯನ್ನು ರಚಿಸಿದ್ದೇನೆ. ಹಲವು ಜನ ಇತಿಹಾಸಕಾರರು ಟಿಪ್ಪುವಿನ ದುರಾಡಳಿತ ಕುರಿತು ಕೃತಿಗಳನ್ನು ರಚಿಸಿದ್ದಾರೆ. ಆದರೆ, ಮುಸ್ಲಿಮರನ್ನು ಓಲೈಸುವ ಕೆಲವು ಲೇಖಕರು ಮಾತ್ರ ಟಿಪ್ಪುವನ್ನು ಯೋಧ, ಸ್ವಾತಂತ್ರ್ಯ ಹೋರಾಟಗಾರನೆಂದು ಸುಳ್ಳು ಇತಿಹಾಸ ರಚಿಸಿದ್ದಾರೆ ಎಂದು ಆರೋಪಿಸಿದರು.‘ಎರಡು–ಮೂರು ವರ್ಷಗಳ ಹಿಂದೆ ಅಂದಿನ ಯುಪಿಎ ಸರ್ಕಾರವು ಶ್ರೀರಂಗಪಟ್ಟಣದಲ್ಲಿ ಟಿಪ್ಪು ವಿಶ್ವ ವಿದ್ಯಾಲಯ ಸ್ಥಾಪಿಸಲು ಹೊರಟಿತ್ತು. ಅದನ್ನು ಖಂಡಿಸಿ ನಾನು ಹೋರಾಟಕ್ಕೆ ಇಳಿದೆ. ಅಂದು ಪುಸ್ತಕ ಬರೆಯಲು ಆರಂಭಿಸಿದೆ. ಕೆಲ ಸಮಯದ ನಂತರ ವೈಯಕ್ತಿಕ ಕಾರಣಗಳಿಂದ ಬರೆಯು ವುದನ್ನು ಸ್ಥಗಿತಗೊಳಿಸಿದೆ. ಕಳೆದ ವರ್ಷ ಟಿಪ್ಪು ಜಯಂತಿ ವೇಳೆ ನಡೆದ ಹಿಂಸಾಚಾರದ ಘಟನೆಗಳು ಪುನಃ ನನಗೆ ಬರೆಯಲು ಪ್ರೇರಣೆ ನೀಡಿದವು’ ಎಂದು ಹೇಳಿದರು.‘ಇತಿಹಾಸದಲ್ಲಿ ನಡೆದಿರುವ ನಿಜ ಘಟನೆಗಳನ್ನು ಎಲ್ಲರೂ ತಿಳಿದು ಕೊಳ್ಳಬೇಕು. ಟಿಪ್ಪುವಿನ ಬಗ್ಗೆ ನಿಜವಾದ ಇತಿಹಾಸವನ್ನು ನಾನಿಲ್ಲಿ ದಾಖಲಿಸಿದ್ದೇನೆ. ನನ್ನ ಪುಸ್ತಕವು ಟಿಪ್ಪುವಿನ ವಿರುದ್ಧ ಹೊರತು, ಮುಸ್ಲಿಮರ ವಿರುದ್ಧವಲ್ಲ. ಇತಿಹಾಸದ ಅಂಶಗಳನ್ನು ಕೆದಕು ವುದರಿಂದ ಸಮಾಜದಲ್ಲಿ ಅಶಾಂತಿ ಮೂಡುವುದಿಲ್ಲ’ ಎಂದು ಪ್ರಶ್ನೆ ಯೊಂದಕ್ಕೆ ಉತ್ತರಿಸಿದರು.‘ಕೊಡಗಿನಲ್ಲಿ ಸಾಕಷ್ಟು ವಿರೋಧವಿದ್ದರೂ ಕಾಂಗ್ರೆಸ್‌ ಸರ್ಕಾರ ಟಿಪ್ಪು ಜಯಂತಿ ಆಚರಣೆಗೆ ಮುಂದಾ ಗಿದ್ದರಿಂದಲೇ ಇಬ್ಬರು ಪ್ರಾಣ ಕಳೆದುಕೊಳ್ಳಬೇಕಾಯಿತು. ಈ ಘಟನೆ ಯನ್ನು ಕೂಡ ಪುಸ್ತಕದಲ್ಲಿ ದಾಖಲಿಸಿ ದ್ದೇನೆ. ಮಡಿಕೇರಿಯಲ್ಲಿ ಹಿಂಸಾಚಾರ ನಡೆದ ಸಂದರ್ಭದಲ್ಲಿ ನಾನಿರಲಿಲ್ಲ ನಿಜ. ಆದರೆ, ಪೊಲೀಸ್‌ ಕಾನ್‌ಸ್ಟೆಬಲ್‌ ಒಬ್ಬರ ಹೇಳಿಕೆಯನ್ನು ಆಧರಿಸಿ ಘಟನೆಯನ್ನು ಪ್ರಸ್ತಾಪಿಸಿದ್ದೇನೆ’ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.ನಮ್ಮದೇ ಪ್ರಕಾಶನ ಸಂಸ್ಥೆಯಾದ ‘ರಂಗಭೂಮಿ ಕೊಡಗು ಪ್ರಕಾಶನ’ದ ಮೂಲಕ ಪುಸ್ತಕವನ್ನು ಮುದ್ರಿಸಿ, ಮಾರಾಟ ಮಾಡಲಾಗುತ್ತಿದೆ. ಪುಟಗಳ ಸಂಖ್ಯೆ 200, ಪುಸ್ತಕದ ಬೆಲೆ ₹ 200 ಎಂದು ಅವರು ನುಡಿದರು.ಚಿಂತನ–ಮಂಥನ

ಅಧ್ಯಕ್ಷತೆ: ಸಂಸದ ಪ್ರತಾಪ್‌ ಸಿಂಹ

ಆಶಯ ಭಾಷಣ: ಮಾಧ್ಯಮ ಅಕಾಡೆಮಿ ಸದಸ್ಯ ಬಿ.ಜಿ. ಅನಂತಶಯನ

ಅತಿಥಿಗಳು: ಸಿಎನ್‌ಸಿ ಅಧ್ಯಕ್ಷ ಎನ್‌.ಯು. ನಾಚಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುಜಾ ಕುಶಾಲಪ್ಪ

ಸಮಯ– ಮಧ್ಯಾಹ್ನ 2.45ಕ್ಕೆ.

ಸ್ಥಳ: ಭಾರತೀಯ ವಿದ್ಯಾಭವನ ಸಭಾಂಗಣ, ಮಡಿಕೇರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.