‘ಟ್ರಾಫಿಕ್‌’ ರಿಮೇಕ್‌ನಲ್ಲಿ ನಿಖಿತಾ

7

‘ಟ್ರಾಫಿಕ್‌’ ರಿಮೇಕ್‌ನಲ್ಲಿ ನಿಖಿತಾ

Published:
Updated:

ಮಲಯಾಳಂನ ಸೂಪರ್‌ಹಿಟ್‌ ಚಿತ್ರ ‘ಟ್ರಾಫಿಕ್‌’ ಈಗ ಹಿಂದಿಗೆ ರಿಮೇಕ್‌ ಆಗುತ್ತಿದೆ. ಈ ಚಿತ್ರದಲ್ಲಿ ಕನ್ನಡದ ನಟಿ ನಿಖಿತಾ ಅವರು ನಟಿಸುವುದು ಬಹುತೇಕ ಖಚಿತವಾಗಿದೆ. ಹಿಂದಿಯಲ್ಲಿ ತಯಾರಾಗುತ್ತಿರುವ ಈ ಚಿತ್ರದ ಪಾತ್ರವರ್ಗ ಇನ್ನೂ ಅಂತಿಮಗೊಂಡಿಲ್ಲ.ಕನ್ನಡದ ಹಲವು ಸ್ಟಾರ್‌ ನಟರ ಜತೆಗೆ ಬಣ್ಣ ಹಚ್ಚಿರುವ ನಟಿ ನಿಖಿತಾ ಅವರು ಈ ಚಿತ್ರದ ಮುಖೇನ ಬಾಲಿವುಡ್‌ ಅಂಗಳಕ್ಕೆ ಕಾಲಿರಿಸುತ್ತಿದ್ದಾರೆ. ಕನ್ನಡದ ಹಲವು ಜನಪ್ರಿಯ ಚಿತ್ರಗಳಲ್ಲಿ ನಟಿಸಿರುವ ನಿಖಿತಾ ಅವರ ಸಿನಿ ದುನಿಯಾದಲ್ಲಿ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’, ‘ಪ್ರಿನ್ಸ್’ ಮೊದಲಾದ ಚಿತ್ರಗಳು ಮಹತ್ವದ್ದಾಗಿದ್ದವು. ಬಬ್ಲಿ ಪಾತ್ರಗಳಲ್ಲಿ ಬಿಂದಾಸ್‌ ಆಗಿ ನಟಿಸುತ್ತಾ ಕನ್ನಡ ಪ್ರೇಕ್ಷಕರ ಹೃದಯ ಕದ್ದಿದ್ದ ನಿಖಿತಾ ಈಗ ಬಾಲಿವುಡ್‌ನಲ್ಲಿ ತಮ್ಮ ಖಾತೆ ತೆರೆಯಲು ಸಜ್ಜಾಗಿದ್ದಾರೆ.  ಅಂದಹಾಗೆ, ಹಿಂದಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಇನ್ನೂ ಹೆಸರು ಅಂತಿಮಗೊಂಡಿಲ್ಲವಂತೆ. ‘‘ಟ್ರಾಫಿಕ್ ಚಿತ್ರದಲ್ಲಿ ನಿಖಿತಾ ಯಾವ ಬಗೆಯ ಪಾತ್ರ ನಿರ್ವಹಿಸುತ್ತಾರೆ ಎಂಬುದರ ಕುರಿತು ನಾನು ಈಗಲೇ ಏನನ್ನು ಹೇಳಲಾರೆ. ಸಾಧ್ಯವಾದಷ್ಟು ಬೇಗನೆ ಚಿತ್ರೀಕರಣ ಪ್ರಾರಂಭಿಸುವ ಯೋಜನೆ ನಮ್ಮದು’’ ಎನ್ನುತ್ತಾರೆ ನಿರ್ದೇಶಕ ರಾಜೇಶ್ ಪಿಳ್ಳೈ.

ಮಲಯಾಳಂನಲ್ಲಿ ಸದ್ದು ಮಾಡಿದ್ದ ‘ಟ್ರಾಫಿಕ್‌’ ಚಿತ್ರ ನೈಜ ಘಟನೆಗಳನ್ನು ಆಧರಿಸಿತ್ತು. ಈಚೆಗೆ ತಮಿಳಿನಲ್ಲಿ ತೆರೆಕಂಡು ಜನಮೆಚ್ಚುಗೆ ಪಡೆದ ‘ಚೆನ್ನೈಯಿಲ್‌ ಒರು ನಾಲ್‌’ ಚಿತ್ರ ಕೂಡ ‘ಟ್ರಾಫಿಕ್‌’ನ ರಿಮೇಕ್. ಹಿಂದಿ ಜಾಯಮಾನಕ್ಕೆ ಹೊಂದುವ ತಕ್ಕ ಕಲಾವಿದರನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗುವುದು. ಅದಕ್ಕು ಮುನ್ನ ಈ ಕುರಿತು ಏನನ್ನು ಹೇಳುವುದಿಲ್ಲ ಎನ್ನುತ್ತಾರೆ ನಿರ್ದೇಶಕರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry