‘ಡಿ.ಕೆ.ಸಹೋದರರು ರಾಮ ಲಕ್ಷ್ಮಣರಿದ್ದಂತೆ’

7
ಸಣ್ಣ ನಿರಾವರಿ ಸಚಿವ ಶಿವರಾಜ ತಂಗಡಗಿ ಬಣ್ಣನೆ

‘ಡಿ.ಕೆ.ಸಹೋದರರು ರಾಮ ಲಕ್ಷ್ಮಣರಿದ್ದಂತೆ’

Published:
Updated:

ಕನಕಪುರ: ‘ಕ್ಷೇತ್ರದ ಶಾಸಕ ಡಿ.ಕೆ.ಶಿವ ಕುಮಾರ್ ಮತ್ತು ಅವರ ಸಹೋದರ ಸಂಸದ ಡಿ.ಕೆ.ಸುರೇಶ್ ರಾಮ ಲಕ್ಷ್ಮಣರಿದ್ದಂತೆ’ ಎಂದು ಸಣ್ಣ ನಿರಾವರಿ ಸಚಿವ ಶಿವರಾಜ ತಂಗಡಗಿ ಅವರು ಬಣ್ಣಿಸಿದರು.ಡಿ.ಕೆ.ಸುರೇಶ್ ಅವರನ್ನು ಸಂಸದರಾಗಿ ಗೆಲ್ಲಿಸಿದ ಕ್ಷೇತ್ರದ ಜನತೆ ಹಾಗೂ ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಪಟ್ಟಣದ ಹೊರ ವಲ ಯದಲ್ಲಿ ವಾಸು ವರ ತೋಟದಲ್ಲಿ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.‘ಡಿ.ಕೆ.ಸುರೇಶ್ ಮತ್ತು ಶಿವಕು ಮಾರ್ ಈ ಕ್ಷೇತ್ರದ ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ತಂಗಡಗಿ, ‘ಈ ಸಹೋದರರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ತಂದು ಹೆಚ್ಚಿನ ಅನುದಾನವನ್ನು ತರುವ ಮೂಲಕ ಕ್ಷೇತ್ರವನ್ನು ಅಭಿವೃದ್ದಿಪಡಿಸ ಲಿದ್ದಾರೆ’ ಎಂದು ತಿಳಿಸಿದರು.‘ಕ್ಷೇತ್ರದಲ್ಲಿನ ಪ್ರಮುಖ ಕೆರೆಗಳಿಗೆ ನೀರು ತುಂಬಿಸುವ ಕೆಲಸವಾಗ ಬೇಕೆಂದು ಶಾಸಕರು ಈಗಾಗಲೇ ಬೇಡಿಕೆಯಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ಮಾಡಿ ಕೆರೆಗಳಿಗೆ ನೀರು ತುಂಬಿಸಲಾ ಗುವುದು’ ಎಂದು ಅವರು ತಿಳಿಸಿದರು.ಸಂಸದ ಡಿ.ಕೆ.ಸುರೇಶ್ ಮಾತ ನಾಡಿ, ‘ಅನಿರೀಕ್ಷಿತವಾಗಿ ಬಂದ ಚುನಾ ವಣೆಯಲ್ಲಿ ಅನಿವಾರ್ಯ ಪರಿಸ್ಥಿತಿ ಯಿಂದ ನಾನು ಇಲ್ಲಿ ನಿಲ್ಲಬೇಕಾಯಿತು. ನನ್ನ ರಾಜಕೀಯ ವಿರೋಧಿಗಳು ಮತದಾ ರರ ದಿಕ್ಕುತಪ್ಪಿಸಲು ಪ್ರಯತ್ನ ಮಾಡಿದರೂ ಕ್ಷೇತ್ರದ ಜನತೆ ಅದಾವುಕ್ಕೂ ಅವಕಾಶ ನೀಡಿದೆ 52 ಸಾವಿರ ಹೆಚ್ಚಿನ ಮತಗಳನ್ನು ನೀಡಿ ನನ್ನನ್ನು ಆಶೀರ್ವದಿಸಿದ್ದು ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಶಾಸಕ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಈ ಕ್ಷೇತ್ರವನ್ನು ಗುಡಿ ಸಲು ರಹಿತ ಕ್ಷೇತ್ರವನ್ನಾಗಿ ಮಾಡ ಬೇಕಿದೆ. ಅದಕ್ಕಾಗಿ ಹತ್ತು ಹಲವಾರು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ’ ಎಂದರು.‘ಕಳೆದ ಸಾಲಿನಲ್ಲಿ ತಾಲ್ಲೂಕಿನ ಜನತೆಗೆ ದಸರಾ ಹಬ್ಬದ ಸಂಭ್ರಮ ಕೊಡಲು ಕನಕೋತ್ಸವ ಕಾರ್ಯಕ್ರಮ ವನ್ನು ಕನಕಪುರದ ಹಬ್ಬದಂತೆ ಆಚರಿಸ ಲಾಯಿತು. ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಆಚರಣೆ ಮಾಡಲು ಎಲ್ಲಾ ಸಿದ್ದತೆಗಳನ್ನು ಕೈಗೊಂಡಿದ್ದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ’ ಎಂದು ತಿಳಿಸಿದರು.ವಿಧಾನ ಪರಿಷತ್‌ ಮಾಜಿ ಸದಸ್ಯ ಎಸ್‌.ರವಿ, ಹಸನಬ್ಬ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಿಯಾವುಲ್ಲಾ, ಜಿಲ್ಲಾ ಮುಖಂಡರಾದ ಮರಿದೇವ್ರು, ರಘು ನಂದನ್‌ರಾಮಣ್ಣ, ವಿ.ಶ್ರೀನಿ ವಾಸ್, ರಾಜಣ್ಣ, ಕಾಂತರಾಜ ಪಟೇಲ್, ಹೊನ್ನಿಗನಹಳ್ಳಿ ಶ್ರೀಕಂಠು, ಸೂರ್ನಳ್ಳಿ ಜಯರಾಮು, ಇಕ್ಬಾಲ್‌ಹುಸೇನ್, ಆರ್.ಕೃಷ್ಣಮೂರ್ತಿ, ಕೆ.ಎನ್.ದಿ ಲೀಪ್, ವಿಜಯದೇವು, ಮಾದೇವಿ, ಜಿಲ್ಲಾ, ತಾಲ್ಲೂಕು, ಪುರಸಭೆ ಗ್ರಾಮ ಪಂಚಾಯಿತಿ ಸದಸ್ಯರು, ಪಕ್ಷದ ಮುಖಂಡರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry