‘ಡೀಸೆಲ್‌ ಬೆಲೆಯಲ್ಲಿ ಭಾರಿ ಏರಿಕೆ ಸದ್ಯಕ್ಕಿಲ್ಲ’

7

‘ಡೀಸೆಲ್‌ ಬೆಲೆಯಲ್ಲಿ ಭಾರಿ ಏರಿಕೆ ಸದ್ಯಕ್ಕಿಲ್ಲ’

Published:
Updated:

ನವದೆಹಲಿ(ಪಿಟಿಐ): ಸದ್ಯಕ್ಕೆ ಡೀಸೆಲ್‌ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ಪ್ರಸ್ತಾ ವವಿಲ್ಲ ಎಂದು ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಇಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಡೀಸೆಲ್‌ ಬೆಲೆ ಯನ್ನು ತಿಂಗಳಲ್ಲಿ 40ರಿಂದ 50 ಪೈಸೆ ಯಷ್ಟು ಮಾತ್ರ ಏರಿಸಬಹುದಾಗಿದೆ.ಈ ಕ್ರಮ ಜನವರಿಯಿಂದಲೂ ಜಾರಿಯ ಲ್ಲಿದೆ. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಡೀಸೆಲ್‌ ಬೆಲೆ ಏರಿಸುವ ಪ್ರಸ್ತಾವ ಸಚಿವ ಸಂಪುಟದ ಮುಂದೆ ಬಂದಿಲ್ಲ ಎಂದರು.ಈಗಲೂ ತೈಲ ಕಂಪೆನಿಗಳು ವಾಸ್ತವ ಕ್ಕಿಂತ ಕಡಿಮೆ ಬೆಲೆಗೇ ಪೆಟ್ರೋಲಿಯಂ ಉತ್ಪನ್ನಗಳನ್ನು ಮಾರುತ್ತಿವೆ. ಇದೇ ವೇಳೆ ನಾವು ಗ್ರಾಹಕರ ಹಿತವನ್ನೂ ಗಮನದ ಲ್ಲಿಟ್ಟುಕೊಂಡು ಬೆಲೆ ಏರಿಕೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದರು.ಸದ್ಯ ಲೀಟರ್‌ ಡೀಸೆಲ್‌ ₨14.50 ರಷ್ಟು ಕಡಿಮೆ ಬೆಲೆಗೆ ಮಾರಾಟವಾಗು ತ್ತಿದೆ. ಅಲ್ಲದೆ, ತೈಲ ಕಂಪೆನಿಗಳು ಪಡಿತರ ವ್ಯವಸ್ಥೆಯಡಿ ಮಾರಾಟವಾಗುವ ಸೀಮೆ ಎಣ್ಣೆ ಲೀಟರ್‌ಗೆ ₨36.83ರಷ್ಟು ಮತ್ತು 14.2 ಕೆ.ಜಿ ಎಲ್‌ಪಿಜಿ ಸಿಲಿಂಡರ್‌ ವಿತ ರಣೆಯಲ್ಲಿ ₨470.38 ನಷ್ಟ ಅನುಭವಿ ಸುವಂತಾಗಿದೆ ಎಂದು ವಿವರಿಸಿದರು.ಪೆಟ್ರೋಲಿಯಂ ಸಚಿವಾಲಯ ಲೀ. ಡೀಸೆಲ್‌ಗೆ ₨3ರಿಂದ 5, ಸೀಮೆಎಣ್ಣೆಗೆ ₨2 ಹಾಗೂ ಎಲ್‌ಪಿಜಿ ಸಿಲಿಂಡರ್‌ಗೆ ₨20ರಷ್ಟು ಬೆಲೆ ಏರಿಸಿ ತೈಲ ಕಂಪೆನಿಗಳ ನಷ್ಟವನ್ನು ₨20,000 ಕೋಟಿಯಷ್ಟು ತಗ್ಗಿಸಲು ಈ ಮೊದಲು ಚಿಂತನೆ ನಡೆಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry