ಬುಧವಾರ, ಜೂನ್ 16, 2021
22 °C

‘ತಂದೆ, ತಾಯಿ, ಗುರುಗಳ ಋಣ ತೀರಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರಮಾನಂದವಾಡಿ (ರಾಯಬಾಗ): ‘ಪ್ರತಿಯೊಬ್ಬರಿಗೆ ಬಾಲ್ಯದಲ್ಲಿ ಉತ್ತಮ ಸಂಸ್ಕಾರ, ಸಂಸ್ಕೃತಿ ಕಲಿಸಿದ ತಂದೆ, ತಾಯಿ ಹಾಗೂ ಗುರುಗಳನ್ನು ಎಂದಿಗೂ ಮರೆಯಬಾರದು. ತಂದೆ, ತಾಯಿ ಹಾಗೂ ಗುರುಗಳ ಋಣ ತೀರಿಸುವ ಗುರುತರ ಜವಾಬ್ದಾರಿ ಪ್ರತಿ ಯೊಬ್ಬರ ಮೇಲಿದೆ’ ಎಂದು ಆರ್.ಎಸ್.ಗುಡೋಡಗಿ ಅಭಿಪ್ರಾಯ ಪಟ್ಟರು.ಪರಮಾನಂದವಾಡಿಯ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಎಸ್.ಆರ್.ದಳವಾಯಿ ಸಂಯುಕ್ತ ಪದವಿಪೂರ್ವ ಕಾಲೇಜು ಹಾಗೂ ಜೆ.ಪಿ.ಶಿರಗೂರಕರ ಪದವಿ ಕಾಲೇಜಿನ ಸಹಯೋಗದಲ್ಲಿ ರಾಯಬಾಗ ತಾಲ್ಲೂ ಕಿನ ಪರಮಾನಂದವಾಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ 7ನೇ ತರಗತಿ, ಎಸ್ಎಸ್ಎಲ್‌ಸಿ, ಪಿಯುಸಿ ದ್ವೀತಿಯ ವರ್ಷ  ಹಾಗೂ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.ಉಪನ್ಯಾಸಕ ಪರಶುರಾಮ ಗುಡೋಡಗಿ ಮಾತನಾಡಿ, ‘ವಿದ್ಯಾರ್ಥಿ ಗಳು ಗುಣಮಟ್ಟದ ಶಿಕ್ಷಣವನ್ನು ಪಡೆಯಬೇಕು. ಪಠ್ಯದ ಜೊತೆಗೆ ಪಠ್ಯೇ ತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ವ್ಯಕ್ತಿತ್ವ ವಿಕಸನ ಮಾಡಿ ಕೊಳ್ಳಬೇಕು’ಎಂದು ಸಲಹೆ ನೀಡಿದರು.ಸಾನ್ನಿಧ್ಯ ವಹಿಸಿದ್ದ ಶಿರಗೂರದ ಕಲ್ಮೇಶ್ವರ ಮಠದ ವಿರೂಪಾಕ್ಷ ದೇವರು ಮಾತನಾಡಿ, ‘ನಾವು ಧರ್ಮ ವನ್ನು ರಕ್ಷಿಸಿದರೆ, ಧರ್ಮವೂ ನಮ್ಮನ್ನು ರಕ್ಷಿಸಿಸುತ್ತದೆ. ಹೀಗಾಗಿ ಪ್ರತಿಯೊಬ್ಬರು ಧಾರ್ಮಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು’ ಎಂದರು.ಪ್ರಾಚಾರ್ಯ ವಿ.ಬಿ.ದಳವಾಯಿ, ತಾ.ಪಂ. ಸದಸ್ಯೆ ಶಮ್ಶಾದಬೀ ಮುಲ್ಲಾ, ಪಿ.ಎಸ್.ಮಿರ್ಜಿ, ಎಸ್.ಎಂ.ಅಂಬಿ, ಆರ್.ಎಸ್.ಕುಂಬಾರ, ಎಸ್.ಐ. ಕಲ್ಲಟ್ಟಿ, ಕೆ.ಎಲ್.ಘಂಟಿ, ಬಿ.ಬಿ.ಬನ್ನನ್ನ ವರ, ಕರೆಪ್ಪ ಗುಡೋಡಗಿ. ಪಿ.ಎಂ. ದುರದುಂಡಿ, ಬಿ.ಎಸ್.ಕಾಂಬಳೆ, ಬಿ.ಕೆ.ದಳವಾಯಿ, ಕವಿತಾ ಕಾಂಬಳೆ, ಮಹಾಂತೇಶ ಕೇಸರಗೊಪ್ಪ, ಅಕ್ಷತಾ ಬಡೊರೆ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.