‘ತತ್ವದ ನೆಲೆ ಕಳೆದುಕೊಂಡ ನಾಯಕರು’

7
ದಲಿತ ಮುಖಂಡರ ಆತ್ಮಾವಲೋಕನ ಸಭೆ

‘ತತ್ವದ ನೆಲೆ ಕಳೆದುಕೊಂಡ ನಾಯಕರು’

Published:
Updated:

ದೊಡ್ಡಬಳ್ಳಾಪುರ:  ‘ದಲಿತ ಮುಖಂಡರು ಇಂದು ದಲಿತ ತತ್ವದ ನೆಲೆಯನ್ನು ಕಳೆದುಕೊಂಡು ಸಮುದಾಯದಿಂದ ಬಹುದೂರ ಉಳಿದಿದ್ದಾರೆ’ ಎಂದು ದಲಿತ ವಿಮೋಚನಾ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಸಿದ್ದರಾಜು ವಿಷಾದಿಸಿದ

ರು.

ನಗರದ ಲಯನ್ಸ್ ಕ್ಲಬ್‌ನಲ್ಲಿ ನಡೆದ ದಲಿತ ಮುಖಂಡರ ಆತ್ಮಾವ ಲೋಕನ, ಕಾರ್ಯಕರ್ತರ ಸಮಾಲೋಚನೆ ಹಾಗೂ ಪದಾಧಿ ಕಾರಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿದರು.‘ಇತ್ತೀಚಿನ ದಿನಗಳಲ್ಲಿ ಕೆಲವು ದಲಿತ ನಾಯಕರ ಸ್ವಾರ್ಥ, ವೈಯಕ್ತಿಕ ಆಸಕ್ತಿ, ಪ್ರತಿಷ್ಠೆಗಳಿಂದ ಹಾಗೂ ಸ್ವಯಂ ಘೋಷಿತ ರಾಜ್ಯ ಘಟಕದ ಅಧ್ಯಕ್ಷರಿಂದ ಇಡೀ ದಲಿತ ಚಳವಳಿಗೇ ಅವಮಾನ ಆಗುತ್ತಿದೆ’ ಎಂದು ಅವರು ವ್ಯಥೆಪಟ್ಟರು.‘ಲೆಟರ್‌ ಹೆಡ್, ವಿಸಿಟಿಂಗ್ ಕಾರ್ಡ್ ಇಟ್ಟುಕೊಂಡು ಓಡಾಡುವ ಇಂತಹ ನಾಯಕರು ಇತ್ತೀಚೆಗೆ ಕನ್ನಮಂಗಲದಲ್ಲಿ ದಲಿತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಬಗ್ಗೆ ಧ್ವನಿ ಎತ್ತದೆ ಜನಾಂಗವನ್ನು ಸ್ವಹಿತಾಸಕ್ತಿಗೆ  ಬಳಸಿಕೊಂಡರು. ರಾಜಕೀಯದ ಲಾಭಕ್ಕಾಗಿ ಹಾತೊರೆಯುವ ಇಂಥ ವರ, ನಾಯಕತ್ವದ ಬಲಹೀನತೆಗಳು ನಮ್ಮ ಕಣ್ಣ ಮುಂದೆ ರಾರಾಜಿಸುತ್ತಿವೆ. ಇದರಿಂದ ಸಂಘಟನೆಗಳು ದುರ್ಬಲ ಗೊಂಡಿವೆ’ ಎಂದು ವಿವರಿಸಿದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ದಲಿತ ವಿಮೋಚನಾ ಸೇನೆಯ ಸಂಸ್ಥಾಪಕ ರಾಜ್ಯ ಘಟಕದ ಅಧ್ಯಕ್ಷ ಮಾ.ಮುನಿ ರಾಜು ಮಾತನಾಡಿ, ದಲಿತ ಸಂಘಟ ನೆಗಳು ಇಂದು ತಮ್ಮ ಅಸ್ತಿತ್ವ ಕಳೆದು ಕೊಂಡಿವೆ ಎಂದು ಅಭಿಪ್ರಾಯ ಪಟ್ಟರು.‘ನಾಯಕತ್ವದ ಸಮಸ್ಯೆಯಿಂದಾಗಿ ಬಹುತೇಕ ದಲಿತ ಸಂಘಟನೆಗಳು ತಮ್ಮ ಹಿಂದಿನ ನೈತಿಕತೆ ಮತ್ತು ಬಲವನ್ನು ಕಳೆದುಕೊಂಡಿವೆ. ಅಂದು ದಲಿತ ನಾಯಕರಿಗೆ ಜನಾಂಗದ ಹಿತಾಸಕ್ತಿ ಮುಖ್ಯವಾಗಿತ್ತು. ಆದರೆ ಇಂದು ನಾಯಕರಿಗೆ ಸ್ವ ಹಿತಾಸಕ್ತಿಯೇ ಮುಖ್ಯವಾಗಿದೆ’ ಎಂದು ಟೀಕಿಸಿದರು.‘ಬಹುತೇಕ ದಲಿತ ಸಂಘಟನೆಗಳ ನಾಯಕರು ತಮ್ಮ ಸಮುದಾಯ ಗಳಿಂದ ಬಹುದೂರ ಉಳಿದಿರುವುದ ರಿಂದಲೇ ಸಂಘಟನೆಗಳು ನೆಲಕಚ್ಚಲು ಮುಖ್ಯ ಕಾರಣವಾಗಿದೆ’ ಎಂದರು.‘ಏಕಯತೆಯೆಡೆಗೆ ದಲಿತ ಚಳವಳಿ ನಡಿಗೆ’ ಎನ್ನುವ ಪರಿಕಲ್ಪನೆಯೊಂದಿಗೆ ನಾವೆಲ್ಲರೂ ಒಂದಾಗಿ ನಮ್ಮ ಹಕ್ಕು ಗಳನ್ನು ಪಡೆದುಕೊಳ್ಳಲು ಸಂಘಟನೆ ಯನ್ನು ಬಲಗೊಳಿಸಿ ಹೋರಾಟಕ್ಕೆ ಅಣಿಗೊಳ್ಳಬೇಕು. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಯ ಪುಸ್ತಕಗಳನ್ನು ತಳ ಹಂತದ ಕಾರ್ಯಕರ್ತರಿಗೆ ಓದಿಸುವು ದರ ಮುಖಾಂತರ ಅವರನ್ನು ಕ್ರಿಯಾ ಶೀಲಗೊಳಿಸಿ ನಾಯಕರಲ್ಲಿ ಸ್ವಾಭಿ ಮಾನ ಮತ್ತು ಕಿಚ್ಚನ್ನು ಬೆಳೆಸಬೇಕು ಎಂದು ತಿಳಿಸಿದರು.ದಲಿತ ಸಂಘಟನೆಯ ಹಿರಿಯ ಹೋರಾಟಗಾರ ಮುನಿಸುಬ್ಬಯ್ಯ ಮಾತನಾಡಿ, ‘ಜನಾಂಗದ ಹೆಸರು ಹೇಳಿಕೊಂಡು ಜನಾಂಗಕ್ಕೆ ಮೋಸ ಮಾಡುತ್ತಿರುವ ದಲಿತ ನಾಯಕರನ್ನು ದೂರವಿಡಿ’ ಎಂದು ಸಲಹೆ ನೀಡಿದರು.ಸಭೆಯಲ್ಲಿ ದಲಿತ ಮುಖಂಡರಾದ ಸಿ.ಗುರುರಾಜಪ್ಪ, ದೊಡ್ಡಬೆಳವಂಗಲ ಹೋಬಳಿ ಅಪ್ಪಕಾರನ ಹಳ್ಳಿ, ರಾಜ್ಯ ಸಮಿತಿ ಸದಸ್ಯ ಎನ್.ಎಂ.ನಾರಾಯಣ ಸ್ವಾಮಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ, ಲಿಂಗಾಪುರದ ದೊಡ್ಡ ಯ್ಯ, ಹಾದ್ರಿಪುರದ ಮಧು ಚಂದ್ರ, ಚುಂಚೇಗೌಡನ ಹೊಸಹಳ್ಳಿಯ ಚೆನ್ನಿಗರಾಮಯ್ಯ, ಬಾಶೆಟ್ಟಿಹಳ್ಳಿ ಶ್ರೀನಿವಾಸ್, ವೆಂಕಟೇಶ್ ದೊಡ್ಡ ಮಕೂರು, ದಯಾನಂದ್, ಹನುಮನಯ್ಯ, ಆರೂಡಿ ನರಸಿಂಹಮೂರ್ತಿ, ಸಂಜಯನಗರ ಯಲ್ಲಪ್ಪ,  ಶಿಂಪಾಡಿ ಪುರದ ದೇವರಾಜು  ಇದ್ದರು. ಇದೇ ವೇಳೆ ವಿವಿಧ ಹೋಬಳಿಗಳ ಪದಾಧಿ ಕಾರಿಗಳ ಆಯ್ಕೆ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry