ಸೋಮವಾರ, ಜೂನ್ 14, 2021
21 °C

‘ತಲೆಮಾರಿನ ಶ್ರೇಷ್ಠ ಕ್ರಿಕೆಟಿಗ’: ಅಂತಿಮ ಪಟ್ಟಿಯಲ್ಲಿ ಸಚಿನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಕ್ರಿಕೆಟ್‌ ವೆಬ್‌ಸೈಟ್‌ ‘ಇಎಸ್‌ಪಿಎನ್‌ಕ್ರಿಕ್‌ ಇನ್ಫೊ’ ತನ್ನ 20ನೇ ವರ್ಷಾಚರಣೆ ಅಂಗವಾಗಿ ನೀಡುತ್ತಿರುವ ‘ತಲೆಮಾರಿನ ಶ್ರೇಷ್ಠ ಕ್ರಿಕೆಟಿಗ’ (ಕ್ರಿಕೆಟರ್‌ ಆಫ್‌ ದಿ ಜನರೇಷನ್‌) ಪ್ರಶಸ್ತಿ   ಪಟ್ಟಿಯಲ್ಲಿ ಸಚಿನ್‌ ತೆಂಡೂಲ್ಕರ್‌, ಶೇನ್‌ ವಾರ್ನ್‌ ಹಾಗೂ ಜಾಕ್‌ ಕಾಲಿಸ್‌ ಇದ್ದಾರೆ.ಈ ಪ್ರಶಸ್ತಿಯನ್ನು ಶುಕ್ರವಾರ ಇಲ್ಲಿ ನೀಡಲಾಗುತ್ತಿದೆ. ಈಗಾಗಲೇ ಬ್ರಯಾನ್‌ ಲಾರಾ ಹಾಗೂ ಮುತ್ತಯ್ಯ ಮುರಳೀಧರನ್‌ ಅವರು ಈ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಹಾಗಾಗಿ ಸಚಿನ್‌, ವಾರ್ನ್‌ ಹಾಗೂ ಕಾಲಿಸ್‌ ನಡುವೆ ಪೈಪೋಟಿ ಏರ್ಪಟ್ಟಿದೆ. 1993ರಿಂದ 2013ರವರೆಗಿನ ಸಾಧನೆಯನ್ನು ಪರಿಗಣಿಸಲಾಗುತ್ತಿದೆ.24 ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್‌ ಆಡಿರುವ ಸಚಿನ್‌ ಏಕದಿನ ಹಾಗೂ ಟೆಸ್ಟ್‌ನಲ್ಲಿ ಹಲವು ದಾಖಲೆ ಹೊಂದಿದ್ದಾರೆ. ಅತಿ ಹೆಚ್ಚು ರನ್‌, ಅತಿ ಹೆಚ್ಚು ಶತಕ ಇವರ ಹೆಸರಿನ ಲ್ಲಿವೆ. ದಕ್ಷಿಣ ಆಫ್ರಿಕಾದ ಕಾಲಿಸ್‌ ಸದಸ್ಯದ ತಲೆಮಾರಿನ ಶ್ರೇಷ್ಠ ಆಲ್‌ರೌಂಡರ್‌ ಎನಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ವಾರ್ನ್‌ ವಿಶ್ವಕಂಡ ಶ್ರೇಷ್ಠ ಲೆಗ್‌ ಸ್ಪಿನ್ನರ್ ಎನಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.