ಭಾನುವಾರ, ಜನವರಿ 26, 2020
31 °C

‘ತಾತ ಆದ್ರೂ ನನ್ನ ಫಿಟ್ನೆಸ್ ಹೀಗೇ ಇರುತ್ತೆ-’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಭಿಮಾನಿಗಳಲ್ಲಿ ಬಹುನಿರೀಕ್ಷೆ ಮೂಡಿಸಿದ್ದ ಶಿವಣ್ಣ ಫಿಟ್‌ನೆಸ್‌ ಡಿವಿಡಿ ಈಚೆಗೆ ಗರುಡಾ ಮಾಲ್‌ನಲ್ಲಿ ಬಿಡುಗಡೆ ಆಯಿತು. ಇದೇ ಸಂದರ್ಭದಲ್ಲಿ ಹಾಡಿ, ಕುಣಿದು ಜನರನ್ನು ರಂಜಿಸಿದ ಶಿವಣ್ಣ,  ತಮ್ಮ ಮನದ ಮಾತುಗಳನ್ನು ಅಭಿಮಾನಿಗಳ ಮುಂದೆ ತೆರೆದಿಟ್ಟರು.‘ಮಗಳ ಮದುವೆ ಕಾಲ ಹತ್ತಿರವಾಗುತ್ತಿದೆ. ನಾನು ಶೀಘ್ರವೇ ಮಾವನಾಗುತ್ತೇನೆ. ಮಗದೊಂದು ವರ್ಷಕ್ಕೆ ನಾನು ಅಜ್ಜನೂ ಆಗಿಬಿಡುತ್ತೇನೆ. ಹೌದು, ನನಗೂ ವಯಸ್ಸಾಗ್ತಿದೆ ನಿಜ. ಆದರೆ, ಈ ನಿಮ್ಮ ಶಿವಣ್ಣ ಎಷ್ಟೇ ವಯಸ್ಸಾದ್ರೂ ಹೀಗೆ ಯಂಗ್ ಆಗಿಯೇ ಕಾಣುತ್ತಾ ಇರುತ್ತಾನೆ’ ಎಂದಾಗ ಅಭಿಮಾನಿಗಳು ಮೆಚ್ಚುಗೆಯಿಂದ ಚಪ್ಪಾಳೆ ತಟ್ಟಿದರು.ಡಿವಿಡಿ ಬಿಡುಗಡೆ ಸಮಾರಂಭ ನಿಜಕ್ಕೂ ಅಭಿಮಾನಿಗಳ ಕಾರ್ಯಕ್ರಮವಾಗಿ ಬದಲಾಗಿತ್ತು. ನಟಿ ಹರ್ಷಿಕಾ ಪೂಣಚ್ಚ, ಶಿವಣ್ಣರ ಹಿಟ್ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರೆ, ನಟಿ ಶೀತಲ್ ಶೆಟ್ಟಿ, ಡಾ.ಎಂ ರುಕ್ಮಾಂಗದ ನಾಯ್ಡು, ವಚನಾನಂದ ಸ್ವಾಮೀಜಿ, ನಿರ್ಮಾಪಕ ಮಂಜುನಾಥ್ ಗೌಡ ಮತ್ತು ನಟರಾಜ್ ಗೌಡ ಉಪಸ್ಥಿತರಿದ್ದರು. ಅಂದಹಾಗೆ, ಆನಂದ್ ಆಡಿಯೋ ಸಹಯೋಗದಲ್ಲಿ ಸತ್ವ ಮೀಡಿಯಾ ಈ ಡಿವಿಡಿಯನ್ನು ಹೊರತಂದಿದೆ.

ಪ್ರತಿಕ್ರಿಯಿಸಿ (+)