‘ತಿಥಿ’ಗೆ ಮತ್ತೊಂದು ಗೌರವ

7

‘ತಿಥಿ’ಗೆ ಮತ್ತೊಂದು ಗೌರವ

Published:
Updated:

ಮುಂಬೈ (ಪಿಟಿಐ): ಕನ್ನಡ ಚಲನಚಿತ್ರ ‘ತಿಥಿ’ 19ನೇ ಶಾಂಘೈ ಅಂತರರಾಷ್ಟ್ರೀಯ ಚಿತ್ರೋತ್ಸವದ ‘ಏಷ್ಯಾ ಹೊಸ ಪ್ರತಿಭೆ ಪ್ರಶಸ್ತಿ’ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಮತ್ತು ಅತ್ತುತ್ತಮ ಕಥೆ ಪ್ರಶಸ್ತಿಗಳನ್ನು ಗೆದ್ದಿದೆ.ರಾಮ್‌ ರೆಡ್ಡಿ ಅವರ ಮೊದಲ ನಿರ್ದೇಶನದ ಸಿನಿಮಾವಾದ ‘ತಿಥಿ’, ಶಾಂಘೈ ಸಿನಿಮೋತ್ಸವಕ್ಕೆ ಆಯ್ಕೆಯಾದ ಮತ್ತು ಪ್ರದರ್ಶನಗೊಂಡ ಭಾರತದ ಏಕೈಕ ಚಿತ್ರವಾಗಿತ್ತು.

‘ಭಾರತದಾಚೆ ಏಷ್ಯಾದಲ್ಲಿ ಚಿತ್ರ ಪ್ರದರ್ಶನಗೊಂಡಿದ್ದು ಶಾಂಘೈನಲ್ಲೇ ಮೊದಲು. ಚೀನಾ ಮತ್ತು ಏಷ್ಯಾದ ವಿಭಿನ್ನ ಭಾಗಗಳ ಜನರು ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಕುತೂಹಲವಿತ್ತು.ಚೀನಾ, ಜಪಾನ್‌ ಮತ್ತು ಕೊರಿಯಾದಿಂದ ಬಂದ ತೀರ್ಪುಗಾರರು ಚಿತ್ರವನ್ನು ಬಹಳ ಮೆಚ್ಚಿಕೊಂಡರು’ ಎಂದು ರಾಮ್‌ ರೆಡ್ಡಿ ಸಂತಸ ಹಂಚಿಕೊಂಡಿದ್ದಾರೆ.

‘ಚೀನಾ ಪ್ರೇಕ್ಷಕರ ಪ್ರತಿಕ್ರಿಯೆ ಅಪೂರ್ವವಾಗಿತ್ತು. ‘ತಿಥಿ’ ಚಿತ್ರವನ್ನು ವೈವಿಧ್ಯಮಯ ಪ್ರದೇಶದ ಜನರು ನೋಡಿ ಒಪ್ಪಿಕೊಂಡಿರುವುದನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ಇಲ್ಲಿ ನ ಅನುಭವ ಖುಷಿ ನೀಡಿದೆ’ ಎಂದು ಅವರು ಹೇಳಿದ್ದಾರೆ.‘ಒನ್‌ ನೈಟ್‌ ಓನ್ಲಿ’ (ಚೀನಾ), ‘ಹಾನಾಸ್‌ ಮಿಸೊ ಸೂಪ್‌ (ಜಪಾನ್‌), ಲ್ಯಾಂಡ್‌ ಆಫ್‌ ದಿ ಲಿಟ್ಲ್‌ ಪೀಪಲ್‌ (ಇಸ್ರೇಲ್‌) ಮತ್ತು ‘ಡಿಟೆಕ್ಟಿವ್ ಚೈನಾಟೌನ್‌’ (ಚೀನಾ) ಚಿತ್ರಗಳು ಈ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದವು.ಇದುವರೆಗೂ ಸುಮಾರು 13 ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡಿರುವ ‘ತಿಥಿ’, ಒಟ್ಟು 15 ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry