ಭಾನುವಾರ, ಜೂನ್ 20, 2021
28 °C

‘ತೆಲಂಗಾಣ: ಮೃತರ ಬಂಧುಗಳಿಗೆ ಟಿಕೆಟ್‌ ನೀಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌ (ಪಿಟಿಐ): ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಗಾಗಿ ನಡೆದ ಹೋರಾಟದಲ್ಲಿ ಪ್ರಾಣ ಕಳೆದು­ಕೊಂಡವರ ಕುಟುಂಬದ ಸದಸ್ಯ­ರೊಂದಿಗೆ ಕಾಂಗ್ರೆಸ್‌ ಸಂಸದ ವಿ. ಹನುಮಂತ ರಾವ್‌ ಅವರು ಬುಧವಾರ ಆಯೋಜಿ­ಸಿದ್ದ ‘ಸೌಹಾರ್ದ’ ಸಭೆ ಗೊಂದಲದ ಗೂಡಾಯಿತು.ಉಸ್ಮಾನಿಯಾ ವಿಶ್ವವಿದ್ಯಾಲಯದ  ವಿದ್ಯಾರ್ಥಿಗಳ ಜಂಟಿ ಕಾರ್ಯಕಾರಿ ಸಮಿತಿಯ ಪ್ರತಿನಿಧಿಗಳು ಎಂದು ಹೇಳಿ­ಕೊಂಡ ಕೆಲವರು,  ತೆಲಂಗಾಣ ಹೋರಾಟ­ದಲ್ಲಿ ಮಡಿದವರ ಸಂಬಂಧಿ­ಕರಿಗೆ ಚುನಾವಣೆ­ಯಲ್ಲಿ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸು­ತ್ತಿದ್ದಂತೆ ಸಭೆಯಲ್ಲಿ  ಗೊಂದಲದ ವಾತಾವರಣ ನಿರ್ಮಾಣವಾಯಿತು.ಸಭೆ ಆರಂಭವಾಗುತ್ತಿದ್ದಂತೆಯೇ ಸ್ಥಳಕ್ಕೆ ನುಗ್ಗಿದ ಯುವಕರ ತಂಡ­ವೊಂದು, ತಮ್ಮ ಬೇಡಿಕೆಗಳನ್ನು ಪ್ರಸ್ತಾಪಿಸಿ ಘೋಷಣೆ ಕೂಗಿ­ದರು. ಸಂಸದ ಹನು­ಮಂತ­ರಾವ್‌ ವಿದ್ಯಾರ್ಥಿ­ಗಳ ಜೊತೆ ವಾಗ್ವಾದವನ್ನೂ ನಡೆಸಿ­ದರು. ಆದರೆ ಇತರ ಸಂಸದರು ಹಾಗೂ ಕಾಂಗ್ರೆಸ್‌ ನಾಯಕರು ಈ ಘಟನೆಗೆ ಮೂಕ ಪ್ರೇಕ್ಷಕ­ರಾದರು.ನಿಗದಿತ ಅವಧಿಗಿಂದ ಎರಡು ಗಂಟೆ ತಡವಾಗಿ ಸ್ಥಳಕ್ಕೆ ಕೇಂದ್ರ ಸಚಿವ ಜೈರಾಂ ರಮೇಶ್‌ ಬಂದರಾದರೂ, ಆವಾಗ ಗೊಂದಲ ನಿಯಂತ್ರಣಕ್ಕೆ ಬಂದಿತ್ತು.

ಟಿಆರ್‌ಎಸ್‌ ವಿರುದ್ಧ ವಾಗ್ದಾಳಿ: ಕಾಂಗ್ರೆಸ್‌ ನಾಯಕರು ಈ ಸಭೆಯನ್ನು ತೆಲಂಗಾಣ ರಾಷ್ಟ್ರ ಸಮಿತಿ ವಿರುದ್ಧ ಟೀಕಾ ಪ್ರಹಾರ ನಡೆಸಲು ಬಳಸಿ­ಕೊಂಡರು. ಜತೆಗೆ, ಪ್ರತ್ಯೇಕ ತೆಲಂಗಾಣ ರಚನೆಗೆ ಕಾಂಗ್ರೆಸ್‌ ಕಾರಣ ಎಂದೂ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.