ಶನಿವಾರ, ಜೂನ್ 12, 2021
23 °C

‘ದಂಡೋತಿ ಶಾಖೆ ದೇಶಕ್ಕೆ ಮಾದರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ: ‘ಕೋಲಾರದಿಂದ ಬೀದರ್ ವರೆಗೆ 11 ಜಿಲ್ಲೆಗಳಲ್ಲಿ ತನ್ನ ಕಾರ್ಯ­ಕ್ಷೇತ್ರ ಹೊಂದಿರುವ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ ನಲ್ಲಿ ದೇಶದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ರೈತರಿಗೆ ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ. ಇನ್ನು ಮುಂದೆ ಬ್ಯಾಂಕಿನಿಂದ ಪಡೆ­ಯುವ ಬೆಳೆ ಸಾಲಕ್ಕೆ ಎ.ಟಿ.ಎಂ ಸೌಲಭ್ಯ ಒದಗಿಸಲಾಗವುದು’ ಎಂದು ಬಳ್ಳಾ­ರಿಯಲ್ಲಿರುವ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಪ್ರಧಾನ ಕಚೇರಿ ಯ ಅಧ್ಯಕ್ಷ ಎಂ.ಜಿ ಭಟ್ ಹೇಳಿದರು.ತಾಲ್ಲೂಕಿನ ದಂಡೋತಿ ಗ್ರಾಮದ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ 21ನೇ ವರ್ಷದ ಸ್ವಯಂ ಪ್ರೇರಿತ ಸಾಲ ಮರು ಪಾವತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತರು ಮತ್ತು ಇತರೆ ಗ್ರಾಹಕರಿಗೆ ಅನುಕೂಲ ಮಾಡಿಕೊಡಲೆಂದು ಗುಲ್ಬರ್ಗ ಮತ್ತು ಬೀದರ್ ಜಿಲ್ಲೆಗಳಲ್ಲಿ ತಿಂಗಳೊಳಗೆ 20 ಎ.ಟಿ.ಎಂ ಕೇಂದ್ರಗಳನ್ನು ಆರಂಭಿಸ­ಲಾಗುವುದು’ ಎಂದು ತಿಳಿಸಿದರು.’ಗ್ರಾಮೀಣ ಬ್ಯಾಂಕ್ ಶಾಖಾ ಕಚೇರಿಯಲ್ಲಿ ಬೆಳೆ ಸಾಲ ಅಧಿಕೃತವಾಗಿ ಮಂಜೂರಿಯಾದ ನಂತರ, ರೈತರು ಸಾಲದ ಹಣವನ್ನು ತಾವು ಬಯಸಿದ ನಗರ ಪಟ್ಟಣ, ಸ್ಥಳಗಳಲ್ಲಿ ಪಡೆಯಬ­ಹುದು. ಒಂದು ತಿಂಗಳಲ್ಲಿ ಗ್ರಾಹಕರಿಗೆ ಅನುಕೂಲ ಮಾಡಿಕೊಡಲೆಂದು ಮೊಬೈಲ್ ಮೂಲಕ ಬ್ಯಾಂಕ್ ಸೇವೆ­ಯ ಸೌಲಭ್ಯ ಒದಗಿಸಲಾಗು­ವುದು. ಅದಕ್ಕೆ ಈಗಾಗಲೇ ತಾಂತ್ರಿಕ ಅನು­ಮೋದನೆ ದೊರೆತಿದೆ’ ಎಂದು ಭಟ್ ವಿವರಿಸಿದರು.’ಒಟ್ಟು 11 ಜಿಲ್ಲೆಗಳಲ್ಲಿ 602 ಶಾಖೆಗಳನ್ನು ಹೊಂದಿರುವ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ ನ ವ್ಯವ­ಹಾರ ರೂ,15,500 ಕೋಟಿ­ಯಷ್ಟಿದೆ. ಅದರಲ್ಲಿ ರೂ,6,500 ಕೋಟಿ ಮೊತ್ತದ ಕೃಷಿ ಸಾಲ ನೀಡಲಾಗಿದೆ. 20 ಸಾವಿರ ಮಹಿಳಾ ಸ್ವಸಹಾಯ ಗುಂಪುಗಳಿಗೆ ರೂ,300 ಕೋಟಿ ಸಾಲದ ಸೌಲಭ್ಯ ಒದಗಿಸಲಾಗಿದೆ. ಮರು ಪಾವತಿ ಶೇ.95 ರಿಂದ ಶೇ.96 ರಷ್ಟಿದೆ’ ಎಂದು ಅವರು ಮಾಹಿತಿ ನೀಡಿದರು.ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ನಿರ್ದೇಶಕ ವಿರುಪಾಕ್ಷಪ್ಪ ಗಡ್ಡದ್, ಬ್ಯಾಂಕ್‌ ನ ಗುಲ್ಬರ್ಗ ಮುಖ್ಯ ಕಚೇರಿ ಪ್ರಧಾನ ವ್ಯವಸ್ಥಾಪಕ ಎ.ವಿ ಸುಬ್ಬಾರಾವ್ ಮಾತನಾಡಿದರು. ಬಳ್ಳಾರಿ ಮುಖ್ಯ ವ್ಯವಸ್ಥಾಪಕ ವಿಠಲರಾವ್, ಗುಲ್ಬರ್ಗ ಮುಖ್ಯ ವ್ಯವಸ್ಥಾಪಕ ಸಿ.ಕಾಶಿನಾಥ, ಯಾದಗಿರಿ ಹಿರಿಯ ವ್ಯವಸ್ಥಾಪಕ ಶರಣಪ್ಪ, ದಂಡೋತಿ ಶಾಖಾ ವ್ಯವಸ್ಥಾಪಕ ಸಿ.ಎ ಪಾಟೀಲ್ ಹಾಗೂ ರತಿಕಾಂತ, ಬಿ.ಕೆ ಸ್ವಾಮಿ, ಗ್ರಾಮದ ಪ್ರಮುಖರಾದ ಸಾಬಣ್ಣ ಕೊಳ್ಳಿ, ಬಸವರಾಜ ವಾರದ್, ರಾಜಶೇಖರ ತಿಮ್ಮನಾಕ, ಶಿವಯೋಗಿ ಸಾಹು ಗುಂಡಗುರ್ತಿ, ಉಸ್ಮಾನಸಾಬ್ ಸೌದಾಗರ, ರಸೀದ್ ಪಠಾಣ್, ಡಾ.ದಾವೂದ್ ಪಟೇಲ್ ಮುಂತಾದವರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.