ಗುರುವಾರ , ಜನವರಿ 23, 2020
29 °C

‘ದಾಳಿಂಬೆ ಬೆಳೆಗಾರರಿಗೆ ವಿದರ್ಭ ಮಾದರಿ ಪ್ಯಾಕೇಜ್‌ ನೀಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ:ಅಂಗಮಾರಿ ಬಾಧೆಯಿಂದ ಬೆಳೆ ಹಾಳಾಗಿ ಆರ್ಥಿಕ ಸಂಕಷ್ಟದಲ್ಲಿ­ರುವ ದಾಳಿಂಬೆ ಬೆಳೆಗಾರರಿಗೆ ವಿದರ್ಭ ಮಾದರಿಯಲ್ಲಿ ವಿಶೇಷ ಪ್ಯಾಕೇಜ್ ನೀಡುವಂತೆ ಸಂಸದ ಶಿವರಾಮಗೌಡ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಮಾಡಿದ್ದಾರೆ.ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ನಿಯಮ 377 ರ ಅಡಿಯಲ್ಲಿ ಕೇಂದ್ರ ಸಚಿವರಿಗೆ ಲಿಖಿತವಾಗಿ ಬೇಡಿಕೆ ಸಲ್ಲಿಸಿರುವ ಸಂಸದ, ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ದಾಳಿಂಬೆ ಪ್ರಮುಖ ಬೆಳೆಯಾಗಿದೆ. ಈ ಹಿಂದೆ ಯುರೋಪ್‌ ರಾಷ್ಟ್ರಗಳಿಗೆ ರಫ್ತು ಮಾಡುವಂತಹ ಗುಣಮಟ್ಟ ಹೊಂದಿದ್ದ ದಾಳಿಂಬೆ ಬೆಳೆ ನೀರಿನ ಕೊರತೆ ಮತ್ತು ದುಂಡಾಣು ಅಂಗಮಾರಿ ರೋಗದಿಂದ ಸಂಪೂರ್ಣ ಹಾಳಾಗಿ ₨ 100 ಕೋಟಿ ಹಾನಿ ಸಂಭವಿಸಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.ಮಾಹಿತಿಯ ಪ್ರಕಾರ ಸುಮಾರು 9 ಸಾವಿರ ರೈತರು ವಿವಿಧ ಸಹಕಾರಿ ಬ್ಯಾಂಕುಗಳಲ್ಲಿ ಅಂದಾಜು ₨206 ಕೋಟಿಗಳಷ್ಟು ಸಾಲ ಮಾಡಿರುವುದಾಗಿ ತಿಳಿದುಬಂದಿದೆ.  ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಬೆಳೆಯ­ಲಾಗುತ್ತಿದ್ದ ದಾಳಿಂಬೆಯನ್ನು ಸದ್ಯ ಕೆಲವೇ ರೈತರು ಮಾತ್ರ ದಾಳಿಂಬೆ ಬೆಳೆಯುತ್ತಿದ್ದು, ಬೆಳೆ ಕ್ಷೇತ್ರ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಿದೆ.  ಅಲ್ಲದೇ ಬಹುತೇಕ ರೈತರು ಮತ್ತೆ ದಾಳಿಂಬೆ ಬೆಳೆ ಬೆಳೆಯುವ ಬಗ್ಗೆ ಆಶಾಭಾವನೆಯನ್ನೇ ಕಳೆದುಕೊಂಡಿದ್ದಾರೆ.ಅಲ್ಲದೇ ಬೇರೆ ಬೆಳೆ ಬೆಳೆಯ­ಬೇಕೆಂದರೆ, ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹೂಡಬೇಕಾಗುತ್ತದೆ. ಹಾಗಾಗಿ ಸಂಕಷ್ಟದಲ್ಲಿರುವ ರೈತರು ತೀವ್ರ ತೊಂದರೆಯನ್ನು ಅನುಭವಿಸುತ್ತಿ­ದ್ದಾರೆ. ಹಾಗಾಗಿ ವಿದರ್ಭ ಮಾದರಿ­ಯಲ್ಲಿ ವಿಶೇಷ ಪ್ಯಾಕೇಜ್ ನೀಡುವ ಮೂಲಕ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಧಾವಿಸುವಂತೆ ಸಂಸದ ಶಿವರಾಮಗೌಡ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಎಂದು ಅವರ ಕಚೇರಿ ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)