‘ದೇಶ ಕಟ್ಟುವ ದೇಶೀಯ ಶಿಕ್ಷಣ ನೀಡಿ’

7

‘ದೇಶ ಕಟ್ಟುವ ದೇಶೀಯ ಶಿಕ್ಷಣ ನೀಡಿ’

Published:
Updated:

ಬಾಗಲಕೋಟೆ: ‘ಭಾರತೀಯ ಶಿಕ್ಷಣ ಅಮೆರಿಕಾ ನಿರ್ಮಾಣಕ್ಕೆ ಸಹಾಯಕ­ವಾಗುತ್ತಿದೆಯೇ ಹೊರತು ಭಾರತಕ್ಕೆ ಪ್ರಯೋಜನವಾಗುತ್ತಿಲ್ಲ, ದೇಶ ಕಟ್ಟಲು ಅನುಕೂಲವಾಗುವಂತ ದೇಶೀಯ ಶಿಕ್ಷಣವನ್ನು ನೀಡುವ ಮೂಲಕ ನಮ್ಮ ಯುವ ಜನತೆ ದೇಶದಲ್ಲೇ ಉಳಿಯುವಂತೆ ಮಾಡ­ಬೇಕಿದೆ’ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಪಾಟೀಲ ಹೇಳಿದರು.ಬಾಗಲಕೋಟೆ ನಗರದ ಬಸವೇಶ್ವರ ವಿದ್ಯಾವರ್ಧಕ ಸಂಘದ ವಿಜ್ಞಾನ ಮಹಾವಿದ್ಯಾಲಯ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಆಶ್ರಯ­ದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಪಾಶ್ಚಿಮಾತ್ಯ ದೇಶಕ್ಕಿಂತ ಉತ್ಕೃಷ್ಟ ಜ್ಞಾನ, ಪ್ರತಿಭೆ, ನೈಪುಣ್ಯ, ಕೌಶಲ ಹೊಂದಿರುವ ಭಾರತೀಯರು ಕೀಳ­ರಿಮೆ ತೊರೆಯ­ಬೇಕು, ಇಂಗ್ಲಿಷ್‌­ಗಿಂತ ಕನ್ನಡ ಭಾಷೆಗೆ ಹೆಚ್ಚಿನ ಪ್ರತಿಷ್ಠೆ ಇದೆ ಎಂಬು­ದನ್ನು ಮರೆಯ­ಬಾರದು’ ಎಂದರು.‘ಜಾನಪದವನ್ನು ಲಘುವಾಗಿ ಪರಿಗಣಿಸಬಾರದು, ಜಾನಪದದಲ್ಲಿ ಜೀವನದ ಸತ್ವ ಅಡಗಿದೆ, ಜಾನಪದ ಬದುಕಿನ ಮೌಲ್ಯವನ್ನು ಒಳ­ಗೊಂಡಿದೆ’ ಎಂದು ಹೇಳಿದರು. ‘ಜಾನಪದ ನಾಟಕವಾದ ‘ಸಂಗ್ಯಾ­ಬಾಳ್ಯ’ ಬ್ರಿಟಿಷ್‌ ಸರ್ಕಾರ­ವನ್ನೇ ನಡುಗಿ­ಸಿತು, ಹೆದರಿದ ಬಿ್ರಟಿಷ್‌ ಸರ್ಕಾರ ನಾಟಕ ಪ್ರದರ್ಶನ­ವನ್ನೇ ರದ್ದುಗೊಳಿಸಿತು. ಆದರೂ ನಮ್ಮ ಜನಪದರು ನಾಟಕವನ್ನು ಕದ್ದು­ಮುಚ್ಚಿ ಆಡುತ್ತಿದ್ದರು’ ಎಂದರು.‘ಜನ ಜೀವನಕ್ಕೆ ಉಪಯುಕ್ತ­ವಾಗು­ವಂತಹ ಸಾಹಿತ್ಯ ಹುಟ್ಟಬೇಕು’ ಎಂದು ಕಂಬಾರ ಹೇಳಿದರು. ‘ಒಂದು ಶತಮಾನದಿಂದ ಅರ್ಧ ಕರ್ನಾಟಕಕ್ಕೆ ಶಿಕ್ಷಣವನ್ನು ನೀಡುತ್ತಿ­ರುವ ಬಸವೇಶ್ವರ ವಿದ್ಯಾವರ್ಧಕ ಸಂಘದ ಶಿಕ್ಷಣ ಸೇವಾ ಕಾರ್ಯ ಶ್ಲಾಘ­ನೀಯ’ ಎಂದರು.ಅಭಿನಂದನಾ ಭಾಷಣ ಮಾಡಿದ ಸಾಹಿತಿ ಡಾ.ಮನು ಬಳಿಗಾರ, ‘ಯಾವುದೇ ಪಂಥಕ್ಕೆ ಸೇರದೇ ಸಾಹಿತ್ಯದ ಮೂಲಕ ಅನ್ಯಾಯವನ್ನು ಪ್ರತಿಭಟಿಸುವ ಮೂಲಕ, ನೊಂದ­ವರ ಮತ್ತು ತುಳಿತಕ್ಕೆ ಒಳಗಾದವರ ಧ್ವನಿಯಾದ ಕಂಬಾರ ಅವರು ಕೇವಲ ಜಾನಪದ ಸಾಹಿತಿಯಲ್ಲ, ಬಂಡಾಯ ಸಾಹಿತಿಯೂ ಹೌದು’ ಎಂದು ವಿಶ್ಲೇಷಿಸಿದರು.ಬಿವಿವಿ ಸಂಘದ ಕಾರ್ಯಾಧ್ಯಕ್ಷ  ವೀರಣ್ಣ ಚರಂತಿಮಠ, ಕಂಬಾರರನ್ನು ಅಭಿನಂದಿಸಿ, ಸನ್ಮಾನಿಸಿ­ದರು. ಬಿವಿವಿ ಸಂಘದ ಗೌರವ ಕಾರ್ಯ­ದರ್ಶಿ ಮಹೇಶ ಅಥಣಿ, ಅಶೋಕ ಎಂ ಸಜ್ಜನ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ. ವಿಜಯ­ಕುಮಾರ ಕಟಗಿಹಳ್ಳಿಮಠ, ಪ್ರಾಚಾರ್ಯ ಡಾ.ಎಸ್‌.ಸಿ. ದಾನ­ರಡ್ಡಿ, ಸಿದ್ಧರಾಮ ಶಿರೋಳ, ಅಬ್ಬಾಸ ಮೇಲಿನಮನಿ, ಡಾ.ಬಾಳಾ­ಸಾಹೇಬ ಲೋಕಾಪುರ ಮತ್ತಿತರರು ಉಪಸ್ಥಿತರಿದ್ದರು.ಹಾಡು: ಸಂಗೀತ ಉಪನ್ಯಾಸಕ ಸಿದ್ದ­ರಾಮ ಮಠಪತಿ ಅವರು ಕಂಬಾರ ವಿರಚಿತ ‘ಏ ಕುರುಬರಣ್ಣ ಕಾಪಾಡೊ ಕುರಿಗಳನ್ನ’ ಎಂಬ ಜಾನಪದ ಗೀತೆ­ಹಾಗೂ ಕಂಬಾರ ಅವರು ‘ಮಿಂಚು ಹುಳ’ ಗೀತೆಯನ್ನು ಹಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry