‘ದೇಶ ವಿಭಜನೆಗೆ ಅವಕಾಶ ನೀಡಬೇಡಿ’

7

‘ದೇಶ ವಿಭಜನೆಗೆ ಅವಕಾಶ ನೀಡಬೇಡಿ’

Published:
Updated:

ಹುಬ್ಬಳ್ಳಿ: ‘ಒಗ್ಗಟ್ಟಿನ ಕೊರತೆ ಮತ್ತು ಉದಾಸೀನ ಭಾವದಿಂದಾಗಿ ದೇಶದ ಕೆಲವು ಭಾಗಗಳನ್ನು ಕಳೆದುಕೊಂಡ ನಾವು ಮತ್ತೊಮ್ಮೆ ಇಂಥ ಪ್ರಸಂಗ ಎದು­ರಾಗಲು ಬಿಡಬಾರದು’ ಎಂದು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಅಂತರ­ರಾಷ್ಟ್ರೀಯ ಪ್ರಧಾನ ಕಾರ್ಯ­ದರ್ಶಿ ಚಂಪಕರಾಯಿ ಹೇಳಿದರು.ವಿಎಚ್‌ಪಿ ಸ್ವರ್ಣ ಜಯಂತಿ ಅಂಗ­ವಾಗಿ ನಗರದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತ­ನಾಡಿದ ಅವರು ರಾಜಕೀಯ ಮತ್ತು ಧಾರ್ಮಿಕ ಕಾರಣಗಳಿಂದ ದೇಶ ವಿಭ­ಜನೆ ಆಗ­ದಂತೆ ಎಲ್ಲರೂ ಕಾಳಜಿ ವಹಿಸ­ಬೇಕಾ­ಗಿದೆ ಎಂದರು. ‘ನಾವೆಲ್ಲರೂ ಭಾರತೀ­ಯರು.ನಮ್ಮಲ್ಲಿ ಭೇದ ಇರಬಾರದು. ಭೇದ ಭಾವ ಮೂಡಿದರೆ ಹೊರಗಿನ ಶಕ್ತಿ­ಗಳಿಗೆ ದೇಶದ ಮೇಲೆ ಆಕ್ರಮಣ ಮಾಡಲು ದಾರಿಮಾಡಿಕೊಟ್ಟಂತಾ­ಗುತ್ತದೆ’ ಎಂದು ಹೇಳಿದ ಚಂಪಕ­ರಾಯಿ ‘ಭ್ರಷ್ಟಾಚಾರ ದೇಶಕ್ಕೆ ಅಂಟಿದ ದೊಡ್ಡ ಶಾಪ. ಬೇರೆಯವರ ಹಣ ಮತ್ತು ಸಂಪತ್ತನ್ನು ನಗಣ್ಯ ಮಾಡುವ ಪ್ರವೃತ್ತಿ ಬೆಳೆಯಬೇಕಾಗಿದೆ’ ಎಂದರು.‘ಅಯೋಧ್ಯೆ­ಯಲ್ಲಿ ರಾಮ­ಜನ್ಮ­ಭೂಮಿ­ಯನ್ನು ಉಳಿಸಲು ವಿಶ್ವಹಿಂದೂ ಪರಿಷತ್‌ ದೊಡ್ಡ ಹೋರಾಟವನ್ನೇ ಹಮ್ಮಿ­ಕೊಂಡು ಯಶಸ್ವಿಯಾಗಿದೆ. ಆದರೆ ಈಗ ಪೂರ್ಣ ಅಯೋಧ್ಯೆ ಹಿಂದೂ­ಗಳಿಗೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಹೋರಾಟ ಮುಂದುವರಿದಿದೆ. ಅಯೋಧ್ಯೆ ವಿಷಯದಲ್ಲಿ ಸಮಸ್ತ ಭಾರ­ತೀ­­ಯರು ಒಂದಾಗಬೇಕಾಗಿದೆ’ ಎಂದು ಅವರು ಸಲಹೆ ನೀಡಿದರು.‘ರಾಜ್ಯಭಾರ ಮಾಡುವುದು ರಾಜರ ಕೆಲಸ. ಅವರಿಗೆ ತೆರಿಗೆಯನ್ನು ನೀಡು­ವುದು ಜನರ ಕರ್ತವ್ಯ. ಆದರೆ ಇಸ್ಲಾಂ ಆಡಳಿತಗಾರರು ಭಾರತದಲ್ಲಿ ಸಾವಿ­ರಾರು ಹಿಂದೂ ದೇವಾಲಯ­ಗಳನ್ನು ಕೆಡವಿದ್ದಾರೆ. ಇದರ ಹಿಂದಿರುವ ಉದ್ದೇಶವೇನೆಂದು ಅರ್ಥ­ವಾಗುತ್ತಿಲ್ಲ. ಬಾಬರ್‌ ಅಯೋಧ್ಯೆಯಲ್ಲಿ ರಾಮ­ಮಂದಿ­ರ­­ವನ್ನು ಕೆಡವಿದ ವಿಷಯ ವೈಜ್ಞಾ­ನಿಕವಾಗಿ ದೃಢಪಟ್ಟಿದೆ. ಇಲ್ಲಿ ಕೊನೆಗೂ ಹಿಂದೂಗಳಿಗೆ ಜಯ ಸಿಕ್ಕಿದೆ’ ಎಂದು ಅವರು ಹೇಳಿದರು.ವಿಎಚ್‌ಪಿ ಪ್ರಾಂತ ಉಪಾಧ್ಯಕ್ಷ ರೇವಣ­ಸಿದ್ದಪ್ಪ, ನಗರ ಅಧ್ಯಕ್ಷ ಹಿತೇಶ ಮೋದಿ, ಸಹ ಕಾರ್ಯದರ್ಶಿ ಶಿವಯ್ಯ ಹಿರೇಮಠ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry