‘ಧರ್ಮದಿಂದ ಸಮಾಜದಲ್ಲಿ ಶಾಂತಿ’

7

‘ಧರ್ಮದಿಂದ ಸಮಾಜದಲ್ಲಿ ಶಾಂತಿ’

Published:
Updated:

ಚಿತ್ತಾಪುರ: ಇಂದು ಸಮಾಜದಲ್ಲಿ ಕೊಲೆ, ಸುಲಿಗೆ, ಅತ್ಯಾಚಾರ, ಅನ್ಯಾಯ, ಮೋಸ, ವಂಚನೆ, ಕೌಟುಂಬಿಕ ಕಲಹ, ಆಸ್ತಿಗಾಗಿ ಕಾದಾಟ, ಅಧರ್ಮ ಹೆಚ್ಚಾಗಿದೆ. ಸನ್ನಡತೆ, ಉತ್ತಮ ಸಂಸ್ಕೃತಿ, ಸಂಸ್ಕಾರ, ನೈತಿಕತೆಗಳನ್ನು ರೂಢಿಸಿಕೊಂಡು ಧರ್ಮ ಮಾರ್ಗದಲ್ಲಿ ಸಾಗಿದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಡಿ.ಪಿ ನಾಯಕ ಹೇಳಿದರು.ಅವರು ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಅಡತ್ ವ್ಯಾಪಾರಿಗಳು ಗಣೇಶ ಪ್ರತಿಮೆ ಸ್ಥಾಪಿಸಿದ್ದು, ಅದರ ಅಂಗವಾಗಿ ಭಾನುವಾರ ರಾತ್ರಿ ಏರ್ಪಡಿಸಿದ್ದ ಸಂಗೀತ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.’ಸಮಾಜದಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆ ನಶಿಸುತ್ತಿವೆ. ಎಲ್ಲಡೆ ಸ್ವಾರ್ಥ, ಅಧಿಕಾರ ಮತ್ತು ಹಣದ ಅಹಂಕಾರ ಹೆಚ್ಚಾಗಿದೆ. ಇಂದಿನ ಸಮಾಜದ ಸ್ಥಿತಿ ನೋಡಿದರೆ ದ್ವಾಪರಯುಗ ಮತ್ತು ತ್ರೇತಾಯುಗ ಮರುಕಳಿಸಬೇಕೆನಿಸುತ್ತದೆ. ಅಂದು ಸಮಾಜದಲ್ಲಿ, ಜನರಲ್ಲಿ, ಕುಟುಂಬದಲ್ಲಿ ಇದ್ದ ಧರ್ಮ, ಸತ್ಯ, ನ್ಯಾಯ, ವಿನಯತೆ, ಗೌರವ, ಘನತೆ ಮತ್ತು ಪರಸ್ಪರ  ಸಾಮರಸ್ಯ ಇಂದು ಮಾಯವಾಗಿವೆ’ ಎಂದು ಕಳವಳ ವ್ಯಕ್ತಪಡಿಸಿದ ಅವರು, ’ಸತ್ಯ, ನ್ಯಾಯ, ಶುದ್ಧ ಭಾವನೆ, ಉನ್ನತ ನೈತಿಕತೆ, ಒಳ್ಳೆಯ ನಡತೆ, ಮನಸ್ಸಿನ ಶುದ್ದೀಕರಣ, ಸಚ್ಯಾರಿತ್ರ್ಯದಿಂದ ವರ್ತಿಸುವುದೇ ಧರ್ಮ’ ಎಂದು ಪ್ರತಿಪಾದಿಸಿದರು.ಕಂಬಳೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಸೋಮಶೇಖರ ಶಿವಾಚಾರ್ಯ ಸಾನಿಧ್ಯ ವಹಿಸಿದ್ದರು. ವೀರಾರೆಡ್ಡಿ ಭಾಸರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ದಿಮೆದಾರ ಸತ್ಯನಾರಾಯಣ ಬಜಾಜ್, ಜಿನಾಗರೆಡ್ಡಿ ಪಾಟೀಲ್ ಕರದಾಳ, ವಕೀಲ ಚಂದ್ರಶೇಖರ ಅವಂಟಿ, ಸೋಮಶೇಖರ ಪಾಟೀಲ ಬೆಳಗುಂಪಾ, ಸರ್ಕಲ್ ಇನ್ಸಪೆ್ಪೆಕ್ಟರ್ ಚಂದ್ರಕಾಂತ ಪೂಜಾರಿ, ಚಂದ್ರಶೇಖರ ಮೋಟ್ನಳ್ಳಿ, ಸೋಮಶೇಖರ ಯದ್ಲಾಪುರ ವೇದಿಕೆಯಲ್ಲಿದ್ದರು.ಚಂದ್ರಶೇಖರ ತೆಂಗಳಿ, ಶೈಲೇಂದ್ರ  ಪಾಟೀಲ್, ಅನೀಲಕುಮಾರ ವಡ್ಡಡಗಿ, ಅಣ್ಣಾರಾವ ಪಾಟೀಲ್, ನಾಗಣ್ಣ ಯರಗಲ್ ದಂಡೋತಿ, ಜಾವೀದ್ಶೇಠ್ ಇದ್ದರು. ಅಂಬರೀಶ ಸುಲೇಗಾಂವ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry